ಕೊಡಗು:ಕ್ಷುಲ್ಲಕ ಕಾರಣಕ್ಕೆ ಯುವಕನೊಬ್ಬ ಪರಿಚಿತ ಮೂವರಿಗೆ ಚಾಕು ಇರಿದಿರುವ ಘಟನೆ ಮಡಿಕೇರಿಯಲ್ಲಿ ನಡೆದಿದೆ. ಸ್ನೇಕ್ ಮಾಸ್ಟರ್ ಆಗಿರುವ ಆರೋಪಿ ಗಾಂಜಾ ಅಮಲಿನಲ್ಲಿ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದೆ.
ಆರೋಪಿ ರಾಮದಾಸ ಸಂಬಂಧಿ ಶ್ರೀಜಾ ಹಲವು ವರ್ಷಗಳ ಹಿಂದೆ ಕರಡಿಗೂಡು ಗ್ರಾಮದ ಸ್ಟೀಫನ್ ಎಂಬುವರನ್ನು ಮದುವೆಯಾಗಿದ್ದಾರೆ. ಇಬ್ಬರದ್ದು ಅನ್ಯಧರ್ಮವಾದರೂ ಮದುವೆಗೆ ಯಾವುದೇ ಅಡ್ಡಿ ಇರಲಿಲ್ಲ. ವರಸೆಯಲ್ಲಿ ಚಿಕ್ಕಮ್ಮ ಆಗಬೇಕಿರೋ ಶ್ರೀಜಾ ಮೊನ್ನೆ ನಡೆದ ಕ್ರಿಸ್​ಮಸ್ ಹಬ್ಬಕ್ಕೆ ರಾಮದಾಸ್, ಮತ್ತವನ ತಾಯಿಯನ್ನು ಕರೆದಿದ್ದರು. ಆದರೆ, ರಾಮದಾಸ್​ ಹೋಗಿರಲಿಲ್ಲ.
ಇದನ್ನೂ ಓದಿ:ಕೇರಳದ ಲತಿಕಾ ಮನೆಗೆ ಸುದೀಪ್ ಭೇಟಿ; 15 ವರ್ಷದ ಹಿಂದಿನ ‘ಆಟೋಗ್ರಾಫ್​’ ದಿನಗಳನ್ನು ನೆನೆದ ಕಿಚ್ಚ
ಸೋಮವಾರ ದಾರಿಯಲ್ಲಿ ಕೆಲಸ ಮುಗಿಸಿ ಹೊಗುತ್ತಿದ್ದ ರಾಮದಾಸ್​ನನ್ನು ಟೀ ಕುಡಿಯುವುದಕ್ಕೆಂದು ಶೀಜಾ ಕರೆದಿದ್ದಾರೆ. ಟೀ ಕೊಟ್ಟ ಬಳಿಕ ಸ್ನಾನಕ್ಕೆಂದು ಹೋಗಿದ್ದಾರೆ. ಇದರ ನಡುವೆ ಮನೆಯಲ್ಲಿ ಕುಳಿತಿದ್ದ ರಾಮದಾಸ ಸ್ನಾನದ ಮನೆಯ ಬಾಗಿಲು ಬಡಿದಿದ್ದಾನೆ. ಈ ವೇಳೆ ಯಾಕೆ ಬಾಗಿಲು ಬಡಿಯುತ್ತಿದ್ದೀಯಾ ಎಂದು ಶ್ರೀಜಾ ಪ್ರಶ್ನೆ ಮಾಡಿದ್ದಾರೆ. ಇದೇ ವಿಚಾರಕ್ಕೆ ಮನೆಯಲ್ಲೇ ಇದ್ದ ಸ್ಟೀಫನ್, ಶ್ರೀಜಾ ಹಾಗೂ ರಾಮದಾಸ ನಡುವೆ ಗಲಾಟೆ ಆಗಿದೆ. ರಾಮದಾಸ್​ನನ್ನು ಬೈದು ಮನೆಯಿಂದ ಆಚೆ ಕಳುಹಿಸಿ ಶ್ರೀಜಾ ಕುಟುಂಬ ಗೇಟ್ ಬಾಗಿಲು ಹಾಕಿದ್ದಾರೆ.
