
ಬೆಂಗಳೂರು:ದೇಸಿ ಹಸುವಿನ ತುಪ್ಪವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೃಹ ಕಚೇರಿ ಕೃಷ್ಣಾದಲ್ಲಿ ಬಿಡುಗಡೆ ಮಾಡಿದರು.ನಂದಿನಿ ದೇಸಿ ಹಸುವಿನ ತುಪ್ಪ 200 ಮಿಲಿ ಮತ್ತು 500 ಮಿಲಿ ಬಾಟಲ್‌ಗಳಲ್ಲಿ ಗ್ರಾಹಕರಿಗೆ ಮಾರುಕಟ್ಟೆಯಲ್ಲಿ ಲಭ್ಯವಿದೆ. 500 ಮಿಲಿ ಬಾಟಲ್‌ನ ದರ 900 ರೂ. 200 ಮಿಲಿ ಬಾಟಲ್‌ನ ದರ 400 ರೂ ಇದೆ.ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಗಳಲ್ಲಿ ಲಭ್ಯವಿರುವ ನಾಟಿ ಹಸುವಿನ ಹಾಲನ್ನು ಪ್ರತ್ಯೇಕವಾಗಿ ಬೆಂಗಳೂರು ಹಾಲು ಒಕ್ಕೂಟದಲ್ಲಿ ಸಂಗ್ರಹಿಸಿಲಾಗುತ್ತದೆ. ಬೆಂಗಳೂರು ಹಾಲು ಒಕ್ಕೂಟದಲ್ಲಿ ಈ ಹಾಲನ್ನು ಸಂಗ್ರಹಿಸಲು ಮಾಗಡಿ ಮತ್ತು ಕನಕಪುರ ತಾಲೂಕಿನ ಮರಳವಾಡಿ, ಕೋಡಿಹಳ್ಳಿ, ಮಾಡಬಾಳು ಮತ್ತು ಕಸಬಾ ಹೋಬಳಿಯ 87 ಹಾಲು ಉತ್ಪಾದಕರ ಸಂಘಗಳನ್ನು ಗುರುತಿಸಲಾಗಿದೆ. ಈ ಸಂಘಗಳಲ್ಲಿ ದೇಸಿ ಹಸುಗಳಾದ ಶಾಹೀವಾಲ್, ಗಿರ್, ಅಮೃತ್ ಮಹಲ್ ಮತ್ತು ಹಳ್ಳಿಕ್ರಾಸ್ ತಳಿಗಳಿಂದ ಹಾಲನ್ನು ಪ್ರತ್ಯೇಕವಾಗಿ ನಿಗದಿಪಡಿಸಿರುವ ಮೂರು ಬಲ್ಕ್ ಮಿಲ್ಕ್ ಕೂಲರ್ (ಆಇ) ಗಳಲ್ಲಿ ಸಂಗ್ರಹಿಸಿ ಪ್ರತ್ಯೇಕವಾದ ಹಾಲಿನ ಟ್ಯಾಂಕರ್‌ಗಳಲ್ಲಿ ರವಾನಿಸುವ ಮತ್ತು ಮಾರುಕಟ್ಟೆಗೆ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ.
ದೇಸಿ ಹಸುವಿನ ತುಪ್ಪದ ಅನುಕೂಲಗಳು:ದೇಸಿ ತುಪ್ಪ ಸೇವನೆಯಿಂದ ಹೃದಯ ಮತ್ತು ಮೂಳೆಗಳ ಆರೋಗ್ಯವು ವೃದ್ಧಿಸುತ್ತದೆ. ದೇಸಿ ತುಪ್ಪವು ವಿಟಮಿನ್ ಎ, ಡಿ, ಇ ಮತ್ತು ಕೆ ಯ ಸಮೃದ್ದ ಮೂಲವಾಗಿದ್ದು, ರೋಗನಿರೋದಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ದೇಸಿ ತುಪ್ಪವು ಬ್ಯುಟರಿಕ್ ಆಮ್ಲವನ್ನು ಸಹ ಹೊಂದಿದ್ದು, ಕರುಳಿನ ಆರೋಗ್ಯವನ್ನು ಸುಧಾರಿಸಲು ಮತ್ತು ಉತ್ತಮ ಜೀರ್ಣಕ್ರಿಯೆಗೆ ಸಹಕಾರಿಯಾಗುತ್ತದೆ. ದೇಸಿ ತುಪ್ಪದಲ್ಲಿ ಉಎಅ-3 ಆರೋಗ್ಯವೃದ್ಧಿಗೆ ಅನುಕೂಲಕರ ಇರುವುದರಿಂದ ಕಣ್ಣಿನ ಚರ್ಮದ ಕಾಂತಿ ಮತ್ತು ಪೋಷಣೆಗೆ ಅನುಕೂಲಕರ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:eighteen − 7 =
Remember me
