ಮಡಿಕೇರಿ:ಜಿಲ್ಲಾಸ್ಪತ್ರೆ ಶವಾಗಾರದಲ್ಲಿ ಮೃತದೇಹಳ ಬೆತ್ತಲೆ ಫೋಟೋ ತೆಗೆಯುತ್ತಿದ್ದ ವಿಕೃತ ಮನಸ್ಸಿನ ನೌಕರ ಸೈಯದ್​ ಹುಸೇನ್​ನನ್ನು ವೃದ್ಧೆ ಮೇಲಿನ ಅತ್ಯಾಚಾರಯತ್ನ ಪ್ರಕರಣದಡಿ ಮಡಿಕೇರಿ ನಗರ ಪೊಲೀಸರು ಬಂಧಿಸಿದ್ದಾರೆ.
ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆಗೆ ತಂದ ಪಾರ್ಥಿವ ಶರೀರದ ಬೆತ್ತಲೆ ಫೋಟೋ ತೆಗೆಯುತ್ತಿದ್ದ ಬಗ್ಗೆ ಹಿಂದು ಜಾಗರಣಾ ವೇದಿಕೆಯ ದೂರು ಆಧರಿಸಿ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ನಿರ್ದೇಶಕ ಡಾ.ಕಳ್ಳಿಚಂಡ ಕಾರ್ಯಪ್ಪ ಈತನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನ ಆಧಾರದಲ್ಲಿ ಆತನನ್ನು ಠಾಣೆಗೆ ಕರೆಸಿ ವಿಚಾರಣೆ ಮಾಡಿ ಕಳುಹಿಸಲಾಗಿತ್ತು.
ಶವಾಗಾರದಲ್ಲಿ ಕೆಲಸ ಮಾಡುತ್ತಿದ್ದ ಈತ, ಮೃತದೇಹಗಳನ್ನು ವಿವಸ್ತ್ರಗೊಳಿಸಿ ಫೋಟೊ ತೆಗೆದು ಇಟ್ಟುಕೊಳ್ಳುತ್ತಿದ್ದ. ಮೃತದೇಹದ ಫೋಟೋ ತೆಗೆಯುವುದು, ಆಸ್ಪತ್ರೆಯ ಮಹಿಳಾ ಸಿಬ್ಬಂದಿಯೊಂದಿಗೆ ನಡೆಸಿದ ದೂರವಾಣಿ ಸಂಭಾಷಣೆ ಕುರಿತು ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣದಲ್ಲಿ ವರದಿಯಾಗಿತ್ತು. ಸೈಯದ್​ ಹುಸೇನ್​ ವಿರುದ್ಧ ಜನವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ನಂತರ ನಡೆದ ವಿದ್ಯಮಾನದಲ್ಲಿ 74 ವರ್ಷದ ಮಹಿಳೆಯೊಬ್ಬರು ನೀಡಿದ ದೂರಿನನ್ವಯ ಆತನನ್ನು ಸೋಮವಾರ ಬಂಧಿಸಲಾಗಿದೆ.
ಕಳೆದ ಸೆಪ್ಟೆಂಬರ್​ 22ರಂದು ರಾತ್ರಿ 11 ಗಂಟೆ ಸಮಯದಲ್ಲಿ ಮನೆ ಒಳಗೆ ನುಗ್ಗಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆಂದು ವೃದ್ಧೆ ನ.13ರಂದು ಮಡಿಕೇರಿ ನಗರ ಠಾಣೆಗೆ ದೂರು ನೀಡಿದ್ದರು. ವೃದ್ಧೆ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್​ ಅಧಿಕಾರಿಯ ತಾಯಿಯಾಗಿದ್ದಾರೆ. ಈ ಮೊದಲು ಪೊಲೀಸ್​ ಅಧಿಕಾರಿಯ ಪತ್ನಿ (ಜಿಲ್ಲಾಸ್ಪತ್ರೆ ಸಿಬ್ಬಂದಿ) ಮಡಿಕೇರಿ ನಗರ ಮಹಿಳಾ ಠಾಣೆಗೆ ದೂರು ನೀಡಿದ್ದರು.
ಗಂಡನ ಮನೆಗೆ ಹೋಗವ್ವಾ… ಎಂದು ತಾಯಿ ಬುದ್ಧಿಮಾತು ಹೇಳಿದ್ದೇ ತಪ್ಪಾ? ಮನನೊಂದು ಸಾವಿನ ಮನೆಯ ಕದ ತಟ್ಟಿದ ಮಗಳು

ಎಲ್ಲೆಲ್ಲೂ ಒಕ್ಕಲಿಗ ವಧು-ವರರ ಸಮಾವೇಶದ್ದೇ ಮಾತು! ಬಾಳಸಂಗಾತಿ ಹುಡುಕಾಟಕ್ಕೆ ಬಂದ 13 ಸಾವಿರ ಮಂದಿಗೆ ಭಾರೀ ನಿರಾಸೆ…

ಕಾಡಾನೆಯನ್ನೇ ಹಿಮ್ಮೆಟ್ಟಿಸಿದ ಶ್ವಾನ! ಕನಕಪುರದಲ್ಲಿ ಘಟನೆ, ಸಖತ್​ ವೈರಲ್​ ಆಗ್ತಿದೆ ಈ ವಿಡಿಯೋ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + sixteen =
Remember me
