ಕೊಡಗು:ಮಡಿಕೇರಿಯ ಮಡಿಕಲ್​ ಕಾಲೇಜು ಆಸ್ಪತ್ರೆಯ ಡಿ ಗ್ರೂಪ್​ ನೌಕರನ ಕರಾಳ ಮುಖವಾಡವೊಂದು ಬಯಲಾಗಿದೆ. ನೌಕರನು ವಿಕೃತಕಾಮಿಯಾಗಿದ್ದು, ಮೃತರಾಗುವ ಯುವತಿ ಮತ್ತು ಯುವಕರ ಮೃತದೇಹದ ಬೆತ್ತಲೆ ಫೋಟೋ ತೆಗೆದು ಸಂಭ್ರಮಿಸುವುದು ಈತನ ಚಾಳಿಯಾಗಿತ್ತು.
ಆರೋಪಿ ನೌಕರನ ಹೆಸರು ಸೈಯದ್​. ಈತ ಶವಾಗಾರದಲ್ಲಿ ಕೆಲಸ ಮಾಡುತ್ತಿದ್ದ. ಮೃತದೇಹಗಳನ್ನು ವಿವಸ್ತ್ರಗೊಳಿಸಿ ಫೋಟೊ ತೆಗೆದು ಇಟ್ಟುಕೊಳ್ಳುತ್ತಿದ್ದ. ಇದೀಗ ಆತನ ಮೊಬೈನಲ್ಲಿದ್ದ ಎಲ್ಲ ವಿಡಿಯೋ ಮತ್ತು ಆಡಿಯೋ ಲಭ್ಯವಾಗಿದೆ. ಈ ವಿಷಯ ಗೊತ್ತಾಗುತ್ತಿದ್ದಂತೆ ಆರೋಪಿ ಕರ್ತವ್ಯಕ್ಕೆ ರಾಜೀನಾಮೆ ನೀಡಿ ಪರಾರಿಯಾಗಿದ್ದಾನೆ.
ಆರೋಪಿ ಸೈಯದ್​ ಕೋವಿಡ್ ಸಂದರ್ಭದಲ್ಲಿ ಕರ್ತವ್ಯಕ್ಕೆ ನೇಮಕವಾಗಿದ್ದ. ಇದೀಗ ಆತನ ವಿರುದ್ಧ ಹಿಂದೂ ಜಾಗರಣ ವೇದಿಕೆ, ಮೆಡಿಕಲ್ ಕಾಲೇಜಿನ ಡೀನ್​ಗೆ ದೂರು ನೀಡಿದ್ದಾರೆ. ಬಳಿಕ ಮೆಡಿಕಲ್ ಕಾಲೇಜಿನ ಡೀನ್, ಮಡಿಕೇರಿ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಮಡಿಕೇರಿ ಪೊಲೀಸರು ತನಿಖೆ ಆರಂಭಿಸಿದ್ದು, ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.(ದಿಗ್ವಿಜಯ ನ್ಯೂಸ್​)
ಸೆಮಿಫೈನಲ್​ನಲ್ಲಿ ಇಂಗ್ಲೆಂಡ್​ ವಿರುದ್ಧ ಹೀನಾಯ ಸೋಲು: ನಾಯಕ ರೋಹಿತ್​ ಕೊಟ್ಟ ಕಾರಣ ಹೀಗಿದೆ…

ತಲೆಯಿಂದ ಡಿಚ್ಚಿ ಹೊಡೆದು ಚಲಿಸುತ್ತಿದ್ದ ಬಸ್ಸಿನ​ ಗಾಜು ಪುಡಿ ಪುಡಿ ಮಾಡಿದ ಯುವಕ: ಭಯಾನಕ ವಿಡಿಯೋ ವೈರಲ್​!

ದೆಹಲಿ ಅಬಕಾರಿ ನೀತಿ ಪ್ರಕರಣ: ಹೈದರಾಬಾದ್​ ಮೂಲದ ಔಷಧ ಕಂಪನಿಯ ನಿರ್ದೇಶಕರ ಬಂಧನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + 5 =
Remember me
