ಹಾಸನ:ಜಿಲ್ಲೆಯ ಅಧಿದೇವತೆ ಹಾಸನಾಂಬ ದೇವಿಯ ಜಾತ್ರಾ ಮಹೋತ್ಸವವನ್ನು ನವೆಂಬರ್​ 2ರಿಂದ 15 ವರೆಗೆ ನಡೆಯಲಿದ್ದು, ದಿನದ 24 ಘಂಟೆಯೂ ದರ್ಶನಕ್ಕೆ ಅವಕಾಶ ಇರಲಿದೆ ಎಂದು ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ತಿಳಿಸಿದ್ದಾರೆ.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಹಾಸನಾಂಬ ಜಾತ್ರಾ ಮಹೋತ್ಸವದ ಸಂಬಂಧ ನಡೆದ ಪೂರ್ವಭಾವಿ ಸಭೆಯ ನಂತರ ಸಚಿವರು ಅಧಿಕೃತ ದಿನಾಂಕವನ್ನು ಘೋಷಿಸಿದ್ದಾರೆ.
ಬಳಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಸಚಿವ ರಾಜಣ್ಣ ಶಕ್ತಿ ಯೋಜನೆಯಿಂದಾಗಿ ಈ ಬಾರಿ ಮಹಿಳೆಯರು ರಾಜ್ಯದ ನಾನಾ ಮೂಲೆಗಳಿಂದ ಬರಲಿದ್ದಾರೆ. ಕಳೆದ ವರ್ಷ ಆರು ಲಕ್ಷ ಮಹಿಳೆಯರು ದೇವಿಯ ದರ್ಶನ ಪಡೆದಿದ್ದರು. ಈ ಬಾರಿ 10 ಲಕ್ಷ ಮೀರುವ ಸಂಭವವಿದ್ದು, ಅದಕ್ಕೆ ಅನುಸಾರವಾಗಿ ಶೌಚಾಲಯ, ಪ್ರಸಾದ ವಿನಿಯೋಗ, ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯ ಒದಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ:ಕಾಂಗ್ರೆಸ್​ ಸರ್ಕಾರದ ಲಂಚಾವತಾರಕ್ಕೆ ಶೀಘ್ರವೇ ಕೊನೆ ಬೀಳಲಿದೆ: ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ
ಹೆಚ್ಚಿನ ಭಕ್ತಾದಿಗಳು ಬರುವುದರಿಂದ ಪೊಲೀಸರು ಕಟ್ಟುನಿಟ್ಟಾಗಿ ಕೆಲಸ ಮಾಡಬೇಕು. ಕರ್ತವ್ಯದಲ್ಲಿರುವ ವೇಳೆ ಕೆಲ ಪೊಲೀಸರು ಮೊಬೈಲ್​ ನೋಡಿಕೊಂಡು ಕುಳಿತುಕೊಂಡಿರುವುದನ್ನ ನಾನು ಕಂಡಿದ್ದೇನೆ. ಭಕ್ತಾದಿಗಳು ಹೆಚ್ಚಾಗಿ ಬರುವ ಕಾರಣ ಅಧಿಕಾರಿಗಳಿಗೆ ಜಾಗ್ರತೆಯಿಂದ ಕೆಲಸ ಮಾಡುವಂತೆ ತಾಕೀತು ಮಾಡಲು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿಗಳಿಗೆ ಸಚಿವ ರಾಜಣ್ಣ ಸೂಚನೆ ನೀಡಿದ್ದಾರೆ.
ಹಾಸನ ನಗರದಲ್ಲಿ ರಸ್ತೆ ಗುಂಡಿಗಳು ಹೆಚ್ಚಾಗಿದ್ದು ಈ ಸಂಬಂಧ ಅಧಿಕಾರಿಗಳಿಗೆ ಸಚಿವ ರಾಜಣ್ಣ ಸಭೆಯಲ್ಲಿ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ನಗರದಲ್ಲಿ ದಿನದಿಂದ ದಿನಕ್ಕೆ ರಸ್ತೆ ಗುಂಡಿಗಳು ಹೆಚ್ಚಾಗಿದ್ದು, ಪುಟ್​ಪಾತ್​ನಲ್ಲಿ ಕಳೆಗಳು ಬೆಳೆದಿವೆ. ಈಗಾಗಲೇ ಎರಡು ಬಾರಿ ಈ ಕುರಿತು ಹೇಳಿದ್ದೀನಿ ಆದರೆ, ಯಾವುದೇ ಪ್ರಯೋಜನವಾಗಿಲ್ಲ ಎಂದು ಕಿಡಿಕಾರಿದ್ದಾರೆ.
ಹೊರಗಡೆಯಿಂದ ಬಂದ ಜನ ಹಾಸನ ಸಿಟಿ ಚೆನ್ನಾಗಿದೆ ಎಂದು ಹೇಳಬೇಕು. ನಾನು ಮುಂದಿನ ಬಾರಿ ಜಿಲ್ಲೆಗೆ ಭೇಟಿ ನೀಡುವಷ್ಟರಲ್ಲಿ ರಸ್ತೆ ಗುಂಡಿಗಳನ್ನೆಲ್ಲಾ ಮುಚ್ಚಿ ಸ್ವಚ್ಛತೆಯನ್ನು ಕಾಪಾಡಿರಬೇಕು. ನಾನು ಪ್ರ್ಯಾಕ್ಟಿಕಲ್​ ವ್ಯಕ್ತಿ ಮುಂದಿನ ಸಭೆಯಲ್ಲಿ ಈ ನ್ಯೂನತೆಗಳನ್ನು ಸರಿಪಡಿಸದಿದ್ದರೆ ನಿಮ್ಮನ್ನು ವರ್ಗಾವಣೆ ಮಾಡಿಸುವುದಿಲ್ಲ ಬದಲಾಗಿ ಅಮಾನತು ಮಾಡಿಸುತ್ತೇನೆಂದು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್​. ರಾಜಣ್ಣ ಸಭೆಯಲ್ಲಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − five =
Remember me
