ಬೆಂಗಳೂರು:ಆನ್​ಲೈನ್​ನಲ್ಲಿ ಕಿಡ್ನಿ ಮಾರಾಟ ಮತ್ತು ಕಿಡ್ನಿ ಕಸಿ ನೆಪದಲ್ಲಿ ಅಮಾಯಕರಿಗೆ ವಂಚಿಸುತ್ತಿದ್ದ ಮೂವರು ವಿದೇಶಿಗರು ಸೇರಿ 6 ಮಂದಿಯನ್ನು ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ. 260ಕ್ಕೂ ಹೆಚ್ಚು ಮಂದಿಗೆ ವಂಚನೆ ಮಾಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ನೈಜೀರಿಯಾದ ಬೆನಿಮ್ ಸಿಟಿಯ ಯೆಸೆನ್ ಲವ್ಲಿ (29), ಸೂಡಾನ್​ನ ಮೊಹಮ್ಮದ್ ಅಹಮ್ಮದ್ ಇಸ್ಲಾಯಿಲ್ (24), ಮಾರ್ವನ್ (27) ಹಾಗೂ ತ್ರಿಪುರದ ಹಿರೇಂದ್ರ (25), ಕೇಮಿರಂಜನ್ (21), ಜತಿನ್ ಕುಮಾರ್ (25) ಬಂಧಿತರು.
ಬಾಣಸವಾಡಿ, ಕಮ್ಮನಹಳ್ಳಿ ಮತ್ತು ಬೊಮ್ಮನ ಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. 360ಕ್ಕೂ ಹೆಚ್ಚು ಮಂದಿ ಈ ಗ್ಯಾಂಗ್ ಬಲೆಗೆ ಸಿಲುಕಿದ್ದು, 260 ಮಂದಿಯಿಂದ ತಲಾ 40 ಸಾವಿರ ರೂ.ನಿಂದ 1.50 ಲಕ್ಷ ರೂ.ವರೆಗೆ ವಸೂಲಿ ಮಾಡಿ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ ಎಂದು ಪೂರ್ವ ವಿಭಾಗ ಡಿಸಿಪಿ ಡಾ. ಎಸ್. ಡಿ. ಶರಣಪ್ಪ ತಿಳಿಸಿದ್ದಾರೆ.
ಪ್ರತಿಷ್ಠಿತ ಆಸ್ಪತ್ರೆಗಳ ಹೆಸರಲ್ಲಿ ವೆಬ್​ಸೈಟ್:ಆನ್​ಲೈನ್​ನಲ್ಲಿ ಪ್ರತಿಷ್ಠಿತ ಆಸ್ಪತ್ರೆ ಮತ್ತು ವೈದ್ಯರ ಹೆಸರಿನಲ್ಲಿ ವೆಬ್​ಸೈಟ್ ತೆರೆದು ಕಿಡ್ನಿ ಕಸಿ ಶಸ್ತ್ರಚಿಕಿತ್ಸೆ ಸೌಲಭ್ಯ ಮತ್ತು ಕಿಡ್ನಿ ಬೇಕಾಗಿದೆ ಎಂದು ಮೊಬೈಲ್​ನಂಬರ್ ಸಹಿತ ಜಾಹೀರಾತು ಕೊಡುತ್ತಿದ್ದರು. ಕಿಡ್ನಿ ಬೇಕು ಎಂದು ಕರೆ ಮಾಡಿದವರಿಗೆ ಕಸಿ ಶಸ್ತ್ರಚಿಕಿತ್ಸೆ ಮಾಡಿಸುತ್ತೇವೆ.
ಮೊದಲು ರೋಗಿ ಹೆಸರಿನಲ್ಲಿ ವಿಮಾ ಪಾಲಿಸಿ ಮತ್ತು ಹಣ ಠೇವಣಿ ಇಡಬೇಕು ಎಂದು ಹೇಳಿ 40 ಸಾವಿರ ರೂ.ನಿಂದ 1.50 ಲಕ್ಷ ರೂ.ವರೆಗೂ ವಸೂಲಿ ಮಾಡುತ್ತಿದ್ದರು. ಇದೇ ರೀತಿ ಕಿಡ್ನಿ ಮಾರಾಟ ಮಾಡುವುದಾಗಿ ಹೇಳಿ ಮೊಬೈಲ್​ಗೆ ಕರೆ ಮಾಡುವರ ಬಳಿಯೂ ಹಣ ಮತ್ತು ದಾಖಲೆ ಪಡೆಯುತ್ತಿದ್ದರು. ತಮ್ಮ ಬ್ಯಾಂಕ್ ಖಾತೆಗೆ ಹಣ ಜಮೆ ಆಗುತ್ತಿದಂತೆ ಮೊಬೈಲ್ ಸ್ವಿಚ್​ಆಫ್ ಮಾಡಿಕೊಳ್ಳುತ್ತಿದ್ದರು.
