ಕೊಡಗು/ಬೆಂಗಳೂರು:ಟಿಪ್ಪು ಜಯಂತಿ ಮೂಲಕ ಕೊಡವರ ಸಿಟ್ಟಿಗೆ ಗುರಿಯಾಗಿದ್ದ ಮಾಜಿ ಸಿಎಂ ಸಿದ್ದರಾಮಯ್ಯ, ಇದೀಗ ಗೋಮಾಂಸ ವಿಚಾರದಲ್ಲಿ ಮತ್ತೊಂದು ಯಡವಟ್ಟು ಮಾಡಿಕೊಂಡು ಟೀಕೆಗೆ ಗುರಿಯಾಗಿದ್ದಾರೆ.
‘ಕೊಡವರೂ ಕೂಡ ಗೋಮಾಂಸ ತಿನ್ನುತ್ತಾರೆ’ ಎಂದ ಸಿದ್ದರಾಮಯ್ಯ ವಿರುದ್ಧ ಕೊಡವರು ಗರಂ ಆಗಿದ್ದು, ಕ್ಷಮೆ ಕೇಳುವಂತೆ ಒತ್ತಾಯಿಸಿದ್ದಾರೆ. ಈ ಕುರಿತು ಕಟುವಾಗಿ ಟೀಕಿಸಿರುವ ಮಡಿಕೇರಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್, ‘ಅವರ ಜಾತಿಯವ್ರೇ ಪಕ್ಕದಲ್ಲಿ ತಿಂದಿರಬಹುದು. ಅವರನ್ನು ಕೊಡವರು ಅಂತ ಅಂದುಕೊಂಡಿರಬಹುದು. ಸಿದ್ದರಾಮಯ್ಯ ತಿನ್ನುತ್ತಿರುತ್ತಾರೆ, ಅದಕ್ಕೆ ಆ ರೀತಿ ಹೇಳಿದ್ದಾರೆ. ನಾವು ಗೋವನ್ನು ಪೂಜಿಸುವವರು’ ಎಂದು ಕಿಡಿಕಾರಿದ್ದಾರೆ.ಇದನ್ನೂ ಓದಿರಿಪರ ಸ್ತ್ರೀಯರಿಗೆ ಅಶ್ಲೀಲ ಚಿತ್ರ ಕಳುಹಿಸಿ ಸಿಕ್ಕಿಬಿದ್ದ ಸಿನಿಮಾ ನಿರ್ಮಾಪಕ! ಈ ರಾಸಲೀಲೆ ಪ್ರಶ್ನಿಸಿದ ಪತ್ನಿ ಕತೆ ಏನಾಯ್ತು?
ಸಿದ್ದರಾಮಯ್ಯರ ವಿವಾದಾತ್ಮಕ ಹೇಳಿಕೆ ಕುರಿತು ಸುದ್ದಿಗಾರರ ಜತೆ ಕೊಡಗಿನಲ್ಲಿ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ‘ಸಿದ್ದರಾಮಯ್ಯ ರೈತ ಕುಟುಂಬದಿಂದ ಬಂದವರು. ಕೋಳಿ, ಕುರಿ, ಗೋವಿಗೆ ಇರುವ ವ್ಯತ್ಯಾಸವನ್ನು ಅವರು ಅರಿಯಲಿ. ಅದರ ಅರ್ಥ ಗೊತ್ತಾದ್ರೆ ಅವ್ರು ಈ ರೀತಿ ಹೇಳೋದಿಲ್ಲ’ ಎಂದು ಲೇವಡಿ ಮಾಡಿದರು.
‘ನಿಮ್ಮ ಕುಲದೈವ ಬೀರೇಶ್ವರ ಸ್ವಾಮಿ ಗೋಹತ್ಯೆ ಸಮರ್ಥನೆಗೆ ನಿಂತುಕೊಳ್ತಾರಾ?’ ಎಂದು ಸಿದ್ದರಾಮಯ್ಯರನ್ನು ಚಿಕ್ಕಮಗಳೂರಿನಲ್ಲಿ ಪ್ರಶ್ನಿಸಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ‘ಬೀರೇಶ್ವರರ ವಾಹನ ಏನು ಎಂದೂ ಯೋಚನೆ ಮಾಡಲಿ. ಕಾಂಗ್ರೆಸ್ಸಿಗರು ಇತಿಹಾಸವನ್ನು ಮರೆತಿದ್ದಾರೆ. ಅವರಿಗೆ ಗೊತ್ತಿಲ್ಲ ಅನ್ನಿಸುತ್ತೆ, ಜೋಡೆತ್ತು ಅವರ ಪಕ್ಷದ ಗುರುತಾಗಿತ್ತು. ಹಸು ಕರುವನ್ನು ಪಕ್ಷದ ಗುರುತಾಗಿ ಇಟ್ಟುಕೊಂಡಿದ್ದ ಪಕ್ಷವೇ ಗೋಹತ್ಯೆ ನಿಷೇಧ ಕುರಿತು ಏನೇನೋ ಹೇಳುತ್ತಿದೆ’ ಎಂದು ವಾಗ್ದಾಳಿ ಮಾಡಿದರು. ‘ಸಂವಿಧಾನ ಶಿಲ್ಪಿ ಡಾ. ಬಿ.ಅರ್ ಅಂಬೇಡ್ಕರ್ ಅವರೇ ಗೋಹತ್ಯೆ ನಿಷೇಧದ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಸಂವಿಧಾನದ ಬಗ್ಗೆ ಶ್ರದ್ಧೆ ಹಾಗೂ ತಿಳಿವಳಿಕೆ ಇದ್ದವರು ಗೋಹತ್ಯೆ ಕಾಯ್ದೆಯನ್ನು ವಿರೋಧಿಸಲ್ಲ ಎಂದಿದ್ದಾರೆ. ಯಾರಾದರು ಮನುಷ್ಯರನ್ನು ತಿನ್ನುವುದೂ ಆಹಾರ ಕ್ರಮ ಎಂದರೆ ಅದಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಸಪೋರ್ಟ್ ಮಾಡ್ತಾರಾ?’ ಎಂದೂ ಪ್ರಶ್ನಿಸಿದ್ದಾರೆ.ಇದನ್ನೂ ಓದಿರಿನಾನು 110 ಕೆಜಿ ಇದ್ದೇನೆ, ಕಾಂಗ್ರೆಸ್​ಗೆ ನನ್ನನ್ನು ತುಳಿಯೋಕೆ ಆಗಲ್ಲ ಎನ್ನುತ್ತಲೇ ಜೆಡಿಎಸ್​ಗೆ ಇಬ್ರಾಹಿಂ ಎಂಟ್ರಿ!
