
ಬೆಂಗಳೂರು:ತಿರುಪತಿ ತಿಮ್ಮಪ್ಪ ದೇಗುಲದಲ್ಲಿ ನೀಡುವ ಲಡ್ಡುವಿನಲ್ಲಿ ಇನ್ನು ಮುಂದೆ ನಂದಿನಿ ಹಾಲಿನ ಕಂಪು ಮರುಕಳಿಸಲಿದೆ. ಕಳೆದ 3 ವರ್ಷಗಳಿಂದ ನಿಂತು ಹೋಗಿದ್ದ ಕೆಎಂಎ್ ನಂದಿನಿ ತುಪ್ಪದ ಸರಬರಾಜು ಮತ್ತೆ ಶುರುವಾಗಿದೆ.ಮುಖ್ಯಮಂತ್ರಿ ಗೃಹ ಕಚೇರಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ನಂದಿನಿ ತುಪ್ಪವನ್ನು ಹೊತ್ತು ತಿರುಪತಿಗೆ ಹೊರಟು ನಿಂತ ಟ್ಯಾಂಕರ್‌ಗೆ ಚಾಲನೆ ನೀಡಿದರು.ಸದ್ಯ 350 ಮೆಟ್ರಿಕ್ ಟನ್ ತುಪ್ಪಕ್ಕೆ ಬೇಡಿಕೆ ಬಂದಿದ್ದು, ಮೊದಲ ದಿನ 20 ಸಾವಿರ ಕೆಜಿ ತುಪ್ಪದ ಟ್ಯಾಂಕರ್ ಪ್ರಯಾಣ ಬೆಳೆಸಿದೆ. ವಾರದಲ್ಲಿ 3 ರಿಂದ 4 ಟ್ಯಾಂಕರ್‌ನಲ್ಲಿ ತುಪ್ಪ ಸರಬರಾಜು ಮಾಡಲು ಕೆಎಂಎ್ ಸಿದ್ಧತೆ ಮಾಡಿಕೊಂಡಿದೆ.2013 ರಿಂದ 2021 ತನಕ 5000 ಮೆ.ಟನ್ ತುಪ್ಪವನ್ನು ತಿರುಮಲ ತಿರುಪತಿ ದೇವಸ್ಥಾನಕ್ಕೆ ಸರಬರಾಜು ಮಾಡಲಾಗಿತ್ತು. ಮೂರು ವರ್ಷಗಳ ಹಿಂದೆ ಕಡಿಮೆ ಬಿಡ್ ಇದ್ದ ಖಾಸಗಿಯವರಿಗೆ ತುಪ್ಪ ಸರಬರಾಜು ಮಾಡುವ ಅವಕಶ ದೊರೆತ ಹಿನ್ನೆಲೆಯಲ್ಲಿ ಕೆಎಂಎ್ಗೆ ಅವಕಾಶ ಕೈ ತಪ್ಪಿತ್ತು. ಕಡಿಮೆ ಬಿಡ್ ಪಡೆದ ಖಾಸಗಿಯವರು ಕಡಿಮೆ ಗುಣಮಟ್ಟದ ತುಪ್ಪ ಸರಬರಾಜು ಮಾಡಿದ್ದರಿಂದ ಆಸಂಸ್ಥೆಗಳನ್ನು ತಿರುಪತಿ ತಿರುಮಲ ಮಂಡಳಿಗೆ (ಟಿಟಿಡಿ)ಕಪ್ಪು ಪಟ್ಟಿಗೆ ಸೇರಿಸಿದ್ದರಿಂದ, ಕೆಎಂಎ್ಗೆ ಮತ್ತೆ ಅವಕಾಶ ಲಭ್ಯವಾಗಿದೆ.
*ತಿರುಪತಿಗೆ ಮೊದಲ ಹಂತದಲ್ಲಿ 350 ಮೆಟ್ರಿಕ್ ಟನ್ ತುಪ್ಪಕ್ಕೆ ಬೇಡಿಕೆ ಬಂದಿದ್ದು, ಇಂದಿನಿಂದಲೇ ಸರಬರಾಜು ಮಾಡಲು ಕ್ರಮ ಕೈಗೊಳ್ಳಲಾಗಿದೆ.-ಭೀಮಾನಾಯಕ್, ಅಧ್ಯಕ್ಷರು, ಕೆಎಂಎ್.
*ತಿರುಪತಿ ಲಡ್ಡು ತಯಾರಿಕೆಗೆ ಮೊದಲೆಲ್ಲ ನಂದಿನಿ ತುಪ್ಪ ಬಳಕೆ ಮಾಡಲಾಗುತ್ತಿತ್ತು. ಕೆಲ ಕಾರಣದಿಂದ 3 ವರ್ಷಗಳಿಂದ ನಂದಿನಿ ತುಪ್ಪವನ್ನು ಅಲ್ಲಿಗೆ ಸರಬರಾಜು ಮಾಡಿರಲಿಲ್ಲ. ಈ ಬಾರಿ ಮತ್ತೆ ನಂದಿನಿ ತಪ್ಪಕ್ಕೆ ಬೇಡಿಕೆ ಬಂದಿರುವುದು ಸಂತಸದ ಸಂಗತಿ.-ಜಗದೀಶ್, ಎಂಡಿ, ಕೆಎಂಎ್.
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:16 − thirteen =
Remember me
