
ಬೆಂಗಳೂರು:ಮುಂಬಯಿ, ಹೈದರಾಬಾದ್ ಮಾರುಕಟ್ಟೆಯಲ್ಲಿ ನಂದಿನಿ ಉತ್ಪನ್ನಗಳನ್ನು ಮಾರಾಟ ಮಾಡುವ ಮೂಲಕ ಹಿಡಿತ ಸಾಧಿಸಿರುವ ಕೆಎಂಎ್ ಈಗ ದೆಹಲಿ ಮಾರುಕಟ್ಟೆಗೆ ಲಗ್ಗೆ ಇಡಲು ಯೋಜನೆ ರೂಪಿಸಿಕೊಂಡಿದೆ.ಕೆಎಂಎ್ ಹಾಲು ಸಂಗ್ರಹ 1 ಕೋಟಿ ಲೀಟರ್ ದಾಟಿದ ದಾಖಲೆ ಬರೆದ ಕೆಎಂಎ್ಗೆ ಈಗ ಹೆಚ್ಚುವರಿ ಹಾಲನ್ನು ಉತ್ಪನ್ನಗಳನ್ನಾಗಿ ಪರಿವರ್ತನೆ ಮಾಡಿ ಮಾರಾಟ ಮಾಡುವ ಸವಾಲು ಎದುರಾಗಿದೆ. ಹಾಗಾಗಿ ಮಾರುಕಟ್ಟೆಯ ತನ್ನ ಜಾಲವನ್ನು ಇನ್ನಷ್ಟು ವಿಸ್ತಾರ ಮಾಡಿಕೊಂಡು ಉತ್ಪನ್ನಗಳನ್ನು ಮಾರಾಟ ಮಾಡಲು ಕೆಎಂಎ್ ಮುಂದಾಗಿದೆ.
ತಿರುಪತಿಗೆ ಮತ್ತಷ್ಟು ನಂದಿನಿ ತುಪ್ಪತಿರುಪತಿ ಲಡ್ಡು ತಯಾರಿಕೆಗಾಗಿ ನಂದಿನಿ ತುಪ್ಪಕ್ಕೆ ಬೇಡಿಕೆ ಬಂದ ಹಿನ್ನೆಲೆಯಲ್ಲಿ ಮೊದಲ ಹಂತದಲ್ಲಿ 350 ಟನ್ ತುಪ್ಪವನ್ನು ಪೂರೈಕೆ ಮಾಡಲು ಕೆಎಂಎ್ ಟೆಂಡರ್ ಪಡೆದಿತ್ತು. ಈ ಟೆಂಡರ್‌ನಲ್ಲಿ ಈಗಾಗಲೇ 150 ಮೆಟ್ರಿಕ್ ಟನ್ ತುಪ್ಪವನ್ನು ಕೆಎಂಎ್ ಪೂರೈಕೆ ಮಾಡಿದೆ. ಇನ್ನುಳಿದ ತುಪ್ಪವನ್ನು ಶೀಘ್ರವೇ ಪೂರೈಕೆ ಮಾಡಲಿದೆ. ಈ ನಡುವೆ ಟಿಟಿಡಿ ಮತ್ತೊಮ್ಮೆ 2 ಸಾವಿರ ಮೆಟ್ರಿಕ್ ಟನ್ ತುಪ್ಪ ಖರೀದಿಗೆ ಟೆಂಡರ್ ಕರೆದಿದೆ. ಈ ಟೆಂಡರ್‌ನಲ್ಲಿಯೂ ಭಾಗವಹಿಸಿ ತಿರುಪತಿಗೆ ತುಪ್ಪ ಸರಬರಾಜು ಮಾಡಲು ಕೆಎಂಎ್ ಸಿದ್ಧತೆ ಮಾಡಿಕೊಳ್ಳುತ್ತಿದೆ.
ತುಪ್ಪಕ್ಕೆ ಇನ್ನಷ್ಟು ಬೇಡಿಕೆ ನಿರೀಕ್ಷೆಕೆಎಂಎ್ ತುಪ್ಪಕ್ಕೆ ಕ್ರಮೇಣ ಉತ್ತಮ ಬೇಡಿಕೆ ಬರುತ್ತಿದ್ದು, ಮಾರುಕಟ್ಟೆಯಲ್ಲಿ ಬೆಲೆಯೂ ಸುಧಾರಿಸಿದೆ. ಮುಂದಿನ ದಿನಗಳಲ್ಲಿ ಬೇಡಿಕೆ ಪ್ರಮಾಣ ಹೆಚ್ಚಾಗಲಿದ್ದು, ಬೆಲೆಯೂ ಹೆಚ್ಚಳವಾಗಲಿದೆ ಎನ್ನುವ ನಿರೀಕ್ಷೆ ಕೆಎಂಎ್ಗಿದೆ.
*ಕೆಎಂಎ್ ಉತ್ಪನ್ನಗಳನ್ನು ಮಾರಾಟ ಮಾಡಲು ಮಾರುಕಟ್ಟೆಯ ಜಾಲವನ್ನು ವಿಸ್ತಾರ ಮಾಡಿಕೊಳ್ಳಲಾಗುತ್ತಿದೆ. ಈ ಯೋಜನೆ ಅಂಗವಾಗಿ ದೆಹಲಿ ಮಾರುಕಟ್ಟೆಯಲ್ಲಿಯೂ ನಂದಿನಿ ಉತ್ಪನ್ನಗಳು ಪ್ರವೇಶಿಸಲಿವೆ.-ಜಗದೀಶ್, ಎಂಡಿ, ಕೆಎಂಎ್.
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
Sign in to your account
Please enter an answer in digits:thirteen − 12 =
Remember me
