ದಾವಣಗೆರೆ:ಖಾಸಗಿ ಕಾರ್ಯಕ್ರಮ ನಿಮಿತ್ತ ನಗರಕ್ಕೆ ಆಗಮಿಸಿದ್ದ ಕೋಡಿ ಮಠದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು ಮಹಾಮಾರಿ ಕರೊನಾ ಸೋಂಕು, ರಾಜ್ಯ ರಾಜಕೀಯ, ಸಿಎಂ ಬಿಎಸ್​ವೈ ಅಧಿಕಾರ ಕುರಿತು ಮಾತನಾಡಿದ್ದಾರೆ.
ಆಶ್ವೀಜ ಕಾರ್ತೀಕ ಮಾಸದಲ್ಲಿ ಕರೊನಾ ಸೋಂಕು ಉಲ್ಬಣವಾಗುತ್ತೆ ಎಂದಿದ್ದೆ. ಇದೀಗ ಯುಗಾದಿವರೆಗೂ ಸೋಂಕು ಕಡಿಮೆ ಆಗುವ ಲಕ್ಷಣಗಳಿಲ್ಲ. ಶಾಲಾ-ಕಾಲೇಜಗಳು ಪುನರ್​ ಆರಂಭವಾದರೂ ಮತ್ತೆ ಮುಚ್ಚಲಿವೆ. ಕರೊನಾ ಎರಡನೇ ಹಂತದಲ್ಲಿ ಪರಿವರ್ತನೆಯಾಗಲಿದೆ. ಅದು ಮಾನಸಿಕ ಕ್ಷೋಭೆಯಿಂದ ಬರಲಿದೆ, ಸಾವು ತರಲಿದೆ ಎಂದು ಕೋಡಿಮಠದ ಶ್ರೀಗಳು ಭವಿಷ್ಯ ನುಡಿದರು.
ಉತ್ತರ ಕರ್ನಾಟಕ ಜಲಪ್ರಳಯ ಆಗುತ್ತೆ ಎಂದು ಭವಿಷ್ಯ ಹೇಳಿದ್ದೆವು. ಅದು ಸತ್ಯವಾಗಿದೆ. ಡಿಸೆಂಬರ್​ವರೆಗೆ ಅಂಥ ಪ್ರಸಂಗಗಳು ಇವೆ. ಮನುಷ್ಯ ಎಲ್ಲ ಮರೆತ್ತಿದ್ದಾನೆ. ದುಡ್ಡು ದೊಡ್ಡಪ್ಪ ಆಗಿದೆ, ತತ್ವಗಳಿಗೆ ಬೆಲೆ ಇಲ್ಲದಂತಾಗಿದೆ. ಸತ್ಯ ಸತ್ತು ಹೋಗಿದೆ, ಜನರು ಮೋಸದಲ್ಲಿ ತೊಡಗಿದ್ದಾರೆ. ಗ್ರಹಣದ ಹಿನ್ನೆಲೆ ರಾಜ್ಯ ರಾಜಕೀಯ ವಿಪ್ಲವವಾಗಲಿದೆ. ರಾಜ್ಯ ರಾಜಕಾರಣದಲ್ಲಿ ಏರಿಳಿತ- ಅಶಾಂತಿ ಕಾಣಲಿದೆ ಎಂದು ಶ್ರೀಗಳು ಹೇಳಿದರು.
ಇನ್ನು ಸಿಎಂ ಬಿ.ಎಸ್‌. ಯಡಿಯೂರಪ್ಪ ಅಧಿಕಾರಾವಧಿ ಪೂರ್ಣಗೊಳಿಸುತ್ತಾರಾ? ಎಂದು ಸುದ್ದಿಗಾರರು ಕೋಡಿಮಠದ ಶ್ರೀಗಳನ್ನು ಕೇಳಿದರು. ಇದಕ್ಕೆ ಶ್ರೀಗಳು ‘ನೋ ಕಮೆಂಟ್‌’ ಎಂದಷ್ಟೇ ಹೇಳಿದರು.
ರಾಜ್ಯದಲ್ಲಿ ಈ ವರ್ಷ ಶಾಲೆ ಆರಂಭ ಇಲ್ಲ, ಮಹತ್ತರ ನಿರ್ಧಾರ ಕೈಗೊಂಡ ಸರ್ಕಾರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 1 =
Remember me
