ಕೊಡಗು:ತಾಯಿಯನ್ನು ಹುಡುಕಿ ಉತ್ತರ ಪ್ರದೇಶದಿಂದ ಬಂದ ಮಗನಿಗೆ ಬರೋಬ್ಬರಿ 8 ತಿಂಗಳ ಬಳಿಕ ಕಳೆದುಕೊಂಡ ತಾಯಿ ಸಿಕ್ಕಿದ್ದಾಳೆ.
ಕೊಡಗಿನ ಮಡಿಕೇರಿಯಲ್ಲಿ ಇಂತಹ ಮನಕಲಕುವ ದೃಶ್ಯ ನಡೆದಿದೆ. 8 ತಿಂಗಳ ಬಳಿಕ ತಾಯಿ ಕಂಡು ಮಗ ಬಿಕ್ಕಿ ಬಿಕ್ಕಿ ಅತ್ತುಬಿಟ್ಟ. ಮಗನ ಕಂಡು ತಾಯಿ ಕೂಡ ಕಣ್ಣೀರಿಟ್ಟಳು.
ಉತ್ತರ ಪ್ರದೇಶದ ಡಾಣಿಣ್ ಪುರ್ ಎಂಬ ಗ್ರಾಮದಿಂದ ಈ ವೃದ್ಧೆ ಕಾಣೆಯಾಗಿದ್ದಳು. ಚಾತ್ರೆಗೆಂದು ಊರಿನಿಂದ ಹೊರಟು ತಪ್ಪಿಸಿಕೊಂಡಿದ್ದ ಮುಕ್ಕು ಎಂಬ ಹೆಸರಿನ ವೃದ್ಧೆ. ತಾಯಿಯನ್ನು ಉತ್ತರ ಪ್ರದೇಶದಿಂದ ಮಗ ಗಂಗಾಪ್ರಸಾದ್ ಹುಡುಕಿಕೊಂಡು ಬಂದಿದ್ದಾನೆ. ಸ್ಥಳೀಯರ ನೆರವಿನಿಂದ ತಾಯಿ ಮುಕ್ಕು ಮಗನನ್ನು ಸೇರಿದ್ದಾಳೆ.
ಮಡಿಕೇರಿಯ ಕಾಲೇಜು ರಸ್ತೆಯಲ್ಲಿ ಭಿಕ್ಷೆ ಬೇಡುತ್ತಿದ್ದ ವೃದ್ದೆ ಮುಕ್ಕು, ತನಲ್ ವೃದ್ಧಾಶ್ರಮದ ಮಹಮ್ಮದ್ ಎಂಬುವವರ ಸಹಾಯದಿಂದ ಮಗನ ಸೇರಿದ್ದಾಳೆ. 8 ತಿಂಗಳ ಬಳಿಕ ಒಟ್ಟಿಗೆ ಸೇರಿದ್ದ ತಾಯಿ ಮಗನ ಸಂತಸ ಮುಗಿಲು ಮುಟ್ಟಿತ್ತು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + sixteen =
Remember me
