ಹಾಸನ:ರಾಜ್ಯ ರಾಜಕಾರಣದಲ್ಲಿ ಶೀಘ್ರವೇ ಧ್ರುವೀಕರಣ ಸಂಭವಿಸಲಿದೆ. ಸಾಕಷ್ಟು ಬದಲಾವಣೆಗಳನ್ನೂ ನಿರೀಕ್ಷಿಸಬಹುದು. ಇದು ರಾಜ್ಯಕ್ಕಷ್ಟೇ ಸೀಮಿತವಲ್ಲ, ದೇಶ ಮತ್ತು ಜಾಗತಿಕ ಮಟ್ಟದಲ್ಲೂ ಇಂತಹ ಬದಲಾವಣೆಗಳಾಗಲಿವೆ ಎಂದು ಕೋಡಿ ಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀಗಳು ಹಾಸನದಲ್ಲಿ ಭವಿಷ್ಯ ನುಡಿದಿದ್ದಾರೆ.
ಈಗ ಬಂದಿರುವ ಗ್ರಹಣಗಳೇ ಈ ಬದಲಾವಣೆಯ ಸಂಕೇತಗಳಾಗಿವೆ. ಸದ್ಯ ಗೋಚರಿಸುತ್ತಿರುವ ಭವಿಷ್ಯ ಪ್ರಕಾರ ನೀರು ಕಾಣಿಸುತ್ತಿದ್ದು, ಪುನಃ ಅಕಾಲಿಕ ಮಳೆ ಮತ್ತು ಜಲಸಂಬಂಧಿ ಅನಾಹುತಗಳಾಗುವ ಸಾಧ್ಯತೆಗಳು ದಟ್ಟವಾಗಿದೆ. ಇನ್ನು ಕರೊನಾ ಸಂಕಷ್ಟ ಸದ್ಯಕ್ಕೆ ಮಾಸಿ ಹೋಗಲ್ಲ. ಇನ್ನೂ ಹತ್ತು ವರ್ಷ ಬೇಕು ಇದರಿಂದ ಮುಕ್ತಿ ಸಿಗುವುದಕ್ಕೆ. ಕರೊನಾ ವೈರಸ್ ರೂಪಾಂತರಗೊಳ್ಳುವ ಬಗ್ಗೆ ಎರಡು ತಿಂಗಳು ಹಿಂದೆಯೇ ಹೇಳಿದ್ದೆ. ಅದು ಈಗ ನಿಜವಾಗಿದೆ ನೋಡಿ ಎಂದು ಶ್ರೀಗಳು ಹೇಳಿದರು.
ಇದನ್ನೂ ಓದಿ:ಎಎಸ್​ಐ ಪತ್ನಿಯ ಕತ್ತಿನಲ್ಲಿದ್ದ ಚಿನ್ನದ ಸರ ಕಸಿದು ಪರಾರಿಯಾದ್ರು ಸರಗಳ್ಳರು!
ಅರಸ ಪ್ರಜಾವಿರೋಏಧಿ ಕಾಯ್ದೆ ತರುತ್ತಾನೆ, ಪ್ರಜೆಗಳಿಂದ ವಿರೋಧ ಉಂಟಾಗಿ ಸಿಂಹಾಸನಕ್ಕೆ ತೊಂದರೆ ಆಗವುದೆಂದು ಈ ಹಿಂದೆಯೇ ಹೇಳಿದ್ದೆ. ಅದರಂತೆ ರೈತ ವಿರೋಧಿ ಕಾಯ್ದೆ ಜಾರಿಗೆ ತರಲು ಪ್ರಯತ್ನಿಸಿದರೂ ಆಗುತ್ತಿಲ್ಲ ನೋಡಿ. ಭೂಮಿ ಸಾರ ಕಳೆದುಕೊಂಡಿದೆ. ಈಗಿನ ಔಷಧಗಳೇ ಮನುಷ್ಯನ ಆರೋಗ್ಯಕ್ಕೆ ಮಾರಕವಾಗಲಿವೆ. ರಾಸಾಯನಿಕ ಮುಕ್ತ ಕೃಷಿ, ಗೋ ಕೇಂದ್ರಿತ ಬದುಕಿನಿಂದಷ್ಟೇ ಮನುಷ್ಯ ಆರೋಗ್ಯವಂತನಾಗಿರಲು ಸಾಧ್ಯ ಎಂದು ಶ್ರೀಗಳು ವಿವರಿಸಿದರು.
ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮಫೇಸ್​ಬುಕ್​ ಪುಟಲೈಕ್ ಮಾಡಿ ಮತ್ತು ಫಾಲೋ ಮಾಡಿ..
ಪಶ್ಚಿಮ ಬಂಗಾಳ ಚುನಾವಣೆ: ತಳಮಟ್ಟದಲ್ಲಿ ಸಂಘಟನೆಯ ಕೆಲಸ ಚುರುಕುಗೊಳಿಸಿದ ಬಿಜೆಪಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four − 1 =
Remember me
