ಮೈಸೂರು:ಪೆನ್​ಡ್ರೈವ್​ ಹೆಸರಿನಲ್ಲಿ ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ದಂಧೆ ನಡೆಸುತ್ತಿದ್ದಾರೆ ಎಂದು ಸಹಕಾರ ಸಚಿವ ಕೆ.ಎನ್​. ರಾಜಣ್ಣ ಆರೋಪಿಸಿದ್ದಾರೆ.
ಮೈಸೂರಿನಲ್ಲಿ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ರಾಜಣ್ಣ ಕುಮಾರಸ್ವಾಮಿಯವರಿಗೆ ತಾಕತ್​ ಇದ್ರೆ ಪೆನ್​ಡ್ರೈವ್ನಲ್ಲಿ ಏನಿದೆ ಎಂಬುದನ್ನು ತೋರಿಸಲಿ ಎಂದು ಸವಾಲೆಸೆದಿದ್ದಾರೆ.
ಕುಮಾರಸ್ವಾಮಿ ಅವರು ಪೆನ್​ಡ್ರೈವ್​ ಇಟ್ಟುಕೊಂಡು ದಂಧೆ ಮಾಡುತ್ತಿದ್ದಾರೆ. ಸುಮ್ಮನೆ ಈ ರೀತಿ ಹೇಳುವ ಬದಲು ಅದರಲ್ಲಿ ಏನಿದೆ ಎಂಬುದನ್ನು ಜನತೆಗೆ ತೋರಿಸಲಿ. ಅವರ ಪರಿಸ್ಥಿತಿ ಹೇಗಾಗಿದೆ ಎಂದರೆ ಜಾತ್ರೆಗಳಲ್ಲಿ ಬುಟ್ಟಿ ಹಿಡಿದುಕೊಂದು ಹಾವಿದೆ ಹಾವಿದೆ ಎಂದು ಹೇಳುತ್ತಾರಲ್ಲ ಹಾಗಾಗಿದೆ ಎಂದು ಟೀಕಿಸಿದ್ದಾರೆ.
ಅವರ ಬಳಿ ಇರುವ ಬುಟ್ಟಿಯಲ್ಲಿ ಯಾವ ಹಾವು ಇಲ್ಲ ಸುಮನ್ನೆ ಪೆನ್​ಡ್ರೈವ್​ ಹಿಡಿದುಕೊಂಡು ಓಡಾಡುತ್ತಿದ್ದಾರೆ. ಒಂದು ವೇಳೆ ಅಂತಹ ಮಹತ್ವದ ವಿಚಾರ ಇದ್ದರೂ ಸಹ ಬಿಡುಗಡೆ ಮಾಡುವ ವಿಚಾರದಲ್ಲಿ ತಡ ಯಾಕೆ ಮಾಡುತ್ತಿದ್ದೀರಾ. ಈ ವಿವಾರದಲ್ಲಿ ನನಗೆ ಯಾವುದೇ ಕುತೂಹಲ ಇಲ್ಲ ಮುಂದೆ ಈ ಬಗ್ಗೆ ಗುತ್ತಾಗುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಏಷ್ಯನ್​ ಗೇಮ್ಸ್​ 2023; ಪುರುಷ-ಮಹಿಳಾ ಕ್ರಿಕೆಟ್​ ತಂಡವನ್ನು ಕಳುಹಿಸಲು ಅನುಮತಿಸಿದ ಬಿಸಿಸಿಐ
ಇನ್ನು ಹಾಲಿನ ಪ್ರೋತ್ಸಾಹ ಧನ ಏರಿಕೆ ಕುರಿತು ಸರ್ಕಾರದ ಮುಂದೆ ಪ್ರಸ್ತಾಪ ಸಲ್ಲಿಕೆಯಾಗಿದ್ದು, ಈ ಕುರಿತು ಚಿಂತನೆ ನಡೆಸಲಾಗುತ್ತಿದೆ. ಈ ಬಗ್ಗೆ ಹಾಲಿನ ದರ ಏರಿಕೆ ಎಂದ ಕೂಡಲ್ಲೇ ಜನ ಗಾಬರಿಯಾಗುತ್ತಾರೆ. ಇದರಲ್ಲಿ ಎರಡು ವಿಧಗಳಿದ್ದು, ಒಂದು ಹಾಲು ಉತ್ಪಾದಕರಿಗೆ ಕೊಡುವುದು ಮತ್ತೊಂದು ಖರೀದಿ ಮಾಡುವವರಿಗೆ ದರ ಜಾಸ್ತಿ ಮಾಡುವುದು ಎಂದು ಸ್ಪಷ್ಟಪಡಿಸಿದ್ದಾರೆ.
ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ನಮ್ಮಲ್ಲಿ ಈ ಎರಡರ ದರವು ಕಡಿಮೆ ಇದೆ. ಹಾಲಿನ ಉತ್ಪಾದಕರಿಗೆ ನಾವು ಸಹಾಯ ಮಾಡಬೇಕಾಗಿದ್ದು, ಈ ಬಗ್ಗೆ ಮುಂದಿನ ದಿನಗಳಲ್ಲಿ ಯಾರಿಗೂ ಹೊರಯಾಗದಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಹಕಾರ ಸಚಿವ ಕೆ.ಎನ್​. ರಾಜಣ್ಣ ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × one =
Remember me
