ಮಡಿಕೇರಿ:ನರಹಂತಕ ಹುಲಿ ಸೆರೆ ಅಥವಾ ಕೊಲ್ಲಲು ಒತ್ತಡ ಹೆಚ್ಚಾಗುತ್ತಿದ್ದಂತೆ ಕೊಡಗಿನಲ್ಲಿ ಶುಕ್ರವಾರ ಹುಲಿವೊಂದರ ಮೃತದೇಹ ಪತ್ತೆಯಾಗಿದೆ. ಪೊನ್ನಂಪೇಟೆ ತಾಲೂಕು ವ್ಯಾಪ್ತಿಯ ನಾಲ್ಕೇರಿ ಗ್ರಾಮ ಪಂಚಾಯಿತಿಯ ಲಕ್ಕುಂದ ಗ್ರಾಮದಲ್ಲಿ ಹುಲಿ ಮೃತದೇಹ ಪತ್ತೆಯಾಗಿದ್ದು, ಇದು ದಕ್ಷಿಣ ಕೊಡಗಿನ ಜನರಲ್ಲಿ ಭಯ ಹುಟ್ಟಿಸಿದ್ದ ಹುಲಿಯೇ? ಎಂಬ ಪ್ರಶ್ನೆ ಎದ್ದಿದೆ.
ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಹಾಗೂ ಖಾಸಗಿ ತೋಟ ಮಧ್ಯದಲ್ಲಿರುವ ಕಂದಕದಲ್ಲಿ ಕೊಳೆತ ಸ್ಥಿತಿಯಲ್ಲಿ ಹುಲಿ ಮೃತದೇಹ ಪತ್ತೆಯಾಗಿದೆ. ಇದು ನರಹಂತಕ ಹುಲಿಯ ಮೃತದೇಹ ಎಂದು ಅರಣ್ಯಾಧಿಕಾರಿಗಳು ಹೇಳಿಕೊಂಡಿದ್ದಾರೆ. ಮೃತದೇಹ ಪತ್ತೆಯಾದ ಸ್ಥಳದಲ್ಲಿಯೇ ಮರಣೋತ್ತರ ಪರೀಕ್ಷೆ ನಡೆದಿದೆ.ಇದನ್ನೂ ಓದಿರಿತವರು ಮನೆಯಲ್ಲಿ ಮಗಳು ಆತ್ಮಹತ್ಯೆ! ಸಾವಿಗೂ ಮುನ್ನ ಮನದ ದುಃಖ ಅಕ್ಷರಕ್ಕಿಳಿಸಿದ ಸುಂದರಿ
ಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳ್ಳೂರು ಗ್ರಾಮದಲ್ಲಿ 8 ವರ್ಷದ ಬಾಲಕ ರಂಗಸ್ವಾಮಿ ಹುಲಿ ದಾಳಿಗೆ ಮಾರ್ಚ್ 8 ರಂದು ಬಲಿಯಾಗಿದ್ದ. ಆ ಸಂದರ್ಭ ಬೆಳ್ಳೂರು ಗ್ರಾಮದ ಕೆರೆವೊಂದರ ಸಮೀಪ ಇದ್ದ ಹುಲಿಗೆ ಅರಣ್ಯ ತಂಡ ಗುಂಡಿಕ್ಕಿತ್ತೆಂಬ ಸುದ್ದಿ ಹರಿದಾಡಿತ್ತು. ಸ್ಥಳದಲ್ಲಿ ರಕ್ತದ ಗುರುತು, ಹುಲಿ ಕೂದಲು ಲಭ್ಯವಾಗಿದ್ದು, ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಅರಣ್ಯಾಧಿಕಾರಿಗಳು ಹೇಳಿಕೊಂಡಿದ್ದರು.
ತದನಂತರ ಮಾ.12ರಂದು ನಾಲ್ಕೇರಿ ಗ್ರಾಮದಲ್ಲಿ ರೈತ ರಾಮಚಂದ್ರ ಎಂಬುವವರಿಗೆ ಸೇರಿದ ಹಸು ಹುಲಿ ದಾಳಿಗೆ ಜೀವ ಕಳೆದುಕೊಂಡಿತ್ತು. ಮಾ.8 ಮತ್ತು 12ರಂದು ನಡೆದ ದಾಳಿಯಲ್ಲಿ ನರಹಂತಕ ಹುಲಿ ದಾಳಿ ನಡೆಸಿತ್ತು ಎಂದು ಅರಣ್ಯಾಧಿಕಾರಿಗಳು ಹೇಳಿದ್ದರು. ಸಿಸಿ ಕ್ಯಾಮರಾ ದಾಖಲೆ ಅನ್ವಯ ಎರಡು ದಾಳಿಯಲ್ಲೂ ಒಂದೇ ಹುಲಿ ಇತ್ತು. ಈ ಹುಲಿಯ ಹಲ್ಲು, ಚರ್ಮ ಸತ್ತಿರುವ ಹುಲಿಗೆ ಹೋಲಿಕೆ ಇದೆ. ಹೀಗಾಗಿ ಇದೇ ಹುಲಿ ಜನರನ್ನು ಕೊಂದದ್ದು ಅನ್ನೋದು ದೃಢಪಟ್ಟಿದೆ. ಇದೇ ನರಹಂತಕ ಹುಲಿ ಎಂದುಅರಣ್ಯಾಧಿಕಾರಿಗಳು ಹೇಳಿದ್ದಾರೆ.
ಅತ್ತ ತೋಟದಲ್ಲಿ ಪೂಜೆ ನಡೆಯುತ್ತಿತ್ತು, ಇತ್ತ ಮನೆಯಲ್ಲಿ ಮಗುವಿನೊಂದಿಗೆ ತಾಯಿ ಆತ್ಮಹತ್ಯೆ!

ಜಾರಕಿಹೊಳಿಗೆ ನೈತಿಕ ಸ್ಥೈರ್ಯತುಂಬಿದ ಕಾಂಗ್ರೆಸ್ ಮುಖಂಡರ ಕಣ್ಣು ಎಚ್​.ಡಿ.ಕುಮಾರಸ್ವಾಮಿ ಮೇಲೆ!

ಪತಿಯನ್ನ ಕೊಂದು ಹೋಮಕುಂಡದಲ್ಲಿ ಸುಟ್ಟಿದ್ದ ಪತ್ನಿ! ಬೇಲ್​ ಮೇಲೆ ಹೊರ ಬಂದವಳಿಂದ ಮತ್ತೊಂದು ನೀಚ ಕೃತ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 4 =
Remember me
