ಬೆಂಗಳೂರು:ಪ್ರತಿಷ್ಠಿತ ಆಸ್ಪತ್ರೆಗಳ ನಕಲಿ ವೆಬ್​ಸೈಟ್ ಸೃಷ್ಟಿಸಿ ಕಿಡ್ನಿ ದಾನ ಹಾಗೂ ಮಾರಾಟ ಮಾಡುವವರಿಗೆ 4 ಕೋಟಿ ರೂ. ನೀಡುವುದಾಗಿ ನಂಬಿಸಿ ವಿವಿಧ ಶುಲ್ಕಗಳ ಹೆಸರಿನಲ್ಲಿ ಸಾರ್ವಜನಿಕರಿಂದ ಲಕ್ಷಾಂತರ ರೂ. ಪಡೆದು ವಂಚಿಸುತ್ತಿದ್ದ ನೈಜೀರಿಯಾ ಮೂಲದ ಮೂವರು ಆಗ್ನೇಯ ವಿಭಾಗ ಸಿಇಎನ್ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಹೆಗಡೆನಗರದ ಎಚ್​ಬಿಆರ್ ಬಡಾವಣೆಯ ಮಿರಾಕಲ್ ಅಲಿಯಾಸ್ ಮಿಮಿ (28), ಸೋವಾಹ್ ಕಾಲಿನ್ಸ್ ನಿ (32), ಮ್ಯಾಥ್ಯೂ ಇನೋಸೆಂಟ್ ಅಲಿಯಾಸ್ ಪಾಲ್ (38) ಬಂಧಿತರು. ಆರೋಪಿ ಗಳಿಂದ ಮೊಬೈಲ್, ಲ್ಯಾಪ್​ಟಾಪ್ ಜಪ್ತಿ ಮಾಡಲಾಗಿದೆ. ಆರೋಪಿಗಳು ಸಾಗರ್, ಬ್ಯಾಪ್ಟಿಸ್ಟ್, ಕಾವೇರಿ ಆಸ್ಪತ್ರೆ ಸೇರಿ 10ಕ್ಕೂ ಅಧಿಕ ಪ್ರತಿಷ್ಠಿತ ಆಸ್ಪತ್ರೆಗಳ ನಕಲಿ ವೆಬ್​ಸೈಟ್ ತೆರೆದಿದ್ದರು. ನಮ್ಮ ಆಸ್ಪತ್ರೆಯಲ್ಲಿ ಕಿಡ್ನಿ ಕಸಿ ಮಾಡಲು ಕಿಡ್ನಿ ದಾನಿಗಳ ಅವಶ್ಯಕತೆಯಿದ್ದು, ಕಿಡ್ನಿದಾನ, ಮಾರಾಟ ಮಾಡುವವರಿಗೆ ಮುಂಗಡವಾಗಿ 2 ಕೋಟಿ ರೂ. ಹಾಗೂ ಕಿಡ್ನಿ ಕಸಿ ಪ್ರಕ್ರಿಯೆ ಮುಗಿದ ಬಳಿಕ ಮತ್ತೆ 2 ಕೋಟಿ ರೂ. ನೀಡುತ್ತೇವೆ ಎಂದು ಜಾಹೀರಾತು ಹಾಕಿ ಮೊಬೈಲ್ ನಂಬರ್ ಉಲ್ಲೇಖಿಸುತ್ತಿದ್ದರು. ಇದನ್ನು ಗಮನಿಸಿ 4 ಕೋಟಿ ರೂ. ಆಸೆಗಾಗಿ ಕಿಡ್ನಿ ದಾನ ಹಾಗೂ ಮಾರಾಟ ಮಾಡಲು ಹಲವರು ಆರೋಪಿಗಳನ್ನು ಸಂರ್ಪಸಿದ್ದರು.
ಅವರಿಂದ ಮುಂಗಡವಾಗಿ ನೋಂದಣಿ ಶುಲ್ಕ, ಮೆಡಿಕಲ್ ಶುಲ್ಕ, ವೈದ್ಯರ ಶುಲ್ಕ ಸೇರಿ 5 ಸಾವಿರ ರೂ.ನಿಂದ ಲಕ್ಷಾಂತರ ರೂ.ವರೆಗೆ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿಸಿಕೊಳ್ಳುತ್ತಿದ್ದರು. ಹಣ ಕೈ ಸೇರುತ್ತಿದ್ದಂತೆ ಮೊಬೈಲ್​ನಿಂದ ಸಿಮ್ ತೆಗೆದು ಮತ್ತೆ ಸಂಪರ್ಕಕ್ಕೆ ಸಿಗುತ್ತಿರಲಿಲ್ಲ.
