ಬೆಂಗಳೂರು:ರಾಜ್ಯ ರಾಜಧಾನಿಯಲ್ಲಿ ನೈಜೀರಿಯಾ ಪ್ರಜೆಗಳ ಬೀದಿರಂಪಾಟ ಮತ್ತೆ ಶುರುವಾಗಿದೆ. ಕರೊನಾ ಸೋಂಕಿನ ಭೀತಿ ನಡುವೆಯೂ ಕಂಟಪೂರ್ತಿ ಎಣ್ಣೆ ಕುಡಿದು ತಡರಾತ್ರಿವರೆಗೂ ಪಾರ್ಟಿ ಮಾಡಿದ್ದಾರೆ.
ಹೆಣ್ಣೂರಿನ ಚಿಕ್ಕಣ್ಣ ಬಡಾವಣೆಯಲ್ಲಿ ಭಾನುವಾರ ರಾತ್ರಿವರೆಗೂ ಯಾರ ಭಯವಿಲ್ಲದೆ ಬೀದಿ ಬದಿಯಲ್ಲೇ ಎಣ್ಣೆಪಾರ್ಟಿ ಮಾಡಿದ್ದಾರೆ. ಇದನ್ನು ಪ್ರಶ್ನಿಸಿದ ಪೊಲೀಸರಿಗೆ ಅಶ್ಲೀಲ ಸನ್ನೆ ಮಾಡುತ್ತ ವಿಕೃತವಾಗಿ ವರ್ತಿಸಿದ ನೈಜೀರಿಯಾ ಪ್ರಜೆಗಳನ್ನು ಬಂಧಿಸಲಾಗಿದೆ.
ಇದನ್ನೂ ಓದಿರಿಹಳೇ ಲವ್​ ವಿಷ್ಯ ಮುಚ್ಚಿಹಾಕಲು ಉದ್ಯಮಿ ಜತೆ ಅಕ್ರಮ ಸಂಬಂಧ ಬೆಳೆಸಿ ಮತ್ತೆ ಪೇಚಿಗೆ ಸಿಲುಕಿದ್ಳು!
ವೀಕೆಂಡ್ ಬಂದ್ರೆ ಸಾಕು ಬೀದಿಯನ್ನೇ ಪಾರ್ಟಿ ಹಾಲ್ ಮಾಡಿಕೊಳ್ಳುವ ನೈಜೀರಿಯಾ ಪ್ರಜೆಗಳು ನಿನ್ನೆ(ಭಾನುವಾರ) ರಾತ್ರಿಯೂ ಹೆಣ್ಣೂರಿನ ಗಲ್ಲಿಗಳಲ್ಲಿ ಎಣ್ಣೆ ಹೊಡೆದು ಮೋಜು-ಮಸ್ತಿಯಲ್ಲಿ ತೊಡಗಿದ್ದರು. ಇದನ್ನು ಪ್ರಶ್ನಿಸಿದ ಸ್ಥಳೀಯರ ಮೇಲೂ ಕೂಗಾಡಿದ್ದಾರೆ. ಅವರ ಹುಚ್ಚಾಟಕ್ಕೆ ಗರಂ ಆದ ಸ್ಥಳೀಯರು, ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಬಂದ ಪೊಲೀಸರ ಜತೆಗೆ ಸ್ಥಳೀಯರಿಗೂ ಅವಾಚ್ಯ ಶಬ್ದಗಳಿಂದ ನಿಂದಿಸಿದ ನೈಜೀರಿಯನ್ ಪ್ರಜೆಗಳನ್ನು ಹೆಣ್ಣೂರಿನ ಪೊಲೀಸರು ಬಂಧಿಸಿ ಕರೆದೊಯ್ದರು.
ನೈಜೀರಿಯಾ ಪ್ರಜೆಗಳು ಮನಸೋಇಚ್ಛೆ ವರ್ತಿಸುತ್ತಿದ್ದರೂ ಈ ಬಗ್ಗೆ ಅವರಿಗೆ ಮನೆ ಬಾಡಿಗೆ ನೀಡಿದ ಮಾಲೀಕರು ತಲೆ ಕೆಡಿಸಿಕೊಂಡಿಲ್ಲ ಎಂಬ ಅಸಮಾಧಾನ ಸ್ಥಳೀಯರಿಂದ ಕೇಳಿಬಂದಿದೆ.
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕರೊನಾ ಸೋಂಕಿತೆಗೆ ಲೈಂಗಿಕ ದೌರ್ಜನ್ಯ, ಅಪರಿಚಿತ ವೈದ್ಯನಿಂದಲೇ ಹೀನಕೃತ್ಯ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:5 + 16 =
Remember me
