ಕಾರವಾರ:ಸ್ಕೂಲ್​ ಬ್ಯಾಗ್​ನಲ್ಲಿ, ಶೂ ಒಳಗೆ, ಮನೆಯಲ್ಲಿ ಇಲ್ಲವೇ ಬೈಕ್​ನಲ್ಲಿ ಹಾವು ಕಾಣಿಸಿಕೊಂಡು ಸಾರ್ವಜನಿಕರು ಬೆಚ್ಚಿ ಬಿದ್ದಂಥ ಪ್ರಕರಣಗಳು ಹಲವು ನಡೆದಿವೆ. ಅದೇ ರೀತಿ ಇಲ್ಲೊಂದು ಕಡೆ ಕಾರಿನಲ್ಲಿ ಕಾಳಿಂಗ ಸರ್ಪವೊಂದು ಕಂಡುಬಂದಿದೆ.
ಉತ್ತರಕನ್ನಡ ಜಿಲ್ಲೆಯ ಕಾರವಾರದ ಕ್ಯಾಸಲ್ ರಾಕ್ ಸಮೀಪದ ಖಾಂಡೆವಾಡಿ ಗ್ರಾಮದ ನಾಲ್ವರು ಸಹೋದರರು ಸಂಚರಿಸಿದ್ದ ಕಾರಿನಲ್ಲಿ ಈ ಕಾಳಿಂಗ ಸರ್ಪ ಜೊತೆಗೇ ಇದ್ದಿದ್ದು, ನಂತರ ಈ ವಿಷಯ ಗೊತ್ತಾಗಿದೆ. ಅಷ್ಟರಲ್ಲಾಗಲೇ ಇವರು ಕಾಳಿಂಗ ಸರ್ಪದೊಂದಿಗೆ ಸುಮಾರು 50 ಕಿ.ಮೀ. ಸಂಚರಿಸಿದ್ದರು.
ಇದನ್ನೂ ಓದಿ:‘ಮೋದಿಯನ್ನು ಅಧಿಕಾರಕ್ಕೆ ತಂದ್ರೆ ಉಳಿತೀರಿ’ ಎಂದ ಸ್ವಾಮೀಜಿ: ಒಂದೇ ದಿನದಲ್ಲಿ ಇಲ್ಲವಾದ ‘ಭವಿಷ್ಯ’!
ಇವರು ಜಗಲಬೇಟ ಸಮೀಪ ಮೆಸ್ಟ್ ಬಿರೋಡಾ ದತ್ತಾತ್ರೇಯ ದೇವಸ್ಥಾನಕ್ಕೆ ಆಗಮಿಸಿ ಕಾರು ನಿಲುಗಡೆ ಮಾಡಿದಾಗ ಬೆಕ್ಕೊಂದು ಕಾರಿನ ಸುತ್ತ ಸುತ್ತುತ್ತಿತ್ತು.‌ ಅದನ್ನು ನೋಡಿ ಅನುಮಾನದಿಂದ ಹುಡುಕಿದಾಗ ಕಾರಿನ ಹಿಂದಿನ ಗಾಲಿಗಳ ನಡುವೆ 10 ಅಡಿ ಉದ್ದದ ಕಾಳಿಂಗ ಸರ್ಪ ಇರುವುದು ಪತ್ತೆಯಾಗಿದೆ. ನಂತರ ಸ್ಥಳೀಯ ಅರಣ್ಯಾಧಿಕಾರಿಗಳು‌ 2 ತಾಸು ಕಾರ್ಯಾಚರಣೆ ನಡೆಸಿ ಹಾವನ್ನು ಹಿಡಿದು ಕಾಡಿಗೆ ಬಿಟ್ಟಿದ್ದಾರೆ.
ಇದನ್ನೂ ಓದಿ:ಅಬ್ಬಬ್ಬಾ.. ಇದೇನಿದು ‘ಸರ್ಪ’ರೈಸ್!: ದೇವರಕೋಣೆಯಲ್ಲಿ ಕಾಳಿಂಗ ಸರ್ಪ, ಸ್ಕೂಲ್​ಬ್ಯಾಗ್​ನಲ್ಲಿ ನಾಗರಹಾವು!
ಇತ್ತೀಚೆಗೆ ಕೊಡಗು ಜಿಲ್ಲೆಯ ಮನೆಯೊಂದರ ದೇವರಕೋಣೆಯಲ್ಲೇ ಕಾಳಿಂಗ ಸರ್ಪ ಕಂಡು ಬಂದಿತ್ತು. ಇನ್ನೊಂದು ಪ್ರಕರಣದಲ್ಲಿ ಶಿವಮೊಗ್ಗ ಜಿಲ್ಲೆಯ ಹೊಸನಗರದ ಶಾಲೆಯೊಂದರಲ್ಲಿ ವಿದ್ಯಾರ್ಥಿಯೊಬ್ಬನ ಸ್ಕೂಲ್​ ಬ್ಯಾಗ್​ನಲ್ಲಿ ನಾಗರಹಾವು ಪತ್ತೆಯಾಗಿತ್ತು.
ಬರೀ 23 ದಿನಗಳಲ್ಲಿ ಭಾರತದಲ್ಲಾಗಲಿವೆ 35 ಲಕ್ಷ ಮದುವೆಗಳು!; ಈ ಮದುವೆ ಸೀಸನ್​ನ ವಹಿವಾಟೆಷ್ಟು ಗೊತ್ತೇ?; ಇಲ್ಲಿದೆ ವಿವರ..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × five =
Remember me
