ಬೆಂಗಳೂರು:ಕ್ಯಾನ್ಸರ್ ರೋಗದಿಂದ ಬಳಲುತ್ತಿರುವವರಲ್ಲಿ ಅತ್ಮಸ್ಥೈರ್ಯ ತುಂಬಲು ಹಾಗೂ ಅವರನ್ನು ಮಾನಸಿಕವಾಗಿ ಸದೃಢಗೊಳಿಸಲು ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ‘ಸೈಕೋ ಅಂಕಾಲಜಿ ಘಟಕ’ ಪ್ರಾರಂಭಿಸಲಾಗುತ್ತಿದೆ.
ಕ್ಯಾನ್ಸರ್ ಎಂದೊಡನೆ ರೋಗಿಗಳು ಮಾನಸಿಕವಾಗಿ ಜರ್ಜರಿತರಾಗಿ, ಖಿನ್ನತೆಗೆ ಒಳಗಾಗುತ್ತಾರೆ. ಕ್ಯಾನ್ಸರ್ ಕಾಯಿಲೆಗಿಂತ ಮಾನಸಿಕವಾಗಿಯೇ ರೋಗಿಗಳು ಕೃಷರಾಗುತ್ತಾರೆ. ಅಂಥವರಿಗೆ ಕಾಯಿಲೆಯನ್ನು ಸವಾಲಾಗಿ ಸ್ವೀಕರಿಸಿ, ಚಿಕಿತ್ಸೆಗೆ ಸಜ್ಜಾಗಲು ಆತ್ಮಸ್ಥೈರ್ಯ ತುಂಬುವುದು ಈ ಘಟಕ ಸ್ಥಾಪನೆಯ ಉದ್ದೇಶ ಎಂದು ಆಸ್ಪತ್ರೆ ನಿರ್ದೇಶಕ ಡಾ. ಸಿ. ರಾಮಚಂದ್ರ ವಿವರಿಸಿದ್ದಾರೆ.
ಬಹಳಷ್ಟು ಮಂದಿ ರೋಗ ಗಂಭೀರ ಹಂತಕ್ಕೆ ತಲುಪಿದಾಗ ಚಿಕಿತ್ಸೆಗೆ ಬರುತ್ತಾರೆ. ಅಂಥವರಿಗೆ ಅನಿವಾರ್ಯವಾಗಿ ಕ್ಯಾನ್ಸರ್​ಪೀಡಿತ ಅಂಗಾಂಗಗಳನ್ನು (ನಾಲಿಗೆ, ದವಡೆ, ಸ್ತನ, ಕೈ, ಕಾಲು, ಕಣ್ಣು ಇತ್ಯಾದಿ) ಶಸ್ತ್ರಚಿಕಿತ್ಸೆ ಮೂಲಕ ತೆಗೆಯಬೇಕಾಗುತ್ತದೆ. ಇಂಥ ಸಂದರ್ಭದಲ್ಲಿ ಕೌನ್ಸೆಲಿಂಗ್ ಮಾಡಿ, ರೋಗವನ್ನು ಸಮರ್ಥವಾಗಿ ಎದುರಿಸಲು ರೋಗಿಗೆ ಮಾನಸಿಕಬಲ ತುಂಬಲು ಸಾಧ್ಯವಾಗಲಿದೆ.
ಕುಟುಂಬದವರಿಗೂ ಕೌನ್ಸೆಲಿಂಗ್:ರೋಗಿಗಳಿಗೆ ಕ್ಯಾನ್ಸರ್​ನ ವಿವಿಧ ಹಂತಗಳು, ಅದರ ಚಿಕಿತ್ಸೆ ಹಾಗೂ ಔಷಧ ತೆಗೆದುಕೊಳ್ಳುವುದು, ಚಿಕಿತ್ಸೆ ನಂತರದ ಜೀವನಶೈಲಿ ಇತ್ಯಾದಿ ವೈದ್ಯಕೀಯ ಸಲಹೆ ನೀಡಲಾಗುವುದು. ಕುಟುಂಬದ ಸದಸ್ಯರಿಗೂ ರೋಗಿಯೊಂದಿಗೆ ನಡೆದುಕೊಳ್ಳಬೇಕಾದ ರೀತಿ ಕುರಿತು ಅರಿವು ಮೂಡಿಸಲಾಗುವುದು ಎಂದು ರಾಮಚಂದ್ರ ಹೇಳಿದ್ದಾರೆ.
