ಕೊಡಗು:ವೀರಾಜಪೇಟೆಯಲ್ಲಿ ಮಾನಸಿಕ ಅಸ್ವಸ್ಥನೊಬ್ಬ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಎಂಟು ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.
ಪೊಲೀಸರು ನಡೆಸಿದ ಹಲ್ಲೆಯಿಂದ ವೀರಾಜಪೇಟೆಯ ಚಿಕ್ಕಪೇಟೆ ನಿವಾಸಿಯಾದ ರಾಯ್ ಡಿಸೋಜ ಮೃತಪಟ್ಟಿದ್ದಾರೆ ಎಂದು ಆರೋಪಿಸಲಾಗಿತ್ತು. ಘಟನೆ ತಿಳಿದು ದಕ್ಷಿಣ ವಲಯ ಐಜಿ ಪ್ರವೀಣ್ ಮದುಕರ್ ಪವಾರ್ ವೀರಾಜಪೇಟೆಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಮೇಲ್ನೋಟಕ್ಕೆ ಆರೋಪ‌ ಸಾಬೀತಾದ ಹಿನ್ನಲೆಯಲ್ಲಿ ಇಬ್ಬರು ಹೆಡ್ ಕಾನ್ಸ್‌ಟೇಬಲ್ ಸೇರಿದಂತೆ ಎಂಟು‌ ಪೊಲೀಸರ ಮೇಲೆ ಎಫ್​ಐಆರ್ ದಾಖಲು ಮಾಡಿ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಇನ್ನೂ ಪ್ರಕರಣವನ್ನು ಸಿಐಡಿಗೆ ವಹಿಸಲಾಗುವುದೆಂದು ಮಾಹಿತಿ ನೀಡಿದ್ದಾರೆ. ಜೂನ್ 9 ರಂದು ರಾತ್ರಿ ವೀರಾಜಪೇಟೆ ಠಾಣೆಯಲ್ಲಿ ಈ ಹಲ್ಲೆ ಪ್ರಕರಣ ನಡೆದಿತ್ತು. ಮಾರಣಾಂತಿಕ ಹಲ್ಲೆಯಿಂದ ಕೋಮಾಕ್ಕೆ ಜಾರಿದ ರಾಯ್ ಡಿಸೋಜನನ್ನು‌ ಮಡಿಕೇರಿ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ರಾಯ್ ಡಿಸೋಜ ಮೃತಪಟ್ಟಿದ್ದಾರೆ.(ದಿಗ್ವಿಜಯ ನ್ಯೂಸ್​)
ಒಂದೇ ಒಂದು ವಿಡಿಯೋಗಾಗಿ ಕಿತ್ತಾಡಿದ ದಂಪತಿ: ಮುಂದಾಗಿದ್ದು ಘನ ಘೋರ ದುರಂತ!

ಕರ್ನಾಟಕದ ಮನೀಷ್ ಪಾಂಡೆ ಲಂಕಾ ಪ್ರವಾಸಕ್ಕೆ ನಾಯಕನಾಗಬೇಕಿತ್ತು ಎಂದ ಭಾರತ ತಂಡದ ಮಾಜಿ ವೇಗಿ

ನಿರ್ಮಾಣವಾಗಿ ಐದೇ ದಿನಗಳಲ್ಲಿ ನೆಲಸಮವಾಯ್ತು ಕರೊನಾ ಮಾತಾ ದೇವಾಲಯ! ಕಾರಣವೇನು ಗೊತ್ತಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − 9 =
Remember me