ಇನ್ನು ಸಚಿವ ಪ್ರಭು ಚೌವಾಣ್​​ ಕೂಡ ಕಾಂಗ್ರೆಸ್​ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬೀದರ್​ನಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾನೂನು ಜಾರಿಗೆ ಬಂದೇ ಬರುತ್ತೆ. ಒಂದು ಸಮುದಾಯದ ಮತಕ್ಕಾಗಿ ಜಾನುವಾರಗಳ ಹೆಸರಲ್ಲಿ ಕಾಂಗ್ರೆಸ್ ರಾಜಕೀಯ ಮಾಡುತ್ತಿರುವದು ಖಂಡನೀಯ’ ಎಂದರು. ‘ಕಾಂಗ್ರೆಸ್ ನವರಿಗೆ ನಡುಕ ಶುರುವಾಗಿದೆ. ಹಾಗಾಗಿ ವಿಧಾನ ಪರಿಷತ್​ನಲ್ಲಿ ಗೂಂಡಾ ಸಂಸ್ಕೃತಿ ತೋರಿದ್ದಾರೆ’ ಎಂದು ಕಿಡಿಕಾರಿದರು.
‘ಕೊಡವರು ಗೋವನ್ನು ಪೂಜ್ಯನೀಯ ದೃಷ್ಟಿಯಿಂದ ಕಾಣುತ್ತಾರೆ. ಅಲ್ಲದೆ ಕೊಡಗಿನಲ್ಲಿ ಗೋಹತ್ಯೆ, ಗೋಮಾಂಸ ಭಕ್ಷಣೆ ನಿಷೇಧವಿದೆ. ಬ್ರಿಟೀಷರ ಕಾಲದಿಂದಲೂ ಈ ನಿಯಮ ಜಾರಿಯಲ್ಲಿದೆ. ಹೀಗಿರುವಾಗ ಕೊಡವರು ಗೋಮಾಂಸ ತಿನ್ನುತ್ತಾರೆ ಅನ್ನೋದು ತಪ್ಪು. ಮಾಜಿ ಸಿಎಂ ಸಿದ್ದರಾಮಯ್ಯ ತನ್ನ ಹೇಳಿಕೆಯನ್ನ ಹಿಂಪಡೆಯುವ ಮೂಲಕ ಕೊಡವರ ಕ್ಷಮೆ ಕೋರಬೇಕು. ಇಲ್ಲವಾದಲ್ಲಿ ತಕ್ಕಪಾಠ ಕಲಿಸಬೇಕಾಗುತ್ತದೆ’ ಎಂದು ಕಾವೇರಿ ಸೇನೆ ಸಂಚಾಲಕ ರವಿ ಚಂಗಪ್ಪ ಎಚ್ಚರಿಸಿದ್ದಾರೆ. ‘ಸಿದ್ದರಾಮಯ್ಯ ಗೋಮಾಂಸ ತಿನ್ನಬೇಕೆಂದಿದ್ದರೆ ಮತಾಂತರ ಆಗಲಿ. ಅವರು ಹಿಂದು ಧರ್ಮದಲ್ಲಿ ಇರೋದು ಬೇಡ’ ಎಂದು ಸಲಹೆಯನ್ನೂ ಕೊಟ್ಟಿದ್ದಾರೆ.
ನಾನು ತುಂಬಾ ತಪ್ಪು ಮಾಡುತ್ತಿರುವೆ, ನೀವೆಲ್ಲರೂ ಬಂದು ನನ್ನ ಶವದ ಮೇಲೆ ಮಣ್ಣು ಹಾಕಿ… ಇದೇ ನನ್ನ ಕೋರಿಕೆ

ಬೈಕ್​ನಲ್ಲಿ ಕುಳಿತು ನಿದ್ರೆಗೆ ಜಾರಿದ ತಾಯಿ-ಮಕ್ಕಳು ತರಗೆಲೆಯಂತೆ ರಸ್ತೆಗೆ ಉರುಳಿದರು! ಬೆಚ್ಚಿಬೀಳಿಸುತ್ತೆ ಈ ದೃಶ್ಯ

ಪತ್ನಿ ಊರಿಗೆ ಹೋದಳೆಂದು ಸ್ನೇಹಿತೆಯನ್ನ ಮನೆಗೆ ಕರೆಸಿಕೊಂಡ ಟೆಕ್ಕಿಗೆ ಕಾದಿತ್ತು ಶಾಕ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − six =
Remember me
