ಮಂಗಳೂರು:ಉಜಿರೆಯಲ್ಲಿ 8 ವರ್ಷದ ಬಾಲಕನ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪಹರಣಕಾರರು ಬಾಲಕನ ಬಿಡುಗಡೆಗೆ ಬರೋಬ್ಬರಿ 17 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದಾರೆಂದು ತಿಳಿದುಬಂದಿದೆ.
ಮಾಜಿ ಸೈನಿಕ ಶಿವನ್​ ಪುತ್ರ ಬಿಜೋಯ್ ಎಂಬುವರ ಮಗ ಅನುಭವ್​ನನ್ನು ಅಪಹರಿಸಲಾಗಿದೆ. ಮಾಜಿ ಸೈನಿಕ ಶಿವನ್ ಓರ್ವ ದೊಡ್ಡ ಉದ್ಯಮಿ. ಹಣಕಾಸಿನ ವ್ಯವಹಾರದಲ್ಲಿ ವ್ಯಾಜ್ಯ ಇದ್ದವರಿಂದ ಕಿಡ್ನಾಪ್ ಮಾಡಿರುವ ಸಾಧ್ಯತೆ ಇದ್ದು, ಅಪಹರಣಕಾರರಿಗಾಗಿ ಪೊಲೀಸರು ಸದ್ಯ ಎಲ್ಲಾ ಕಡೆ ಕಾರ್ಯಾಚರಣೆ ಮಾಡುತ್ತಿದ್ದಾರೆ.
ಇದನ್ನೂ ಓದಿ:ಕಾರ್ ಕಳಿಸ್ತೀನಿ ಪ್ಲೀಸ್ ಬನ್ನಿ: ಮುಳ್ಳಿನಬೇಲಿ ಹಾಕಿದ್ದವರಿಂದಲೇ ಸ್ವಾಗತ | ಮತಕ್ಕಾಗಿ ಡಿಮಾಂಡ್
ನಿನ್ನೆ ಸಂಜೆ 6.30ರ ಸುಮಾರಿಗೆ ಅನುಭವ್​ನನ್ನು ಹಳದಿ ಪ್ಲೇಟ್ ನಂಬರ್​ನ ಇಂಡಿಕಾ ಕಾರ್​ನಲ್ಲಿ ಅಪಹರಿಸಲಾಗಿದೆ. ಬಿಜೋಯ್ ಹಾರ್ಡ್​ವೇರ್ ವ್ಯವಹಾರಸ್ಥರಾಗಿದ್ದಾರೆ. ನಿನ್ನೆ ಬಿಜೋಯ್ ಪತ್ನಿ ಸರಿಯಾ ಬಿಜೋಯ್ ಗೆ ಕರೆ ಮಾಡಿ 17 ಕೋಟಿ ರೂಪಾಯಿಗೆ ಅಪಹರಣಕಾರರು ಬೇಡಿಕೆ ಇಟ್ಟಿದ್ದಾರೆ.
ಚಾರ್ಮಾಡಿ ಅರಣ್ಯ ಪ್ರದೇಶದಲ್ಲಿ ಕಿಡ್ನಾಪರ್ಸ್ ಇರುವ ಶಂಕೆ ವ್ಯಕ್ತವಾಗಿದ್ದು, ಎರಡು ಪೊಲೀಸ್ ತಂಡಗಳಿಂದ ಶೋಧ ಕಾರ್ಯ ನಡೆಯುತ್ತಿದೆ. ಬೆಳ್ತಂಗಡಿ ತಾಲೂಕಿನಿಂದ ಹೊರ ಹೋಗುವ ದಾರಿಗಳಲ್ಲಿ ನಾಕಾಬಂದಿ ಇರಿಸಲಾಗಿದೆ. ಚಾರ್ಮಾಡಿ, ಕೊಟ್ಟಿಗೆಹಾರ ಪ್ರದೇಶದಲ್ಲಿ ಪೊಲೀಸ್ ಬಂದೋಬಸ್ತ್​ ಮಾಡಲಾಗಿದೆ.(ದಿಗ್ವಿಜಯ ನ್ಯೂಸ್​)
ಇದನ್ನೂ ಓದಿ:ಹೊಸವರ್ಷಕ್ಕೆ ಎಸ್ಸೆಸ್ಸೆಲ್ಸಿ-ಪಿಯು ಶುರು: ಜ.1ಕ್ಕೆ 10, 12, ಜ.15ರಂದು 9, 11ನೇ ತರಗತಿ ಪ್ರಾರಂಭ; ಸಿಎಂ ಸಮ್ಮತಿ ಬಾಕಿ
ಹೊಸವರ್ಷಾಚರಣೆ ಆಸೆಯಿಟ್ಟುಕೊಂಡಿದ್ದವರಿಗೆ ಸರ್ಕಾರದ ಶಾಕ್​: ಮಾರ್ಗಸೂಚಿಯಲ್ಲಿ ಕಠಿಣ ನಿಯಮಗಳು

ಅಲ್ಲಿದೆ ನಮ್ಮನೆ: ಪರಭಾಷೆಗಳಲ್ಲಿ ಬಿಜಿಯಾದ ಕನ್ನಡತಿಯರು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + seven =
Remember me
