|ಪಂಕಜ ಕೆ.ಎಂ.ಬೆಂಗಳೂರು
ಕಾರ್ಟ್ರಿಡ್ಜ್ ಆಧಾರಿತ ನ್ಯೂಕ್ಲಿಯಿಕ್ ಆಸಿಡ್ ಆಂಪ್ಲಿಫಿಕೇಷನ್ ಟೆಕ್ನಿಕ್ (ಸಿಬಿಎನ್​ಎಎಟಿ) ಪರೀಕ್ಷಾ ಕಿಟ್​ಗಳ ಕೊರತೆಯಿಂದಾಗಿ ಕರ್ನಾಟಕದಲ್ಲಿ ಕ್ಷಯ ರೋಗ ಪತ್ತೆ ಕಾರ್ಯಕ್ಕೆ ತೀವ್ರ ಹೊಡೆತ ಬಿದ್ದಿದೆ. ಟಿಬಿ ಪತ್ತೆಗಾಗಿ ರಾಜ್ಯಕ್ಕೆ ಪ್ರತಿ ತಿಂಗಳು 20 ಸಾವಿರ ಸಿಬಿಎನ್​ಎಟಿ ಕಾಟಿರ್Åಜ್​ಗಳ ಅಗತ್ಯವಿದೆ. ಆದರೆ ಕೇಂದ್ರ ಟಿಬಿ ವಿಭಾಗದಿಂದ ಪ್ರತಿ ಮೂರು ತಿಂಗಳಿಗೊಮ್ಮೆ ರಾಜ್ಯಗಳಿಗೆ ಸರಬರಾಜು ಆಗಬೇಕಿದ್ದ ರೋಗನಿರ್ಣಯ ಕಿಟ್​ಗಳು 2020 ಡಿಸೆಂಬರ್ 10ರ ನಂತರ ಪೂರೈಕೆಯಾಗಿಲ್ಲ. ಹಾಗಾಗಿ ಕಿಟ್​ಗಳ ಕೊರತೆ ಎದುರಾಗಿದೆ.
ರಾಜ್ಯದಲ್ಲಿ 65 ಸಿಬಿಎನ್​ಎಎಟಿ ಮತ್ತು 98 ಟ್ರೂನಾಟ್ ಯಂತ್ರಗಳು ಜಿಲ್ಲೆಗಳಾದ್ಯಂತ ಲಭ್ಯ ಇವೆ. ಟಿಬಿ ರೋಗನಿರ್ಣಯಕ್ಕಾಗಿ ಟ್ರೊನಾಟ್ ಕ್ಷಿಪ್ರ ಆಣ್ವಿಕ ಪರೀಕ್ಷೆಯಾಗಿದೆ. ಹಾಗಾಗಿ ರಾಜ್ಯದಲ್ಲಿ 1.27 ಲಕ್ಷ ಟ್ರೂನಾಟ್ ಚಿಪ್​ಗಳ ಸಂಗ್ರಹ ಇದೆಯಾದರೂ, ಅವು ಕೆಲವೇ ಕೇಂದ್ರಗಳಿಗೆ ಸೀಮಿತಗೊಂಡಿವೆ. ಇದೂ ಸಹ ಟಿಬಿ ಪತ್ತೆ ಕಾರ್ಯ ಹಿನ್ನಡೆಗೆ ಕಾರಣವಾಗಿದೆ.
2.5 ಲಕ್ಷ ಕಾರ್ಟ್ರಿಡ್ಜ್ ಅಗತ್ಯತೆ:ಕೇಂದ್ರ ಟಿಬಿ ವಿಭಾಗದಿಂದಲೇ ಎಲ್ಲ ರಾಜ್ಯಗಳಿಗೂ ಸಿಬಿಎನ್​ಎಎಟಿ ಸರಬರಾಜಾಗಲಿದೆ. ರಾಜ್ಯದಲ್ಲಿ ತಿಂಗಳಿಗೆ 20 ಸಾವಿರದಂತೆ ಒಂದು ವರ್ಷಕ್ಕೆ 2.5 ಲಕ್ಷ ಕಾಟಿರ್Åಜ್​ಗಳ ಅಗತ್ಯತೆ ಇದೆ. ಆದರೆ ಕೇಂದ್ರದ ಮಟ್ಟದಲ್ಲಿನ ಕೆಲ ಸಮಸ್ಯೆಯಿಂದಾಗಿ ಪೂರೈಕೆಯಲ್ಲಿ ವಿಳಂಬವಾಗಿದೆ. ಈ ಕುರಿತು ಕೇಂದ್ರಕ್ಕೆ ಮಾಹಿತಿ ನೀಡಲಾಗಿದ್ದು, ಶೀಘ್ರದಲ್ಲೇ ಪೂರೈಸುವ ಭರವಸೆ ನೀಡಿದ್ದಾರೆ ಎನ್ನುತ್ತಾರೆ ಆರೋಗ್ಯ ಇಲಾಖೆ ಅಧಿಕಾರಿಗಳು.
