ಬೆಂಗಳೂರು:ರಾಜ್ಯ ರಾಜಧಾನಿಯಲ್ಲಿ ದೀಪಾವಳಿ ಹಬ್ಬದ ದಿನವೇ ಗೃಹಿಣಿಯೊಬ್ಬರ ಬರ್ಬರ ಹತ್ಯೆಯಾಗಿದೆ. ತನ್ನ ಪತ್ನಿಯ ಅಕ್ಕನನ್ನೇ ಕೊಂದ ಕಿರಾತಕ ಬಳಿಕ ತಾನೂ ಚಾಕುವಿನಿಂದ ಇರಿದುಕೊಂಡು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾನೆ.
ರಾಮಮೂರ್ತಿನಗರದ ಮುತ್ತುಮಾರಿಯಮ್ಮ ದೇವಸ್ಥಾನದ ಬಳಿ ಸೋಮವಾರ ಈ ದುರ್ಘಟನೆ ಸಂಭವಿಸಿದೆ. ಲಾವಣ್ಯ(37) ಕೊಲೆಯಾಗಿದ್ದು, ಆರೋಪಿ ವಿಜಯ್ ಕುಮಾರ್ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಲಾವಣ್ಯಳ ತಂಗಿಯ ಗಂಡ ವಿಜಯ್ ಕುಮಾರ್. ಪತ್ನಿಗೆ ಕಿರುಕುಳ ನೀಡುತ್ತಿದ್ದ ಎಂದು ಬಸವನಗುಡಿ ಮಹಿಳಾ ಠಾಣೆಯಲ್ಲಿ‌ ವಿಜಯ್ ಕುಮಾರ್ ವಿರುದ್ಧ ದೂರು ದಾಖಲಾಗಿತ್ತು. ಈ ಬಗ್ಗೆ ಮಾತನಾಡಲು ಅತ್ತಿಗೆ ಲಾವಣ್ಯ ಮನೆಗೆ ಸೋಮವಾರ ಆತ ಬಂದಿದ್ದ.
ಪತ್ನಿ ಜತೆಗೆ ರಾಜಿ ಮಾಡಿಕೊಳ್ಳಲು ಅತ್ತಿಗೆ ಲಾವಣ್ಯ ಹಾಗೂ ಅವರ ಪತಿ ವಾಸುಗೆ ವಿಜಯ್​ ಕುಮಾರ್​ ಪೀಡಿಸುತ್ತಿದ್ದ. ಈ ವಿಚಾರವಾಗಿ ಮಾತುಕತೆಗೆಂದು ಲಾವಣ್ಯ ಮನೆಗೆ ವಿಜಯ್ ಬಂದಿದ್ದ. ಈ ವೇಳೆ ಲಾವಣ್ಯ ಮೇಲೆ ಚಾಕುವಿನಿಂದ ಮನಸೋಇಚ್ಛೆ ವಿಜಯ್​ ಹಲ್ಲೆ ನಡೆಸಿದ್ದು, ತೀವ್ರ ರಕ್ತಸ್ರಾವವಾಗಿ ಆಕೆ ಸ್ಥಳದಲ್ಲೇ ಕೊನೆಯುಸಿರೆಳೆದಳು. ಅತ್ತಿಗೆ ಮೇಲೆ ಹಲ್ಲೆ ಮಾಡಿದ ವಿಜಯ್​ ಕೂಡ ಚಾಕುವಿನಿಂದ ಇರಿದುಕೊಂಡು ಸಾಯಲು ಯತ್ನಿಸಿದ್ದಾನೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಸ್ಥಳಕ್ಕೆ ಭೇಟಿ ನೀಡಿದ ರಾಮಮೂರ್ತಿ ನಗರ ಠಾಣೆ ಪೊಲೀಸರು ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡರು. ದೀಪಾವಳಿ ಸಡಗರದಲ್ಲಿರಬೇಕಿದ್ದ ಲಾವಣ್ಯ ಮನೆಯೆಲ್ಲ ರಕ್ತಸಿಕ್ತವಾಗಿದ್ದು, ಈ ದೃಶ್ಯ ಬೆಚ್ಚಿಬೀಳಿಸುವಂತಿತ್ತು.
ಪತ್ನಿಗೆ ಬೆಂಕಿ ಇಟ್ಟ ಗ್ರಾಮ ಪಂಚಾಯಿತಿ ಸದಸ್ಯ! ಬಿಚ್ಚಿಬೀಳಿಸುತ್ತೆ ಕಾರಣ

ಇನ್ನೇನು ನಿಶ್ಚಿತಾರ್ಥ ನಡೆಯಬೇಕು… ಅಷ್ಟರಲ್ಲಿ ಬಂದ ಜವರಾಯ ಅಕ್ಕ-ತಂಗಿಯ ಪ್ರಾಣ ಹೊತ್ತೊಯ್ದ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:13 − eleven =
Remember me
