ಹುಬ್ಬಳ್ಳಿ:ಮೃತ ಬಾಲಕ ಅಂತ್ಯ ಸಂಸ್ಕಾರದ ವೇಳೆ ಎದ್ದು ಬಂದ ಪ್ರಕರಣ ಎಲ್ಲೆಡೆ ಸುದ್ದಿ ಮಾಡಿತ್ತು. ಅಂತ್ಯ ಸಂಸ್ಕಾರದ ವೇಳೆ ಬಾಲಕನ ಬಾಯಿ ನೀರು ಬಿಡುವ ಸಂದರ್ಭದಲ್ಲಿ ಆತ ತನ್ನ ಕೈಕಾಲನ್ನು ಅಲ್ಲಾಡಿಸಿದ್ದು ಈ ಸಂದರ್ಭದಲ್ಲಿ ಪೋಷಕರು, ಆಸ್ಪತ್ರೆಗೆ ವಾಪಸ್ ದಾಖಲಿಸಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದ ಕಿಮ್ಸ್ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ, “ಆಸ್ಪತ್ರೆಯಲ್ಲಿ ಬಾಲಕ ಸಾವಿನಪ್ಪಿರುವ ಬಗ್ಗೆ ನಾವು ಹೇಳಿಲ್ಲ. ನಮ್ಮ ಆಸ್ಪತ್ರೆಯಿಂದ ಬಿಡುಗಡೆಯಾದಾಗ ಬಾಲಕ ಇನ್ನೂ ಬದುಕೇ ಇದ್ದ. ಆದರೆ ಬಾಲಕನ ಮೆದುಳಿನಲ್ಲಿ ನೀರು ತುಂಬಿಕೊಂಡಿತ್ತು. ಬಾಲಕ ಚಿಕಿತ್ಸೆ ಸ್ಪಂದನೆ ಮಾಡುತ್ತಿರಲಿಲ್ಲ. ನಾವು ಬಾಲಕನ ಪರಿಸ್ಥಿತಿ ವಿವರಣೆ ಮಾಡಿ ಬದುಕುವುದು ಕಷ್ಟ ಅಂತ ಹೇಳಿದ್ದೆವು.
ಹೀಗಾಗಿ ಸ್ವಇಚ್ಛೆಯಿಂದ ಬಾಲಕನ ಪಾಲಕರು ಆಸ್ಪತ್ರೆಯಿಂದ ಕರೆದುಕೊಂಡು ಮನೆಗೆ ಹೋಗಿದ್ದರು. ಕಿಮ್ಸ್ ಆಸ್ಪತ್ರೆಯಿಂದ ಬಾಲಕ ಬಿಡುಗಡೆಯಾದಾಗ ಮೃತಪಟ್ಟಿರಲಿಲ್ಲ. ಮನೆಗೆ ಹೋಗಿ ಕೆಲವು ಗಂಟೆಗಳ ಬಳಿಕ ಬಾಲಕನನ್ನು ಮತ್ತೆ ಕರೆದುಕೊಂಡು ಬಂದರು. ನಾವು ಅಡ್ಮಿಟ್ ಮಾಡುವಂತೆ ಹೇಳಿದ್ದೇವು ಆದರೆ ಅವರು ಬೇಡ ಅಂತ ಮತ್ತೆ ವಾಪಸು ಕರೆದುಕೊಂಡು ಹೋಗಿದ್ದಾರೆ. ಕಿಮ್ಸ್ ಆಸ್ಪತ್ರೆಯಲ್ಲಿ ಬಾಲಕ ಮೃತಪಟ್ಟಿರಿಲ್ಲ. ಸುಮ್ಮನೆ ಮಧ್ಯೆ ಇರೋರು ಗೊಂದಲ ಸೃಷ್ಟಿ ಮಾಡಿದ್ದಾರೆ” ಎಂದ ಕಿಮ್ಸ್ ನಿರ್ದೇಶಕ ರಾಮಲಿಂಗಪ್ಪ ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × five =
Remember me
