ಮಂಗಳೂರು:ಎರಡು ಬಲಿಷ್ಠ ಹಾವುಗಳಾದ ಕಾಳಿಂಗ ಸರ್ಪ ಮತ್ತು ಹೆಬ್ಬಾವು ಎದುರು-ಬದುರಾದಾಗ ಅಲ್ಲಿ ಕಾದಾಟ ನಡೆಯುವುದು ಸಹಜವೇ. ಆದರೆ, ಕಿತ್ತಾಟದಲ್ಲಿ ಯಾರು ಗೆಲ್ಲುತ್ತಾರೆ ಎಂಬುದು ಊಹಿಸುವುದು ತುಸು ಕಷ್ಟವೇ ಸರಿ. ಆದರೆ, ಬೆಳ್ತಂಗಡಿ ತಾಲೂಕಿನ ಸೋಮಂತಡ್ಕದಲ್ಲಿ ನಡೆದಿರುವ ಘಟನೆ ಎಂಥವರನ್ನು ಹುಬ್ಬೇರಿಸುತ್ತದೆ.
ಯಾವುದೇ ದೊಡ್ಡ ಪ್ರಾಣಿಗಳನ್ನು ಸಹ ತನ್ನ ಬಲಿಷ್ಠ ದೇಹದಿಂದ ಸುತ್ತುವರಿದು, ಉಸಿರುಗಟ್ಟಿ ಸಾಯಿಸಿ ಲೀಲಾಜಾಲವಾಗಿ ನುಂಗಿ ನೀರು ಕುಡಿಯುವ ಹೆಬ್ಬಾವನ್ನೇ, ಕಾಳಿಂಗ ಸರ್ಪ ನುಂಗಿತೆಂದರೆ ಯಾರಿಗೆ ತಾನೇ ಅಚ್ಚರಿಯಾಗುವುದಿಲ್ಲ. ಈ ರೀತಿಯ ಅಚ್ಚರಿಗೆ ಸೋಮಂತಡ್ಕ ಸಾಕ್ಷಿಯಾಗಿದೆ.
ಇದನ್ನೂ ಓದಿರಿ:‘ಆ ದಿನ’ ಮೂರ್ನಾಲ್ಕು ಆ್ಯಂಗಲ್​ಗಳಲ್ಲಿ ವಿಡಿಯೋ ರೆಕಾರ್ಡಿಂಗ್​ ಆಗಿದ್ಯಲ್ಲಾ? ಯಾರು ಮಾಡಿದ್ರು?
ಹೆಬ್ಬಾವನ್ನು ನುಂಗಿದ ಕಾಳಿಂಗ ಸರ್ಪ ಮತ್ತೆ ವಾಪಸ್ಸು ಹೊರ ಹಾಕಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಸೋಮಂತಡ್ಕದ ಮನೆಯೊಂದರ ಹಿತ್ತಲಿನಲ್ಲಿ ಈ ಘಟನೆ ನಡೆದಿದೆ. ಸುಮಾರು 14 ಅಡಿ ಉದ್ದದ ಕಾಳಿಂಗ ಸರ್ಪ, ಹೆಬ್ಬಾವನ್ನು ನುಂಗಿ ಎರಡು ದಿನದಿಂದ ಒಂದು ಸ್ವಲ್ಪವೂ ಕದಲದ ಇದ್ದಲ್ಲಿಯೇ ಇತ್ತು.
ಮನೆಯವರಿಂದ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಉರಗತಜ್ಞ ಬೆಳ್ತಂಗಡಿಯ ಸ್ನೇಕ್ ಅಶೋಕ್​ ಕಾಳಿಂಗ ಸರ್ಪವನ್ನು ರಕ್ಷಣೆ ಮಾಡಿ, ಕಾಡಿಗೆ ರವಾನಿಸಿದರು. ಆದರೆ, ಘಟನೆಯಲ್ಲಿ ಹೆಬ್ಬಾವು ಮೃತಪಟ್ಟಿತು.(ದಿಗ್ವಿಜಯ ನ್ಯೂಸ್​)

ಮೊದ್ಲು ನಿನ್ನ ಅಕ್ಕ-ತಂಗಿಯರನ್ನು ಕೇಳು ಅವ್ರು ಮಾಡಿದ್ರೆ ನಾನು ಮಾಡ್ತೀನಿ: ನೆಟ್ಟಿಗನಿಗೆ ಶಾಕ್​ ಕೊಟ್ಟ ಪ್ರಿಯಾಮಣಿ!

ಟ್ಯೂಷನ್​ ಮುಗಿಸಿ ಬರುತ್ತಿದ್ದ ವಿದ್ಯಾರ್ಥಿನಿ ಮೇಲೆ ಗ್ಯಾಂಗ್​ರೇಪ್​- ವಿಷ ಕುಡಿಸಿ ಕೊಲೆ ಮಾಡಿದ ಪಾಪಿಗಳು!

ಪುಸ್ತಕ ಮಿತ್ರ ಇರಲಿ ಸದಾ ಪುಟಾಣಿಗಳ ಹತ್ತಿರ!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:two × 1 =
Remember me
