ಮಡಿಕೇರಿ:ಕೊಡಗು ಜಿಲ್ಲೆಯ ಯುವಕನೊಬ್ಬ ರಷ್ಯಾದ ಯುವತಿಯನ್ನು ಮದುವೆಯಾಗುವ ಮೂಲಕ ದೂರದ‌ ಸಂಬಂಧ ಬೆಳೆಸಿದ್ದಾರೆ.
ಇಂದು ನಡೆದ ಈ ಮದುವೆಗೆ ಸೋಮವಾರಪೇಟೆಯ ಜಾನಕಿ ಕನ್ವೆನ್ಷನ್ ಹಾಲ್ ಸಾಕ್ಷಿಯಾಯಿತು. ಇಲ್ಲಿನ ನಂದಿಗುಂದ ಗ್ರಾಮದ ಎನ್.ಬಿ.ಚಿನ್ನಪ್ಪ ಹಾಗೂ ಪುಷ್ಪಾ ದಂಪತಿಯ ಪುತ್ರ ಎನ್.ಸಿ.ಜಯಚಂದನ್, ರಷ್ಯಾದ ಮಾಸ್ಕೋ ನಿವಾಸಿ ಮಿಲನಾ ಅವರನ್ನು ವರಿಸಿದ್ದಾರೆ.
ಜಯಚಂದನ್ ಕಳೆದ ಎಂಟು ವರ್ಷದಿಂದ ಮಾಸ್ಕೋದಲ್ಲಿ ಯೋಗ ತರಬೇತುದಾರರಾಗಿದ್ದಾರೆ. ಅದೇ ಯೋಗ ಕೇಂದ್ರದಲ್ಲಿ ಮಿಲನಾ ಉಚಿತ ತರಬೇತುದಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮಿಲನಾ ತತ್ವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕುಟುಂಬದವರು, ಬಂದು ಬಳಗದವರು ಮದುವೆಗೆ ಆಗಮಿಸಿ ವಧುವರರನ್ನು ಹರಸಿದ್ದಾರೆ.(ದಿಗ್ವಿಜಯ ನ್ಯೂಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × five =
Remember me
