ದೇವನಹಳ್ಳಿ:ಈತ ಒಂದು ವಾರದ ಹಿಂದೆ ಕೂಲಿಯಾಳುಗಳಿಗೆ ಹಣ ಪಾವತಿಸಲು ಹೋಗಿದ್ದ. ಆದರೆ ವಾಪಸ್​ ಮನೆಗೆ ಬಂದಿರಲಿಲ್ಲ. ಎಲ್ಲೇ ಹುಡುಕಿದರೂ ಈತವ ಯಾರ ಕೈಗೂ ಸಿಕ್ಕಿರಲಿಲ್ಲ. ಈಗ ಈ ಪ್ರಕರಣಕ್ಕೆ ಆಘಾತಕಾರಿ ತಿರುವು ಸಿಕ್ಕಿದ್ದು ಈತ ಕೊಲೆಯಾಗಿ ಹೋಗಿರುವ ವಿಚಾರ ಬೆಳಕಿಗೆ ಬಂದಿದೆ.
ಆರೋಪಿ, ಕಾಣೆಯಾಗಿದ್ದ ವ್ಯಕ್ತಿಯನ್ನು ಕೊಲೆ ಮಾಡಿ ಹೂತ್ತಿಟ್ಟಿದ್ದ ವಿಚಾರ ಪೊಲೀಸರ ತನಿಖೆ ವೇಳೆ ಬಯಲಿಗೆ ಬಂದಿದೆ. ಆರೋಪಿ, ಮೃತ ನಂದೀಶ್​ನನ್ನು ಕೊಲೆ ಮಾಡಿ ಗ್ರಾಮದ ಬಳಿ ಜಮೀನಿನಲ್ಲಿ ಹೂತು ಹಾಕಿದ್ದ.
ಈ ನಂದೀಶ್​, ಕೆಲಸ ಮಾಡಿದ್ದ ಕೂಲಿಯಾಳುಗಳಿಗೆ ಹಣ ಕೊಟ್ಟು ಬರೋದಾಗಿ ಹೇಳಿ ಹೋಗಿದ್ದ. ಆದರೆ ಹಣ ಕೊಡಲು ಹೋದವನು ಮನೆಗೆ ಮಾತ್ರ ವಾಪಸ್ ಬಂದಿರಲ್ಲಿಲ್ಲ. ಹೀಗಾಗಿ ನಂದೀಶ್​ ಕಾಣೆಯಾಗಿರುವ ಬಗ್ಗೆ ಆತನ ಕುಟುಂಬಸ್ಥರು ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದರು.
ಕುಟುಂಬಸ್ಥರ ದೂರಿನ ಅನ್ವಯ ನಂದಗುಡಿ ಪೊಲೀಸರು ತನಿಖೆ ಪ್ರಾರಂಭಿಸಿದ್ದರು. ತನಿಖೆ ವೇಳೆ ಸಿಕ್ಕ ಕೆಲವು ಸುಳಿವುಗಳ ಆಧಾರದ ಮೇಲೆ ಪಕ್ಕದ ಗ್ರಾಮದ ಪ್ರತಾಪ್ ಎಂಬುವವನನ್ನು ಕರೆತಂದು ವಿಚಾರಣೆ‌ ನಡೆಸಿದ್ದಾರೆ. ಈ ಪ್ರತಾಪ್​ ವಿಚಾರಣೆ ವೇಳೆ ಕೊಲೆ ಮಾಡಿ‌ ನಂದೀಶ್​ನನ್ನು ಹೂತು ಹಾಕಿರುವುದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
ಈ ಪ್ರತಾಪ್​, ನಂದೀಶ್​ ತನ್ನ ಹೆಂಡತಿ ಜೊತೆಗೆ ಅಕ್ರಮ ಸಂಬಂಧ ಇರಿಸಿಕೊಂಡಿದ್ದ ಎಂದು ಬೇಸತ್ತು ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಕಳೆದ ವಾರ ಪ್ರತಾಪ್​ ಇಲ್ಲದ ವೇಳೆ ಮೃತ ನಂದೀಶ ಮನೆಗೆ ಬಂದಿದ್ದ. ಹೀಗಾಗಿ ನಂದೀಶ ಬರುತ್ತಿರುವುದನ್ನು ಕಂಡು ಆರೋಪಿ ಪ್ರತಾಪ‌, ಆತನಲ್ಲಿ ರಸ್ತೆಯಲ್ಲಿ ಅಡ್ಡ ಹಾಕಿದ್ದ .
ಈ ವೇಳೆ ಪತ್ನಿ ಜೊತೆ ಅನೈತಿಕ ಸಂಬಂಧದ ಬಗ್ಗೆ ಇಬ್ಬರ ನಡುವೆ ಜಗಳವೂ ನಡೆದಿದ್ದು ಜಗಳದ ವೇಳೆ ನಂದೀಶನ ತಲೆಗೆ ಪ್ರತಾಪ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ ನಂತರ ನಂದೀಶನ ಶವವನ್ನ ಹೂತು ಪ್ರತಾಪ ಹಾಕಿದ್ದ. ಈ ಪ್ರತಾಪ ನಂದೀಶನ ಪ್ರಾಣ ತೆಗೆಯಲು ಎಷ್ಟರ ಮಟ್ಟಿಗೆ ಸಜ್ಜಾಗಿದ್ದನೆಂದರೆ ಕೊಲೆ ಮಾಡುವ ಮುನ್ನವೇ ಗುಂಡಿ ತೆಗೆದು ಬಂದಿದ್ದ!
ಕೊಲೆಯ ನಂತರ ಪ್ರತಾಪ, ಮೊಬೈಲ್ ಪೋನ್ಅನ್ನು ಮಂಗಳಮುಖಿಯರ ಮನೆ ಬಳಿ ಹಾಕಿ ಅನುಮಾನದ ದೃಷ್ಟಿಯಿಂದ ಪಾರಾಗಲಿ ಪ್ರಯತ್ನಿಸಿದ್ದ. ನಂತರ ಯಾರಿಗೂ ಅನುಮಾನ ಬಾರದಂತೆ‌ ಈತ ವರ್ತಿಸುತ್ತಿದ್ದ ಎನ್ನಲಾಗಿದೆ.
ಇದನ್ನೂ ಓದಿ:ನಿಮಗೆ ಇಲ್ಲಿ ಸಿನಿಮಾ ಮಾಡೋ ಯೋಚನೆ ಇದ್ರೆ ಹೇಳಿ, ಮಾತಾಡೋಣ: ರಾಜಮೌಳಿಗೆ ಕ್ಯಾಮರಾನ್​ ಆಫರ್​
ಆರೋಪಿ ಪ್ರತಾಪ್​, ಗ್ರಾಮಕ್ಕೆ ಬಂದಿದ್ದ ಬಗ್ಗೆ ಪೊಲೀಸರಿಗೆ ಗ್ರಾಮಸ್ಥರು ಮಾಹಿತಿ ಮಾಹಿತಿ ನೀಡಿದ್ದರು. ಈ ಮಾಹಿತಿಯನ್ನು ಆಧರಿಸಿ ತನಿಖೆ ನಡೆಸಿದ್ದ ಪೊಲೀಸರು ಪ್ರತಾಪನನ್ನು ಕರೆಸಿ ವಿಚಾರಣೆ ಮಾಡಿದಾಗ ಈತ ಅಸಲಿ ಮುಖ ಬಯಲಾಗಿದೆ. ಈ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ನಂದಗುಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 3 =
Remember me
