ಮಡಿಕೇರಿ:ಹೆತ್ತ ಮಗಳೇ ಅತ್ಯಾಚಾರ ಆರೋಪ ಮಾಡಿದ್ದಕ್ಕೆ ಮನನೊಂದ ತಂದೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೊಡಗು ಜಿಲ್ಲೆ ಮರಗೋಡು ಗ್ರಾಮದಲ್ಲಿ ನಡೆದಿದೆ.
ಪುದಿಯೊಕ್ಕಡ ಭರತ್(55) ಮೃತ ವ್ಯಕ್ತಿ. ಡೆತ್ ನೋಟ್ ಬರೆದಿಟ್ಟು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾವಿಗೆ ಪತ್ನಿ ಹಾಗೂ ಹಿರಿಯ ಮಗಳೇ ಕಾರಣ. ಅತ್ಯಾಚಾರ ಆರೋಪ ಮಾಡಿ ನನ್ನನ್ನು ಜೈಲಿಗೆ ಅಟ್ಟಿದರು. ನಾನು ಆರೋಪ ಮುಕ್ತನಾಗಿ ಬಂದರೂ ಸಹ ನೆಮ್ಮದಿಯಿಂದ ಬದುಕಲು ಬಿಡಲಿಲ್ಲ ಎಂದು ಬರೆದಿದ್ದಾರೆ.
ಇದನ್ನೂ ಓದಿರಿ:ಇಂಥವರೂ ಇರ್ತಾರಾ? ವಿದ್ಯಾರ್ಥಿಗಳ ಹಿತ ಕಾಯಬೇಕಿದ್ದ ಮಹಿಳಾ ಪ್ರಾಂಶುಪಾಲರಿಂದ ತಲೆತಗ್ಗಿಸೋ ಕೃತ್ಯ!
ಡಿವೋರ್ಸ್​ಗಾಗಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿರುವ ನನ್ನ ಪತ್ನಿ ಹಣ ಮತ್ತು ಆಸ್ತಿಗೆ ಬೇಡಿಕೆ ಇಟ್ಟಿದ್ದಾಳೆ. ನನ್ನ ಬಳಿ ಯಾವುದೇ ಆಸ್ತಿ ಇಲ್ಲ. ಬೇರೆ ದಾರಿ ಕಾಣದೇ ನಾನು ಆತ್ಮಹತ್ಯೆ ದಾರಿ ಹಿಡಿದಿದ್ದೇನೆ. ಅತ್ಯಾಚಾರ ಕಳಂಕ ಹೊತ್ತುಕೊಂಡು ಬದುಕುವುದು ಕಷ್ಟ. ಅತ್ಯಾಚಾರ ಪ್ರಕರಣದಲ್ಲಿ ನಮ್ಮ ದೇಶದ ಕಾನೂನು ಬದಲಾಗಬೇಕೆಂದು ಡೆತ್​ನೋಟ್​ನಲ್ಲಿ ಮನವಿ ಮಾಡಿದ್ದಾರೆ.
ಅಂದಹಾಗೆ ಭರತ್​ ಅವರ ಪುತ್ರಿ ಮೇಘ ತಂದೆಯ ವಿರುದ್ಧ ಅತ್ಯಾಚಾರ ಆರೋಪ ಹೊರಿಸಿದ್ದರು. ಕೋರ್ಟ್​ನಲ್ಲಿ ಆರೋಪ ಮುಕ್ತರಾಗಿ ಬಂದಿದ್ದರು. ಆದರೆ, ತನ್ನನ್ನು ಸಮಾಜ ಅತ್ಯಾಚಾರಿಯಂತೆ ನೋಡುತ್ತದೆ ಎಂದು ಮನನೊಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.(ದಿಗ್ವಿಜಯ ನ್ಯೂಸ್​)
ತಿರುಪತಿ ತಿಮ್ಮಪ್ಪನಿಗೆ ಮುಡಿ ಕೊಟ್ಟು ಮನೆಗೆ ಬಂದ ಚಾಲಕನಿಗೆ ಕಾದಿತ್ತು ಶಾಕ್​: ಇನ್ನೂ ಬಗೆಹರಿಯದ ಸಮಸ್ಯೆ!

ಬಾಯ್​ಫ್ರೆಂಡ್​ಗೆ ಕರೊನಾ ಬಂದ ಬೆನ್ನಲ್ಲೇ ಬಾಲಿವುಡ್​ ಬೆಡಗಿ ಆಲಿಯಾ ಭಟ್​ಗೂ ತಗುಲಿದ ಸೋಂಕು

ನಯನತಾರಾ-ಉದಯನಿಧಿ ಸ್ಟಾಲಿನ್​ ನಡುವೆ ರಹಸ್ಯ ಸಂಬಂಧ? ಹಿರಿಯ ನಟನ ಸ್ಫೋಟಕ ಹೇಳಿಕೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + nine =
Remember me