ಕಿದ್ವಾಯಿ ಆಸ್ಪತ್ರೆಗೆ ನಿತ್ಯ 1,500ಕ್ಕೂ ಹೆಚ್ಚು ರೋಗಿಗಳು ಚಿಕಿತ್ಸೆಗೆ ಬರುತ್ತಾರೆ. ಇವರಲ್ಲಿ 100ಕ್ಕೂ ಹೆಚ್ಚು ಮಂದಿಗೆ ಕೌನ್ಸೆಲಿಂಗ್ ಅಗತ್ಯವಿರುತ್ತದೆ. ಆದ್ದರಿಂದಲೇ ಸೈಕೋ ಅಂಕಾಲಜಿ ಘಟಕ ಪ್ರಾರಂಭಿಸಲಾಗುತ್ತಿದೆ. ಘಟಕದಲ್ಲಿ ಒಬ್ಬ ಮನೋರೋಗ ತಜ್ಞ, ಒಬ್ಬ ಆಪ್ತ ಸಮಾಲೋಚಕ, ಇಬ್ಬರು ಸಿಬ್ಬಂದಿ ಇರುತ್ತಾರೆ. ಇದಕ್ಕಾಗಿ ಆಸ್ಪತ್ರೆಯಲ್ಲಿ ಒಂದು ಸೈಕೋ ಆಂಕಲಾಜಿಸ್ಟ್ ಹುದ್ದೆಯನ್ನು ಸೃಷ್ಟಿಸಲಾಗಿದೆ. ಮೂವರು ಮನೋರೋಗ ತಜ್ಞರ ನೇಮಕಾತಿಗಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಸದ್ಯ ಒಬ್ಬರ ನೇಮಕಕ್ಕೆ ಅನುಮತಿ ದೊರೆತಿದೆ. ತಜ್ಞರ ನೇಮಕ ಸಂಬಂಧ ಈಗಾಗಲೇ ಟೆಂಡರ್ ಪ್ರಕ್ರಿಯೆ ಆರಂಭವಾಗಿದೆ ಎಂದು ರಾಮಚಂದ್ರ ಮಾಹಿತಿ ನೀಡಿದ್ದಾರೆ.
ಸೈಕೋ ಅಂಕಾಲಜಿ ಘಟಕಕ್ಕೆ ಸಿಬ್ಬಂದಿ ನೇಮಕ ಆಗುವವರೆಗೂ, ನಿಮ್ಹಾನ್ಸ್ ತಜ್ಞರ ಸೇವೆ ಪಡೆಯಲು ತೀರ್ವನಿಸಲಾಗಿದೆ. ಈ ಸಂಬಂಧ ಅಗತ್ಯಕ್ಕೆ ಅನುಗುಣವಾಗಿ ಮನೋರೋಗ ತಜ್ಞರನ್ನು ನಿಯೋಜಿಸಿಕೊಡುವಂತೆ ನಿಮ್ಹಾನ್ಸ್ ನಿರ್ದೇಶಕರ ಜತೆ ಮಾತುಕತೆ ನಡೆಸಲಾಗುವುದು. ಈ ಟೆಂಡರ್ ಪ್ರಕ್ರಿಯೆ ಯನ್ನು ನಿಮ್ಹಾನ್ಸ್ ವಹಿಸಿಕೊಂಡರೆ ಇನ್ನೂ ಒಳ್ಳೆಯದು.
| ಡಾ. ಸಿ. ರಾಮಚಂದ್ರಕಿದ್ವಾಯಿ ಆಸ್ಪತ್ರೆ ನಿರ್ದೇಶಕ
ಕ್ಯಾನ್ಸರ್ ರೋಗಿಗಳಿಗೆ ಅತಿಕಡಿಮೆ ದರದಲ್ಲಿ ಔಷಧ ಒದಗಿಸಲು ಕಿದ್ವಾಯಿ ಆಸ್ಪತ್ರೆ ಆವರಣದಲ್ಲಿ ‘ಅಮೃತ್ ಫಾರ್ಮಸಿ’ ಪ್ರಾರಂಭಿಸಲಾಗುತ್ತಿದೆ. ಈ ಸಂಬಂಧ ಎಚ್​ಎಲ್​ಎಲ್ (ಹಿಂದೂಸ್ತಾನ್ ಲೆಟೆಕ್ಸ್ ಲಿ.) ಜತೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಅಮೃತ್ ಫಾರ್ಮಸಿಗೆ ಆಸ್ಪತ್ರೆಯ ಶಿಫಾನಿ ಮತ್ತು ದಾಗಾ ಕಟ್ಟಡದಲ್ಲಿ ಜಾಗ ನೀಡಲಾಗಿದ್ದು, ದಿನದ 24 ಗಂಟೆ ಸೇವೆ ಲಭ್ಯವಿರಲಿದೆ. ಇಲ್ಲಿ ಕ್ಯಾನ್ಸರ್​ಗೆ ಸಂಬಂಧಿಸಿದ ಮಲ್ಟಿನ್ಯಾಷನಲ್ ಕಂಪನಿಗಳು ಉತ್ಪಾದಿಸಿರುವ ಗುಣಮಟ್ಟದ ಔಷಧಗಳು ಶೇ.30 ರಿಂದ ಶೇ.50 ರಿಯಾಯಿತಿಯಲ್ಲಿ ದೊರೆಯಲಿವೆ. ಇತರೆ ಆಸ್ಪತ್ರೆಗಳ ಕ್ಯಾನ್ಸರ್ ರೋಗಿಗಳು ಸಹ ಇಲ್ಲಿಗೆ ಬಂದು ಈ ಸೌಲಭ್ಯವನ್ನು ಬಳಸಿಕೊಳ್ಳಬಹುದು ಎಂದು ಡಾ. ಸಿ. ರಾಮಚಂದ್ರ ಹೇಳಿದ್ದಾರೆ.
| ಪಂಕಜ ಕೆ.ಎಂ. ಬೆಂಗಳೂರು
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + ten =
Remember me