ಗಾಳಿಯಿಂದ ಹರಡುವ ರೋಗ:ಟಿಬಿ ಗಾಳಿಯಿಂದ ಹರಡುವ ರೋಗವಾಗಿದೆ. ಇದನ್ನು ತಡೆಗಟ್ಟಬಹುದು ಮತ್ತು ಗುಣಪಡಿಸಬಹುದಾಗಿದೆ. ಕ್ಷಯ ರೋಗ ಶ್ವಾಸಕೋಶದ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಮತ್ತು ಎರಡು ವಾರಗಳಿಗಿಂತ ಹೆಚ್ಚು ಕಾಲ ಕೆಮ್ಮು, ರಾತ್ರಿಯಲ್ಲಿ ಬೆವರುವುದು, ಜ್ವರ, ಹಸಿವು ಮತ್ತು ತೂಕ ಸಮಸ್ಯೆ ರೋಗದ ಲಕ್ಷಣಗಳು. ರೋಗ ಗಂಭೀರವಾದಲ್ಲಿ ಹೊಟ್ಟೆ, ಮೂತ್ರಪಿಂಡ ಮತ್ತು ಇತರ ಅಂಗಗಳ ಮೇಲೆ ಪರಿಣಾಮ ಬೀರುತ್ತದೆ. ದೇಶ 2025ರ ವೇಳೆಗೆ ಟಿಬಿ ಮುಕ್ತಗೊಳಿಸುವ ಗುರಿ ಹೊಂದಿದೆ.
ರೋಗ ಹರಡುವಿಕೆ ಹೇಗೆ?:‘ಕ್ಷಯ’ ಮೈಕ್ರೋಬ್ಯಾಕ್ಟೀರಿಯಂ ಟಿಬಿ ರೋಗಾಣುವಿನಿಂದ ಉಂಟಾಗುವ ಸಾಂಕ್ರಾಮಿಕ ರೋಗ. ಒಬ್ಬರಿಂದ ಒಬ್ಬರಿಗೆ ಹರುಡುವ ಸಾಂಕ್ರಾಮಿಕ ರೋಗ. ರೋಗಿ ಕೆಮ್ಮಿದಾಗ ಅಥವಾ ಸೀನಿದಾಗ ಹೊರಹೊಮ್ಮುವ ರೋಗಾಣು ಗಾಳಿ ಮೂಲಕ ಇತರರ ಶ್ವಾಸಕೋಶ ಸೇರುವ ಮೂಲಕ ಮತ್ತೊಬ್ಬರಿಗೆ ಹರಡುತ್ತದೆ. ಶ್ವಾಸಕೋಶೇತರ ಕ್ಷಯರೋಗ ದುಗ್ಧ ರಂಥಿ (ಎಕ್ಸ್​ಟ್ರಾ ಪಲ್ಮನರಿ), ಪ್ಲುರಾ, ಮೂಳೆ ಮತ್ತು ಕೀಲುಗಳಲ್ಲಿ ಜೆನಿಟೋ ಮೂತ್ರ ಪ್ರದೇಶ, ನರಮಂಡಲ, ಕಿಬ್ಬೊಟ್ಟೆಯ ಕ್ಷಯ, ಚರ್ಮ ಮತ್ತು ಇತ್ಯಾದಿಗಳ ಮೇಲೆ ಪರಿಣಾಮ ಬೀರುತ್ತದೆ.
2025ಕ್ಕೆ ‘ಕ್ಷಯಮುಕ್ತ ಕರ್ನಾಟಕ’ ಗುರಿ ಹೊಂದಲಾಗಿದೆ. ಟಿಬಿ ಪತ್ತೆ ಕಾರ್ಯ, ಚಿಕಿತ್ಸೆ ಹಾಗೂ ನಿಯಂತ್ರಣ ಕ್ರಮಗಳ ಕುರಿತು ಕ್ರಿಯಾಯೋಜನೆ ರೂಪಿಸಲಾಗಿದೆ. ಅದನ್ನು ಅನುಸರಿಸುವ ಮೂಲಕ ಮುಂದಿನ 4 ವರ್ಷಗಳಲ್ಲಿ ರಾಜ್ಯವನ್ನು ಕ್ಷಯ ಮುಕ್ತ ಗೊಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಾಗುವುದು.
|ರಮೇಶ್ ರೆಡ್ಡಿಜಂಟಿ ನಿರ್ದೇಶಕ (ಟಿಬಿ ವಿಭಾಗ) ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:four + six =
Remember me
