ಮಂಗಳೂರು:ಮಾದಕ ವಸ್ತು ಜಾಲ ಪ್ರಕರಣದಲ್ಲಿ ಈಗಾಗಲೇ ಬಾಲಿವುಡ್​ ಡ್ಯಾನ್ಸರ್​ ಕಿಶೋರ್​ ಅಮನ್​ ಶೆಟ್ಟಿಯ ಬಂಧನವಾಗಿದ್ದು, ವಿಚಾರಣೆಯ ವೇಳೆ ಸಾಕಷ್ಟು ಮಹತ್ವದ ಸಂಗತಿಗಳು ಬಯಲಿಗೆ ಬರುತ್ತಿದ್ದೆ. ಇದೀಗ ಕಿಶೋರ್​ ಸ್ನೇಹಿತೆ ಕುರಿತು ಸ್ಫೋಟಕ ಮಾಹಿತಿಯೊಂದು ಹೊರಬಿದ್ದಿದೆ.
ಕಿಶೋರ್​ ಸ್ನೇಹಿತೆಯಾಗಿರುವ ಆಸ್ಕಾ ಸಹ ಸಿಸಿಬಿ ಅಧಿಕಾರಿಗಳಿಂದ ಬಂಧನವಾಗಿದ್ದಾಳೆ. ಮಣಿಪುರ ಮೂಲದ ಆಸ್ಕಾ ಹಲವು ವರ್ಷಗಳ ಹಿಂದೆಯೇ ಬೆಂಗಳೂರಿನಲ್ಲಿ ಬಂದು ನೆಲೆಸಿದ್ದಳು. ಆ ಬಳಿಕ ಕೆಲ ವರ್ಷಗಳಿಂದ ಮಂಗಳೂರಿನಲ್ಲಿ ವಾಸವಿದ್ದಳು.
ಇದನ್ನೂ ಓದಿ:ಮಚ್ಚಿನಿಂದ ಕೊಚ್ಚಿ ಜೆಡಿಎಸ್​ ನಗರಸಭೆ ಸದಸ್ಯನ ಬರ್ಬರ ಹತ್ಯೆ
ಹಗಲು ವೇಳೆ ಸ್ಪಾ ಒಂದರಲ್ಲಿ ಕೆಲಸ ಮಾಡುತ್ತಿದ್ದ ಆಸ್ಕಾ, ರಾತ್ರಿ ಮಂಗಳೂರಿನ ಪಬ್​ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಳು. ಕಿಶೋರ್​ ಶೆಟ್ಟಿಯ ಪರಿಚಯವಾದ ಬಳಿಕ ಡ್ರಗ್ಸ್ ಪಾರ್ಟಿಗಳಿಗೆ ಪ್ರವೇಶ ನೀಡುತ್ತಿದ್ದಳು ಎನ್ನಲಾಗಿದೆ. ಡ್ರಗ್ ಟೆಸ್ಟ್ ಮಾಡಿಸಿದಾಗಲೂ ಪಾಸಿಟಿವ್ ಬಂದಿತ್ತು ಎಂದು ತಿಳಿದುಬಂದಿದೆ.
ಆಸ್ಕಾ ಕಿಶೋರ್​ ಗರ್ಲ್​ಫ್ರೆಂಡ್​ ಎನ್ನಲಾಗಿದ್ದು, ಆಕೆ ತನ್ನ ಇತರೆ ಫ್ರೆಂಡ್ಸ್​ಗಳನ್ನು ಡ್ರಗ್ಸ್​ ಪಾರ್ಟಿಗಳಿಗೆ ಕರೆತರುತ್ತಿದ್ದಳು ಎಂಬುದು ಬಹಿರಂಗವಾಗಿದ್ದು, ಇದೀಗ ಸಿಸಿಬಿ ಅಧಿಕಾರಿಗಳು ಆಸ್ಕಾ ಫ್ರೆಂಡ್ಸ್​ಗೂ ನೋಟಿಸ್​ ನೀಡಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.(ದಿಗ್ವಿಜಯ ನ್ಯೂಸ್​)
VIDEO| ಪತ್ನಿಯನ್ನು ಎಳೆದಾಡಿ ಹಲ್ಲೆ ಮಾಡಿದ ಐಪಿಎಸ್​ ಅಧಿಕಾರಿಗೆ ಶಾಕ್​ ಕೊಟ್ಟ ಸರ್ಕಾರ..!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:16 − twelve =
Remember me
