ಕೊಡಗು:ಮತ್ತು ಬರುವ ಪದಾರ್ಥಗಳಿಗೆ ದಾಸನಾಗುವ ವ್ಯಕ್ತಿಯು ಇಡೀ ಸಮಾಜದ ಮೇಲೆ ಪರಿಣಾಮ ಬೀರುತ್ತಾನೆ. ಇಂತಹ ವ್ಯಸನಿಗಳಿಂದ ಒಂದು ಕುಟುಂಬವೇ ನಾಶವಾಗುತ್ತದೆ. ಅದರಲ್ಲೂ ವ್ಯಸನ ಪದಾರ್ಥ ಸರಿಯಾದ ಸಮಯಕ್ಕೆ ಸಿಗದಿದ್ದರೆ ಮಾನಸಿಕ ಸ್ಥಿಮಿತವನ್ನು ಕಳೆದುಕೊಳ್ಳುವ ವ್ಯಕ್ತಿ ಎಷ್ಟು ಭಯಾನಕವಾಗಿ ವರ್ತಿಸುತ್ತಾನೆ ಎಂಬುದಕ್ಕೆ ಈ ಒಂದು ಘಟನೆ ತಾಜಾ ಉದಾಹರಣೆಯಾಗಿದೆ.
ಕುಡಿಯಲು ಮದ್ಯ ಸಿಗಲಿಲ್ಲ ಎಂಬ ಒಂದೇ ಕಾರಣಕ್ಕೆ ಮದ್ಯ ವ್ಯಸನಿಯೊಬ್ಬ ತನ್ನ ಕಾಲನ್ನು ತಾನೇ ಕಡಿದುಕೊಂಡಿದ್ದಾನೆ. ಈ ಘಟನೆ ಕೊಡಗು ಜಿಲ್ಲೆ ಅಮ್ಮತ್ತಿ ಕಾರ್ಮಾಡು ಗ್ರಾಮದಲ್ಲಿ ನಡೆದಿದೆ.
ಮಂಜುನಾಥ್(40) ಕಾಲು ಕಡಿದುಕೊಂಡ ವ್ಯಕ್ತಿ. ಬಲಗಾಲಿನ ಪಾದವನ್ನೇ ಕತ್ತರಿಸಿಕೊಂಡಿದ್ದಾನೆ. ಈತ ಮನೆಯಲ್ಲಿ ತಾಯಿ ಜತೆ ವಾಸವಿದ್ದ. ಕಾಲು ಕತ್ತರಿಸಿ ಕೈಯ್ಯಲ್ಲಿ ಹಿಡಿದಿದ್ದ ಭೂಪ, ಇದೀಗ ಗಂಭೀರ ಸ್ಥಿತಿಯಲ್ಲಿ ಮಡಿಕೇರಿ ಆಸ್ಪತ್ರೆಗೆ ದಾಖಲಾಗಿದ್ದಾನೆ.(ದಿಗ್ವಿಜಯ ನ್ಯೂಸ್​)
ಕೆಆರ್​ಎಸ್​ ಜಲಾಶಯದ ಒಳ ಹರಿವಿನಲ್ಲಿ ಮತ್ತಷ್ಟು ಹೆಚ್ಚಳ: ರೈತರ ಮುಖದಲ್ಲಿ ಮಂದಹಾಸ

ಬಿಕಿನಿ ಗರ್ಲ್​ ಜಾಹ್ನವಿ ಕಪೂರ್​ ಕೈಹಿಡಿದಿರುವ ನಿಗೂಢ ವ್ಯಕ್ತಿ ಯಾರು?: ಫೋಟೋ ಹಿಂದೆ ಬಿದ್ದ ನೆಟ್ಟಿಗರು! ​

ಪ್ರೀತ್ಸಲ್ಲ ಎಂದಿದ್ದಕ್ಕೆ ಚಾಕು ಚುಚ್ಚಿದ ಪಾಪಿ! ಯುವತಿಯ ಅಪ್ಪನ ಅಂಗಡಿಗೂ ಬಿತ್ತು ಬೆಂಕಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − six =
Remember me