ಇದಾದ ಬಳಿಕ‌ ಮನೆಯಲ್ಲಿ ಆದ ಗಲಾಟೆಯನ್ನು ಶ್ರೀಜಾ ಸಂಬಂಧಿಕರಿಗೆ ಫೋನ್ ಮಾಡಿ ತಿಳಿಸಿದ್ದಾಳೆ. ಇಷ್ಟಕ್ಕೆ ಕುಪಿತಗೊಂಡ ರಾಮದಾಸ ಗಾಂಜಾ ನಶೆಯಲ್ಲಿ ಶ್ರೀಜಾಳ ಮನೆಗೆ ಸ್ನೇಹಿತರೊಂದಿಗೆ ಚಾಕು ಹಿಡಿದು ಬಂದಿದ್ದಾನೆ. ಈ ವೇಳೆ ಅನಾರೋಗ್ಯಕ್ಕೆ ಒಳಗಾಗಿ ಮನೆಯಲ್ಲಿ ಮಲಗಿದ್ದ ವಿಲ್ಸನ್​ಗೆ ಮೊದಲು ಚಾಕು ಇರಿದಿದ್ದಾನೆ. ಬಳಿಕ ಬಿಡಿಸಲು ಬಂದ ವಿಲ್ಸನ್ ಸಂಬಂಧಿ ಸ್ಟೀವನ್​ಗೂ ಚಾಕು ಇರಿದಿದ್ದಾನೆ. ಅಷ್ಟೇ ಅಲ್ಲದೆ, ಮನೆಯಲ್ಲಿ ಗಲಾಟೆ ಬಿಡಿಸಲು ಬಂದ ಶ್ರೀಜಾಳ 17 ವರ್ಷದ ಹಿರಿಯ ಮಗಳಿಗೂ ಇರಿದು ಎಸ್ಕೇಪ್ ಆಗಿದ್ದಾನೆ. ಮನೆಯಲ್ಲಿ ಇದ್ದ ಇನ್ನಿಬ್ಬರು ಮಕ್ಕಳು ಕೂಗಿಕೊಂಡ ಪರಿಣಾಮ ಅಕ್ಕ ಪಕ್ಕದವರು ಬರುವಷ್ಟರಲ್ಲಿ ರಾಮದಾಸ ಸ್ಥಳದಿಂದ ಎಸ್ಕೇಪ್ ಆಗಿದ್ದಾ‌‌ನೆ.
ಇದನ್ನೂ ಓದಿ:ಟಿಆರ್​ಪಿ ತಿರುಚಲು ಲಕ್ಷ ಲಕ್ಷ ಲಂಚ- ವಸ್ತುಗಳು ಗಿಫ್ಟ್​: ಕೋರ್ಟ್​ಗೆ​ ಮಾಹಿತಿ ನೀಡಿದ ಪೊಲೀಸರು
ಚಾಕು ಇರಿತಕ್ಕೆ ಒಳಗಾದ ವಿಲ್ಸನ್, ಸ್ಟೀವನ್ ಹಾಗೂ ಬಾಲಕಿಯನ್ನು ಮೈಸೂರಿನ ಕೆ.ಆರ್. ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ. ಆದರೆ, ಚಾಕು ಇರಿತಕ್ಕೆ ಸ್ಪಷ್ಟವಾದ ಕಾರಣ ಏನು ಅನ್ನುವುದು ಖಚಿತವಾಗಿಲ್ಲ. ಘಟನೆ ಸಂಬಂಧ ಸಿದ್ದಾಪುರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸ್ ತನಿಖೆಯಿಂದ ಸತ್ಯಾಸತ್ಯತೆ ಹೊರಬರಬೇಕಿದೆ.(ದಿಗ್ವಿಜಯ ನ್ಯೂಸ್​)
ಮದ್ವೆಯಾದ ಎರಡೇ ವಾರಕ್ಕೆ ಯುವತಿ ಆತ್ಮಹತ್ಯೆಗೆ ಶರಣು: ಕಣ್ಣೀರು ತರಿಸುವಂತಿದೆ ತಾಯಿಗೆ ಬರೆದ ಡೆತ್​ನೋಟ್​!

VIDEO: ಬಾಯ್​ಫ್ರೆಂಡ್​ ಜತೆ ಆನಂದದಲ್ಲಿ ಮೈಮರೆತಳು- ಹಿಂದೆ ಬೆಂಕಿ ಇದದ್ದೇ ತಿಳಿಯಲಿಲ್ಲ!

ಮದ್ವೆಯಾದ ಎರಡೇ ತಿಂಗಳಿಗೆ 51 ವರ್ಷದ ಪತ್ನಿಗೆ ಸಾವಿನ ದಾರಿ ತೋರಿದ 29ರ ಪತಿ: ಕೊಲೆ ಹಿಂದೆ ಭಯಾನಕ ಸಂಚು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × three =
Remember me
