ಬೆಂಗಳೂರು/ಬೆಳಗಾವಿ: ಮುಖ್ಯಮಂತ್ರಿ ಕರೊನಾ ಪರಿಹಾರ ನಿಧಿಗೆ ಬುಧವಾರ ಕೆಎಲ್‌ಇ ಸಂಸ್ಥೆಯಿಂದ 2 ಕೋಟಿ ರೂ., ಇತರ ಸಹಕಾರಿ ಬ್ಯಾಂಕ್ ಹಾಗೂ ಕಾರ್ಖಾನೆಗಳಿಂದ 31 ಲಕ್ಷ ಸೇರಿ ಒಟ್ಟು 2.31 ಕೋಟಿ ರೂ. ದೇಣಿಗೆ ನೀಡಲಾಯಿತು. ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ, ರಾಜ್ಯಸಭಾ ಸದಸ್ಯ ಡಾ. ಪ್ರಭಾಕರ ಕೋರೆ ಅವರು, ಬೆಂಗಳೂರಿನಲ್ಲಿರುವ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಡಿ.ಡಿ.ಗಳನ್ನು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಸಿಎಂ ಬಿ.ಎಸ್. ಯಡಿಯೂರಪ್ಪ ಮಾತನಾಡಿ, ಮಹಾಮಾರಿ ಕರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಕೈ ಜೋಡಿಸಿದ ಕೆಎಲ್‌ಇ ಸಂಸ್ಥೆ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಇತರ ಸಹಕಾರಿ ಬ್ಯಾಂಕ್‌ಗಳು, ಕಾರ್ಖಾನೆ, ಯಡೂರಿನ ಶ್ರೀಮಠವು ನೀಡಿರುವ ಸಹಾಯಹಸ್ತವನ್ನು ಕೂಡ ಬಿಎಸ್‌ವೈ ಅಭಿನಂದಿಸಿದರು.
ಇದನ್ನೂ ಓದಿ:ರಾಜ್ಯ ಪೊಲೀಸ್​ ಇಲಾಖೆಯಲ್ಲಿ 2,672 ಕಾನ್​ಸ್ಟೆಬಲ್​, 162 ಎಸ್​ಐ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
ಡಾ. ಪ್ರಭಾಕರ ಕೋರೆ ಮಾತನಾಡಿ, ಇಂದು ಇಡೀ ವಿಶ್ವ ಕರೊನಾ ವೈರಸ್ ಬಾಹುಬಂಧನದಲ್ಲಿ ಸಿಲುಕಿಕೊಂಡು ತತ್ತರಿಸುತ್ತಿರುವುದು ಖೇದಕರ ಸಂಗತಿ. ಅತ್ಯಂತ ವೇಗವಾಗಿ ವ್ಯಾಪಿಸುತ್ತಿರುವ ಈ ವೈರಸ್‌ನಿಂದಾಗಿ ದೇಶ ಹಾಗೂ ರಾಜ್ಯ ಸಂಕಷ್ಟ ಎದುರಿಸುತ್ತಿದೆ. ರಾಜ್ಯ ಸರ್ಕಾರ ವೈರಸ್ ನಿಯಂತ್ರಣಕ್ಕೆ ಹಗಲಿರುಳು ಹೋರಾಡುತ್ತಿದೆ. ನಿರಂತರವಾಗಿ ಜನಸಾಮಾನ್ಯರ, ರೈತರ, ಕೂಲಿ ಕಾರ್ಮಿಕರ, ದುರ್ಬಲರ ಸೇವೆ ಮಾಡುತ್ತಿದೆ. ಬಿ.ಎಸ್. ಯಡಿಯೂರಪ್ಪ ಅವರು ಸಕಾಲಕ್ಕೆ ಕೈಗೊಂಡ ದಿಟ್ಟ ಕ್ರಮಗಳಿಂದ ರಾಜ್ಯದ ಜನತೆ ಸಂಕಷ್ಟದಿಂದ ಹೊರಬರುತ್ತಿದ್ದಾರೆ. ಸರ್ಕಾರಕ್ಕೆ ಕೆಎಲ್‌ಇ ಸಂಸ್ಥೆ ವತಿಯಿಂದ ಅಗತ್ಯ ನೆರವು ನೀಡಲಾಗುವುದು ಎಂದು ಭರವಸೆ ನೀಡಿದರು.
ಇದನ್ನೂ ಓದಿ:ಮದ್ಯಪ್ರಿಯರಿಗೆ ಶಾಕಿಂಗ್​ ನ್ಯೂಸ್​: ಕುಡುಕರ ಆಸೆ ಈಡೇರಿಸಿ ಜೇಬಿಗೆ ಕತ್ತರಿ ಹಾಕಿದ ಸರ್ಕಾರ
ಕೆಎಲ್‌ಇ ಸಂಸ್ಥೆಯ ವತಿಯಿಂದ 2 ಕೋಟಿ ರೂ., ಅಂಕಲಿಯ ಡಾ.ಪ್ರಭಾಕರ ಕೋರೆ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತದಿಂದ 11 ಲಕ್ಷ ರೂ., ಚಿಕ್ಕೋಡಿಯ ಚಿದಾನಂದ ಬಸಪ್ರಭು ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆ ನಿಯಮಿತದಿಂದ 5 ಲಕ್ಷ ರೂ., ರಾಯಬಾಗದ ಬಾವನಸವದತ್ತಿಯ ಮೆ. ಶಿವಶಕ್ತಿ ಶುಗರ್ಸ್ ಲಿ.ನಿಂದ 5 ಲಕ್ಷ ರೂ., ಬೆಳಗಾವಿಯ ರಾಣಿ ಚನ್ನಮ್ಮ ಮಹಿಳಾ ಸಹಕಾರಿ ಬ್ಯಾಂಕ್ ನಿಯಮಿತದಿಂದ 5 ಲಕ್ಷ ರೂ., ಶ್ರೀ ಕ್ಷೇತ್ರ ಯಡೂರನ ಕಾಡಸಿದ್ಧೇಶ್ವರ ಸಂಸ್ಥಾನಮಠದ ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಅವರಿಂದ 5 ಲಕ್ಷ ರೂ. ಸೇರಿ ಒಟ್ಟು 2.31 ಕೋಟಿ ರೂ. ನೀಡಲಾಯಿತು.
ಕೆಎಲ್‌ಇ ಸಂಸ್ಥೆ ನಿರ್ದೇಶಕ, ವಿಧಾನ ಪರಿಷತ್ ಆಡಳಿತ ಪಕ್ಷದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್, ಸಚಿವ ರಮೇಶ ಜಾರಕಿಹೊಳಿ, ಶಂಕರಗೌಡ ಪಾಟೀಲ ಇದ್ದರು.
ಎಚ್ಚರಿಕೆಯಿಂದ ಇರಿ – ಮೊಟ್ಟೆಗಳನ್ನು ನೋಡಿ ಬೆಚ್ಚಿ ಬಿದ್ದ ಜುವೆಲ್ಲರಿ ಶಾಪ್ ಮಾಲೀಕ !

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × one =
Remember me
