ಬೆಂಗಳೂರು:ಕೆಲ ದಿನಗಳ ಹಿಂದಷ್ಟೇ ಹಾಲಿನ ಬೆಲೆ ಏರಿಕೆ ಮಾಡುವ ಮೂಲಕ ರಾಜ್ಯದ ಜನರಿಗೆ ಶಾಕ್​ ನೀಡಿದ್ದ ಕೆಎಂಎಫ್​, ಇದೀಗ ರೈತರಿಗೆ ಶಾಕ್​ ನೀಡಲು ಮುಂದಾಗಿದೆ. ಸದಾ ಒಂದಿಲ್ಲೊಂದು ಸಮಸ್ಯೆ ಎದುರಿಸುವ ರೈತರಿಗೆ ಇದೀಗ ಕೋಲಾರ-ಚಿಕ್ಕಬಳ್ಳಾಪುರ ಹಾಲೂ ಒಕ್ಕೂಟ (ಕೋಚಿಮುಲ್​) ಪ್ರತಿ ಲೀಟರ್​ಗೆ 2 ರೂಪಾಯಿ ಕಡಿತಗೊಳಿಸಿ ಆದೇಶ ಹೊರಡಿಸಿದೆ.
ಪ್ರತಿ ಲೀಟರ್ ಹಾಲಿನ ಮೇಲೆ 2 ರುಪಾಯಿ ಕಡಿತ ಮಾಡಿದ್ದು, ನಾಳೆ(ಜು.05) ಬೆಳಿಗ್ಗೆಯಿಂದ ಜಾರಿಗೆ ಬರುವಂತೆ ಕೋಚಿಮುಲ್ ಸೂಚಿಸಿದೆ.ಈ ಮೊದಲು ಹಾಲು ಉತ್ಪಾದಕರಿಗೆ 33.40 ರೂ ನೀಡಲಾಗುತ್ತಿತ್ತು, ಆದರೆ, ನಾಳೆಯಿಂದ ಹಾಲು ಉತ್ಪಾದಕರಿಗೆ ಪರಿಷ್ಕೃತ ದರ ಲೀಟರ್​ಗೆ 31.40 ರೂ ನೀಡಲು ಆದೇಶಿಸಿದೆ.
ಹಾಲಿನ ಶೇಖರಣೆ ಹೆಚ್ಚಿಗೆ ಹಾಗೂ ಒಕ್ಕೂಟದ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಕೋಚಿಮುಲ್ ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿದು ಬಂದಿದೆ. ಇತ್ತೀಚಿಗಷ್ಟೇ ನಂದಿನಿ ಹಾಲಿನ ದರವನ್ನು ಏರಿಕೆ ಮಾಡುವ ಮೂಲಕ ಕೆಎಂಎಫ್​ ಜನರಿಗೆ ಶಾಕ್​ ನೀಡಿತ್ತು. ಇದೀಗ ಕೋಚಿಮುಲ್​ ದರವನ್ನು ಕಡಿತಗೊಳಿಸುವ ಮೂಲಕ ಹಾಲು ಉತ್ಪಾದಕರಿಗೆ ಶಾಕ್​ ನೀಡಿದೆ.

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:4 × two =
Remember me
