ಬೆಂಗಳೂರು:ನಮ್ಮ ರಾಜ್ಯ ಮತ್ತು ದೇಶದಲ್ಲಿ ಖ್ಯಾತಿಯನ್ನು ಗಳಿಸಿರುವ ನಂದಿನಿ ಬ್ರ್ಯಾಂಡ್ ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಲು ಸಜ್ಜಾಗಿದೆ. ಈ ಬಗ್ಗೆ ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಹುಡುಗರು ಸೊಂಟದ ಮೇಲೆ ಕೈ ಇಟ್ಟರೆ, ದೂರು ನೀಡುವ ಬದಲು ಎಂಜಾಯ್​ ಮಾಡಿ: ನಟಿ ರೇಖಾ ನಾಯರ್​ ವಿವಾದ
ಇಂದು(ಜುಲೈ 06) ಹಾಲು ಒಕ್ಕೂಟಗಳ ಕೆಎಂಎಫ್ ಬೋರ್ಡ್ ಮೀಟಿಂಗ್ ಸಭೆ ನಡೆದಿದ್ದು, ನಂದಿನಿ ಹಾಲಿನ ದರ ಏರಿಕೆಯ ಬಗ್ಗೆ ಸಿಎಂ ಜತೆ ಚರ್ಚೆ ನಡೆಸಲು ಯೋಜಿಸಿದೆ. ಜುಲೈ 11ಕ್ಕೆ ಸಿಎಂ ಜತೆ ಸಭೆ ನಿಗದಿಯಾಗಿದ್ದು, ಹಾಲಿನ ದರ ಹೆಚ್ಚಳ ಸಂಬಂಧ ಮುಖ್ಯಮಂತ್ರಿಗಳೊಟ್ಟಿಗೆ ಸಭೆ ನಡೆಸಿ ಬಳಿಕ ತೀರ್ಮಾನ ಕೈಗೊಳ್ಳಲಿದ್ದೇವೆ ಎಂದು ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್ ಹೇಳಿದ್ದಾರೆ.
ದೇಶದ ಬಳಿಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಂದಿನಿ ಬ್ರ್ಯಾಂಡ್ ಪಸರಿಸಲಿದೆ. “ಈಗಾಗಲೇ ದೇಶವ್ಯಾಪಿ ಅತ್ಯುತ್ತಮ ಬ್ರ್ಯಾಂಡ್ ಎಂದು ಹೆಸರುವಾಸಿಯಾಗಿರುವ ನಂದಿನಿ, ದುಬೈನ ಕರಾಮದಲ್ಲಿ ನೂತನ ಮಳಿಗೆ ಆರಂಭಿಸಲಿದೆ. ದುಬೈನಲ್ಲಿ ಮೊದಲ ‘ನಂದಿನಿ ಕೆಫೆ ಮೂ’ ಆಗಸ್ಟ್​​ನಲ್ಲಿ ಉದ್ಘಾಟನೆಗೊಳ್ಳಲಿದೆ. ಇದಕ್ಕೆ ಕೆಎಂಎಫ್ ಸಂಪೂರ್ಣ ಸಿದ್ದತೆ ನಡೆಸುತ್ತಿದೆ” ಎಂದು ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × four =
Remember me
