ಕೊಡಗು:ನಾಲ್ಕು ದಿನಗಳ ಹಿಂದೆ ಪೊನ್ನಂಪೇಟೆ ತಾಲೂಕಿನ ಮುಗುಟಗೇರಿ ಗ್ರಾಮದಲ್ಲಿ ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ 7 ಜನರ ದುರಂತ ಸಾವಿಗೆ ಕಾರಣನಾದ ಆರೋಪಿ ಪಣಿಎರವರ ಬೋಜ ಇಂದು ಶವವಾಗಿ ಪತ್ತೆಯಾಗಿದ್ದಾನೆ.
ಬೋಜ ಮತ್ತು ಈತನ ಪತ್ನಿ ನಡುವೆ ಜಗಳವಾಗಿತ್ತು. ಪತ್ನಿ ಸಹೋದರನ ಮನೆಯಲ್ಲಿದ್ದರೂ ತನ್ನನ್ನು ಕರೆಯಲಿಲ್ಲ ಎಂಬ ಕಾರಣಕ್ಕೆ ಕುಪಿತಗೊಂಡ ಬೋಜ ಮಾ.2ರ ತಡರಾತ್ರಿ ಮನೆಗೆ ಬೆಂಕಿ ಇಟ್ಟು ಪರಾರಿಯಾಗಿದ್ದ. ಈ ದುರಂತದಲ್ಲಿ ಬೋಜನ ಪತ್ನಿ ಬೇಬಿ (40) ಸೇರಿದಂತೆ ಸೀತೆ (45), ಪ್ರಾರ್ಥನ (6), ಪ್ರಕಾಶ್ (6), ವಿಶ್ವಾಸ (3), ವಿಶ್ವಾಸ್ (7) ಎಂಬುವರರು ಸುಟ್ಟುಕರಕಲಾಗಿದ್ದರು.
ಇದೇ ಪ್ರಕರಣದಲ್ಲಿ ಗಂಭೀರ ಗಾಯಗೊಂಡಿದ್ದ ಮತ್ತೋರ್ವ ಗಾಯಾಳು ಭಾಗ್ಯ (24) ಮೈಸೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಇತ್ತ ಮನೆಗೆ ಬೆಂಕಿಇಟ್ಟು ಪರಾರಿಯಾಗಿದ್ದ ಆರೋಪಿ ಬೋಜ ಮುಗುಟಗೇರಿ ಸಮೀಪದ ಕಾಫಿ ತೋಟವೊಂದರಲ್ಲಿ ಮಂಗಳವಾರ ಮುಂಜಾನೆ ಶವವಾಗಿ ಪತ್ತೆಯಾಗಿದ್ದಾನೆ. ಕೃತ್ಯವೆಸಗಿದ ನಂತರ ಕ್ರೂರಿ ಆರೋಪಿ ಅದೇ ದಿನ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಶಂಕಿಸಲಾಗಿದೆ. ಇದರಿಂದಾಗಿ ಪ್ರಕರಣದಲ್ಲಿ ಒಟ್ಟು ಸತ್ತವರ ಸಂಖ್ಯೆ 8 ಕ್ಕೇರಿದೆ.
ಸರ್ಕಾರಿ ಆಸ್ಪತ್ರೆ ಬೆಡ್​ ಮೇಲೆ ರೊಮಾನ್ಸ್​, ಆಶಾ ಕಾರ್ಯಕರ್ತೆ ಜತೆ ಯುವಕನ ಲವ್ವಿಡವ್ವಿ ವಿಡಿಯೋ ವೈರಲ್​
2004ರಲ್ಲಿ ದುಡ್ಡಿಲ್ಲದೆ ಖಾಲಿ ಡಬ್ಬದಂತಿದ್ದ ಕುಮಾರಸ್ವಾಮಿ ಇವತ್ತು ತುಂಬಿದ ಕೊಡ! ಅಂದಿನ ಹಣದ ರಹಸ್ಯ ಕೆದಕಿದ ಜಮೀರ್
ಐಸಿಯುನಲ್ಲಿದ್ದಾರೆ ರಮೇಶ್​ ಜಾರಕಿಹೊಳಿ, ಪರಿಸ್ಥಿತಿ ಗಂಭೀರ?
ಪತ್ನಿಯ ಕರೆ ಬಂದಿಲ್ಲ ಅಂತ ಮನೆಗೆ ಬೆಂಕಿಯಿಟ್ಟ ಪತಿ: ಆರು ಮಂದಿ ಸಜೀವ ದಹನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − 12 =
Remember me
