ಕೊಡಗು:ಕರೊನಾ ಸಂಕಷ್ಟದ ನಡುವೆ ರಾಜ್ಯಕ್ಕೆ ಎಂಟ್ರಿ ನೀಡಿರುವ ತೌಕ್ತೆ ಚಂಡಮಾರುತದ ಪರಿಣಾಮದಿಂದ ಕೋವಿಡ್ ಸೋಂಕಿತರ ಅಂತ್ಯಕ್ರಿಯೆಗೆ ಪರದಾಡುವಂತಾಗಿದೆ.
ಶವಸಂಸ್ಕಾರಕ್ಕೆ ತಂದಿಟ್ಟ ಸೌದೆ ಮಳೆಗೆ ಒದ್ದೆಯಾಗಿದ್ದು, ಸ್ವಯಂಸೇವಕರು ಸೋಂಕಿತರ ಅಂತಿಮ ಕ್ರಿಯೆಗೆ ಹರಸಾಹಸ ಮಾಡುತ್ತಿದ್ದಾರೆ. ಜಿಟಿಜಿಟಿ ಮಳೆಯ ನಡುವೆಯೂ ಪಿಪಿಇ ಕಿಟ್, ರೈನ್ ಕೋಟ್ ಧರಿಸಿ ಸ್ವಯಂಸೇವಕರು ತಮ್ಮ ಸೇವಾ ಕಾರ್ಯವನ್ನು ಮುಂದುವರಿಸಿದ್ದಾರೆ.
ವಿಎಚ್‌ಪಿ, ಬಜರಂಗದಳ ಸ್ವಯಂಸೇವಕರು ಕಳೆದೊಂದು ವರ್ಷದಲ್ಲಿ 140ಕ್ಕೂ ಹೆಚ್ಚು ಶವಸಂಸ್ಕಾರ ಮಾಡಿದ್ದಾರೆ. ನಿನ್ನೆಯಿಂದ ಸುರಿಯುತ್ತಿರುವ ಮಳೆಯ ನಡುವೆಯೂ ಮಡಿಕೇರಿಯ ಹಿಂದು‌ ರುದ್ರಭೂಮಿಯಲ್ಲಿ ಶವಸಂಸ್ಕಾರ ಮಾಡುವ ಮೂಲಕ ಅವಿರತ ಸೇವೆ ಮುಂದುವರಿಸಿದ್ದಾರೆ.
ಕೇವಲ ಕೊಡಗು ಮಾತ್ರವಲ್ಲದೇ ರಾಜ್ಯದ ವಿವಿಧಿ ಭಾಗಗಳಲ್ಲಿ ತೌಕ್ತೆ ಚಂಡಮಾರುತದ ಪರಿಣಾಮ ಬೀರಿದ್ದು, ಶವಸಂಸ್ಕಾರಕ್ಕೆ ಭಾರಿ ತೊಂದರೆ ಆಗಿದೆ.(ದಿಗ್ವಿಜಯ ನ್ಯೂಸ್​)
ಕರಾವಳಿ ಸೇರಿದಂತೆ ರಾಜ್ಯಾದ್ಯಂತ ಭಾರಿ ಮಳೆ: ತೌಕ್ತೆ ಚಂಡಮಾರುತಕ್ಕೆ ಅಬ್ಬರಿಸುತ್ತಿದೆ ಸಮುದ್ರ

ಚಂಡಮಾರುತಕ್ಕೆ ಬೋಟ್​ ಸಿಲುಕಿ 8 ಮಂದಿ ನಾಪತ್ತೆ; ಒಬ್ಬರ ಶವ ಕಾಪು ಬಳಿ ಪತ್ತೆ

ಮಂಗಳೂರಿನಲ್ಲಿ ಚಂಡಮಾರುತಕ್ಕೆ ಸಿಲುಕಿದ್ದು ಒಂದಲ್ಲ ಎರಡು ಬೋಟ್; 14 ಮಂದಿ ನಾಪತ್ತೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 3 =
Remember me
