ಬೆಂಗಳೂರು:ಏಕದಿನ ವಿಶ್ವಕಪ್​ಗೆ ಪ್ರಕಟಿಸಲಾಗಿರುವ ಭಾರತ ತಂಡದಲ್ಲಿ ಕೆಎಲ್​ ರಾಹುಲ್​ ಏಕೈಕ ಕನ್ನಡಿಗರಾಗಿದ್ದಾರೆ. ಏಷ್ಯಾಕಪ್​ ತಂಡದಲ್ಲಿರುವ ಮತ್ತೋರ್ವ ಕನ್ನಡಿಗ ಪ್ರಸಿದ್ಧ ಕೃಷ್ಣ ವಿಶ್ವಕಪ್​ ತಂಡದಲ್ಲಿ ಸ್ಥಾನ ಪಡೆದಿಲ್ಲ. ಹೀಗಾಗಿ ಕೆಎಲ್​ ರಾಹುಲ್​ ಅವರೊಬ್ಬರೇ ವಿಶ್ವಕಪ್​ನಲ್ಲಿ ರಾಜ್ಯದ ಭರವಸೆಯಾಗಿದ್ದಾರೆ. ಆದರೆ ಇದಕ್ಕಾಗಿ ರಾಜ್ಯದ ಕ್ರಿಕೆಟ್​ ಪ್ರೇಮಿಗಳು ನಿರಾಸೆ ಅನುಭವಿಸಬೇಕಾಗಿಲ್ಲ. ವಿಶ್ವಕಪ್​ ತಂಡದಲ್ಲಿರುವ ಇನ್ನೂ 4 ಆಟಗಾರರು ಬೇರೆ ಬೇರೆ ರೂಪದಲ್ಲಿ ಕರ್ನಾಟಕದ ನಂಟು ಹೊಂದಿದ್ದಾರೆ. ತಂಡದ ಮುಖ್ಯ ಕೋಚ್​ ರಾಹುಲ್​ ದ್ರಾವಿಡ್​ ಕೂಡ ಕನ್ನಡಿಗರು ಎಂಬುದು ಬೇರೆ ಮಾತು.

ಟೀಮ್​ ಇಂಡಿಯಾದ ಪ್ರಮುಖ ಬ್ಯಾಟರ್​ ವಿರಾಟ್​ ಕೊಹ್ಲಿ ಐಪಿಎಲ್​ನಲ್ಲಿ ರಾಜ್ಯದ ಆರ್​ಸಿಬಿ ತಂಡದ ಭಾಗವಾಗಿದ್ದಾರೆ. ಈ ಮೂಲಕ ಕಳೆದ 16 ವರ್ಷಗಳಿಂದ ರಾಜ್ಯದ ಕ್ರಿಕೆಟ್​ ಪ್ರೇಮಿಗಳ ಹೃದಯವನ್ನು ಗೆಲ್ಲುತ್ತ ಬಂದಿದ್ದಾರೆ. ಜತೆಗೆ ಅವರ ಪತ್ನಿ ಹಾಗೂ ಬಾಲಿವುಡ್​ ತಾರೆ ಅನುಷ್ಕಾ ಶರ್ಮ ಬೆಂಗಳೂರಿನಲ್ಲೇ ಬೆಳೆದವರು. ಮೂಲತಃ ಉತ್ತರಾಖಂಡದವರಾದರೂ, ಅನುಷ್ಕಾ ಶರ್ಮ ಬೆಂಗಳೂರಿನ ಮೌಂಟ್​ ಕಾರ್ಮೆಲ್​ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದಿದ್ದಾರೆ ಮತ್ತು ಭಾರತೀಯ ಸೇನೆಯಲ್ಲಿದ್ದ ಅವರ ತಂದೆಯೂ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸಿದ್ದಾರೆ.

ಇನ್ನು ಮುಂಬೈ ಬ್ಯಾಟರ್​ ಶ್ರೇಯಸ್​ ಅಯ್ಯರ್​ ಅವರ ತಾಯಿ ರೋಹಿಣಿ ಮಂಗಳೂರು ಮೂಲದವರು. ಹೀಗಾಗಿ ಶ್ರೇಯಸ್​ ಅಯ್ಯರ್​ ನೀರ್​ದೋಸೆ ಸಹಿತ ಕರ್ನಾಟಕದ ಹಲವು ತಿಂಡಿಗಳನ್ನೇ ಇಷ್ಟಪಡುತ್ತಾರೆ. ಕರೊನಾ ಲಾಕ್​ಡೌನ್​ ಸಮಯದಲ್ಲಿ ಶ್ರೇಯಸ್​, ವಿರಾಟ್​ ಕೊಹ್ಲಿ ಮನೆಗೆ ನೀರ್​ದೋಸೆ ತೆಗೆದುಕೊಂಡು ಹೋಗಿ ಕೊಟ್ಟು ಸುದ್ದಿಯಾಗಿದ್ದರು.

ವಿಶ್ವಕಪ್​ ತಂಡದಲ್ಲಿರುವ ಮತ್ತೋರ್ವ ಮುಂಬೈ ಆಟಗಾರ ಸೂರ್ಯಕುಮಾರ್​ ಯಾದವ್​ ಅವರ ಪತ್ನಿ ದೇವಿಶಾ ಶೆಟ್ಟಿ ಕೂಡ ಮಂಗಳೂರು ಮೂಲದವರು. 2016ರ ಜುಲೈನಲ್ಲಿ ಅವರಿಬ್ಬರು ಮಂಗಳೂರು ಶೈಲಿಯಲ್ಲೇ ವಿವಾಹವಾಗಿದ್ದರು. ದೇವಿಶಾ ತಂದೆ ಮುಂಬೈನಲ್ಲಿ ಹೋಟೆಲ್​ ಉದ್ಯಮಿಯಾಗಿದ್ದಾರೆ. ಸೂರ್ಯ-ದೇವಿಶಾ ಇಬ್ಬರೂ ಕಾಲೇಜು ದಿನಗಳಿಂದಲೂ ಪರಿಚಿತರಾಗಿದ್ದರು.

ಟೀಮ್​ ಇಂಡಿಯಾದ ವೇಗಿ ಮೊಹಮದ್​ ಸಿರಾಜ್​ ಐಪಿಎಲ್​ನಲ್ಲಿ ಆರ್​ಸಿಬಿ ತಂಡದ ಪ್ರಮುಖ ಆಟಗಾರರಾಗಿದ್ದಾರೆ. ಹೀಗಾಗಿ ಅವರು ರಾಜ್ಯದ ಕ್ರಿಕೆಟ್​ ಪ್ರೇಮಿಗಳ ಬೆಂಬಲವನ್ನು ಹೆಚ್ಚಿನ ಸಂಖ್ಯೆಯಲ್ಲಿ ಪಡೆದುಕೊಂಡಿದ್ದಾರೆ.
10 ವರ್ಷಗಳ ಬಳಿಕ ಐಸಿಸಿ ಟೂರ್ನಿಗೆ ಶಿಖರ್​ ಧವನ್​ ಮಿಸ್​! ಟಾಪ್​ ಸ್ಕೋರರ್​ ಕಡೆಗಣಿಸಿದ ಭಾರತ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 1 =
Remember me