ಅನಧಿಕೃತ ವಾಸ:ಆರೋಪಿಗಳು ವಿದ್ಯಾರ್ಥಿ ವೀಸಾ ಮೂಲಕ ಭಾರತಕ್ಕೆ ಬಂದಿದ್ದು, ಪಾಸಪೋರ್ಟ್​ನ ಅವಧಿ ಮುಗಿದಿದ್ದರೂ ಅನಧಿಕೃತವಾಗಿ ನಗರದ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದರು. ವಂಚನೆಯಿಂದ ಬಂದ ಹಣದಲ್ಲಿ ಮೋಜಿನ ಜೀವನ ನಡೆಸುತ್ತಿದ್ದರು.
ದೂರು ನೀಡಿ:ಈ ಜಾಲದ ಮೋಸಕ್ಕೆ ಸಿಲುಕಿ ಹಣ ಕಳೆದುಕೊಂಡಿದ್ದಲ್ಲಿ ಸಂಬಂಧಿಸಿದ ಪೊಲೀಸ್ ಠಾಣೆಗೆ ದೂರು ನೀಡುವಂತೆ ಪೊಲೀಸ್ ಅಧಿಕಾರಿಗಳು ಸಲಹೆ ನೀಡಿದ್ದಾರೆ.
ಜಯನಗರದಲ್ಲಿರುವ ಸಾಗರ್ ಆಸ್ಪತ್ರೆಯ ನಕಲಿ ವೆಬ್​ಸೈಟ್ ಸೃಷ್ಟಿಸಿ ಇದೇ ಮಾದರಿಯಲ್ಲಿ ವಂಚಿಸಲು ಯತ್ನಿಸಿದ್ದರು. ಸಾರ್ವಜನಿಕರೊಬ್ಬರು ಆಸ್ಪತ್ರೆಗೆ ಭೇಟಿ ನೀಡಿ ಕಿಡ್ನಿ ದಾನ ಮಾಡಿದರೆ 4 ಕೋಟಿ ರೂ. ಕೊಡುವುದಾಗಿ ಜಾಹೀರಾತು ಹಾಕಿರುವ ಕುರಿತು ವಿಚಾರಿಸಿದ್ದರು. ಆಸ್ಪತ್ರೆ ಸಿಬ್ಬಂದಿ ಈ ವಿಚಾರವನ್ನು ಮೇಲಧಿಕಾರಿಗಳ ಗಮನಕ್ಕೆ ತಂದು ಪರಿಶೀಲಿಸಿದಾಗ ವಂಚನೆ ಜಾಲದ ಸುಳಿವು ಸಿಕ್ಕಿತ್ತು. ಆಸ್ಪತ್ರೆ ನಿರ್ದೇಶಕ ಡಾ. ಮಹೇಂದ್ರ ಕುಮಾರ್ ಆಗ್ನೇಯ ವಿಭಾಗದ ಸೈಬರ್ ಕ್ರೖೆಂ ಠಾಣೆಗೆ ದೂರು ನೀಡಿದ್ದರು. ಆರೋಪಿಗಳು ಸೃಷ್ಟಿಸಿದ್ದ ನಕಲಿ ವೆಬ್​ಸೈಟ್​ನಲ್ಲಿ ಉಲ್ಲೇಖಿಸಿರುವ ಮೊಬೈಲ್ ನಂಬರ್, ಸಿಡಿಆರ್ ಕರೆಗಳನ್ನು ಪೊಲೀಸರು ವಿಶ್ಲೇಷಿಸಿದಾಗ ಆರೋಪಿಗಳ ಸುಳಿವು ಸಿಕ್ಕಿತ್ತು.
ವಿಚ್ಛೇದಿತೆ ಜತೆ 4 ವರ್ಷ ಲಿವಿಂಗ್ ಟುಗೆದರ್ ಇದ್ದು, ಮೂರನೇ ಮದ್ವೆ ಮಾಡ್ಕೊಂಡ ಭೂಪ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − five =
Remember me