ಡಾ. ಎ.ಎಂ. ಶಫೀಕ್​ರಿಂದ ಬಹಿರಂಗ:ತಮ್ಮ ಹೆಸರಿನಲ್ಲಿ ನಕಲಿ ವೆಬ್​ಸೈಟ್, ಇ-ಮೇಲ್ ತೆಗೆದು ವಂಚನೆ ಮಾಡುತ್ತಿದ್ದ ವಿಚಾರ ಬಾಣಸವಾಡಿಯ ಸ್ಪೆಷಲಿಸ್ಟ್ ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕ ಡಾ. ಎ.ಎಂ. ಶಫೀಕ್ ಅವರಿಗೆ ಗೊತ್ತಾಗಿತ್ತು. ಈ ಬಗ್ಗೆ ಅವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಇದನ್ನು ಗಂಭೀರವಾಗಿ ಪರಿಗಣಿಸಿದ ಬಾಣಸವಾಡಿ ಉಪವಿಭಾಗ ಎಸಿಪಿ ಪಿ. ರವಿಪ್ರಸಾದ್ ನೇತೃತ್ವದ ತಂಡ ಆರೋಪಿಗಳು ಕೃತ್ಯಕ್ಕೆ ಬಳಸುತ್ತಿದ್ದ ಮೊಬೈಲ್ ಮತ್ತು ವೆಬ್​ಸೈಟ್ ವಿಳಾಸ, ಐಪಿ ವಿಳಾಸದ ಮೇರೆಗೆ ಬಲೆ ಬೀಸಿ ಬಂಧಿಸಿದೆ. ಅಕ್ರಮ ವಾಸ: ನೈಜೀರಿಯಾದ ಯೆಸೆನ್ ಲವ್ಲಿ, ಸೂಡಾನ್​ನ ಮೊಹಮ್ಮದ್ ಅಹಮ್ಮದ್ ಇಸ್ಲಾಯಿಲ್ ಮತ್ತು ಮಾರ್ವನ್ ಪ್ರವಾಸಿ ವೀಸಾ ಪಡೆದು ಭಾರತಕ್ಕೆ ಬಂದಿದ್ದರು. ಅವಧಿ ಮುಗಿದ ಮೇಲೂ ಅಕ್ರಮವಾಗಿ ನೆಲೆಸಿದ್ದರು. ಇವರ ಬಳಿ ಪಾಸ್​ಪೋರ್ಟ್ ಸಹ ಇಲ್ಲ ಎನ್ನಲಾಗಿದೆ.
ಪ್ರತಿಷ್ಠಿತ ವೈದ್ಯರ ಹೆಸರಿನಲ್ಲಿ ವಂಚನೆ
ಬಂಧಿತ ನೈಜೀರಿಯಾ ಪ್ರಜೆಗಳೇ ಮಾಸ್ಟರ್​ವೆುೖಂಡ್. ಪ್ರತಿಷ್ಠಿತ ಆಸ್ಪತ್ರೆ ಮತ್ತು ವೈದ್ಯರ ಹೆಸರಿನಲ್ಲಿ ನಕಲಿ ವೆಬ್​ಸೈಟ್, ಇ-ಮೇಲ್ ಐಡಿ ತೆರೆದು ಅಮಾಯಕರಿಗೆ ಬಲೆಬೀಸುತ್ತಿದ್ದರು. ಅವರೊಂದಿಗೆ ವ್ಯವಹಾರ ನಡೆಸಿ ಹಣವನ್ನು ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಿಸಿಕೊಂಡು ವಂಚಿಸುತ್ತಿದ್ದರು.
ಬಂಧಿತ ತ್ರಿಪುರದವರು ಕಿಡ್ನಿ ಬೇಕೆಂದು ಅಥವಾ ಮಾರಾಟ ಮಾಡುವುದಾಗಿ ಕರೆ ಮಾಡುತ್ತಿದ್ದ ವ್ಯಕ್ತಿಗಳಿಂದ ಆಧಾರ್, ಪಾಸ್​ಬುಕ್, ಫೋಟೋ ಪಡೆದು ಅವರ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆದು, ನಕಲಿ ಸಿಮ್ ಕಾರ್ಡ್ ಖರೀದಿಸುತ್ತಿದ್ದರು. ಅನ್ಯರಿಗೆ ವಂಚಿಸಲು ಅವನ್ನು ಬಳಸುತ್ತಿದ್ದರು. ಒಬ್ಬರಿಂದ ಹಣ ಸುಲಿಗೆಯಾದ ಮೇಲೆ ಆ ಸಿಮ್ ಮತ್ತು ಬ್ಯಾಂಕ್ ಖಾತೆ ಸ್ಥಗಿತ ಮಾಡುತ್ತಿದ್ದರು. ಬ್ಯಾಂಕ್ ಖಾತೆ ತೆರೆಯುವುದು ಮತ್ತು ಸಿಮ್ ಖರೀದಿ ಜವಾಬ್ದಾರಿ ಇವರದ್ದಾಗಿತ್ತು.
ಕಿಡ್ನಿ ಮಾರಾಟ ಗ್ಯಾಂಗ್ ಜತೆ 360ಕ್ಕೂ ಹೆಚ್ಚು ಮಂದಿ ಸಂಪರ್ಕದಲ್ಲಿದ್ದಾರೆ. ಇವರಲ್ಲಿ 50 ಮಂದಿ ಕಿಡ್ನಿ ಬೇಕೆಂದು ಕೋರಿದ್ದಾರೆ. ಇನ್ನೂ 150 ಕಿಡ್ನಿ ಮಾರಾಟಕ್ಕೆ ಕರೆ ಮಾಡಿದ್ದಾರೆ. ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶದ ಅಮಾಯಕರು ವಂಚನೆಗೆ ಒಳಗಾಗಿದ್ದಾರೆ. ಇವರು ಯಾರಿಗೂ ಕಿಡ್ನಿ ಕೊಡಿಸಿಲ್ಲ ಮತ್ತು ಕಿಡ್ನಿಯನ್ನು ಖರೀದಿಸಿದ ಮಾಹಿತಿ ಸಿಕ್ಕಿಲ್ಲ.
| ಡಾ. ಎಸ್.ಡಿ. ಶರಣಪ್ಪ ಪೂರ್ವ ವಿಭಾಗ ಡಿಸಿಪಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight − three =
Remember me
