ಬೆಂಗಳೂರು:ಬೆಳಗ್ಗೆ ಸಾರ್ವಜನಿಕ ಹಿತದ ಜಪ ಮಾಡಿದ್ದ ‘ರೈತ ನಾಯಕ’ ಕೋಡಿಹಳ್ಳಿ ಚಂದ್ರಶೇಖರ್, ಗಾಂಧಿನಗರದಲ್ಲಿ ಸಭೆ ನಡೆಸಿ ಫ್ರೀಡಂ ಪಾರ್ಕಿಗೆ ಹೋದ ಕೂಡಲೇ ಸಾರ್ವಜನಿಕ ಹಿತವನ್ನು ಮರೆತುಬಿಟ್ಟಿದ್ದಾರೆ. ಅಲ್ಲಿ ಪ್ರತಿಭಟನಾ ನಿರತರ ವೇದಿಕೆಯಲ್ಲಿ ಕುಳಿತು, ಸರ್ಕಾರದ ಪ್ರತಿನಿಧಿಯಾಗಿ ಸಚಿವರು ಇಲ್ಲಿಗೆ ಬಂದು ಎಲ್ಲ ಹತ್ತು ಬೇಡಿಕೆಗಳನ್ನೂ ಈಡೇರಿಸುವ ಭರವಸೆ ನೀಡಲಿ. ಅಲ್ಲಿ ತನಕ ಮುಷ್ಕರ ಮುಂದುವರಿಯಲಿದೆ ಎಂದು ಘೋಷಿಸಿ ಅಚ್ಚರಿ ಮೂಡಿಸಿದರು.
ಬೆಳಗ್ಗೆ ಕೋಡಿಹಳ್ಳಿ ಚಂದ್ರಶೇಖರ್ ದಿಗ್ವಿಜಯ ನ್ಯೂಸ್ ಜತೆಗೆ ಮಾತನಾಡುತ್ತ, ಮಧ್ಯಾಹ್ನದ ಹೊತ್ತಿಗೆ ಬಸ್ ಸಂಚಾರ ಆರಂಭವಾಗಬಹುದು. ಎಲ್ಲರೂ ತಮ್ಮ ತಮ್ಮ ಕೆಲಸಗಳಿಗೆ ಹೋಗಬಹುದು. ಸಾರ್ವಜನಿಕ ಹಿತವೂ ನಮಗೆ ಮುಖ್ಯ ಎನ್ನುತ್ತ, ಕೋರ್ ಕಮಿಟಿ ಜತೆಗೆ ಸಭೆ ನಡೆಸಿ ತೀರ್ಮಾನ ಪ್ರಕಟಿಸುವುದಾಗಿ ಹೇಳಿದ್ದರು. ಆದರೆ, ಈಗ ಬೆಳಗ್ಗೆ ತೆಗೆದುಕೊಂಡಿದ್ದ ನಿಲುವಿನಿಂದ ಹಿಂದೆ ಸರಿದ ಅವರು, ಮುಷ್ಕರ ಮುಂದುವರಿಸುವುದಾಗಿ ಘೋಷಿಸಿದ್ದಾರೆ.
ಇದನ್ನೂ ಓದಿ:ಜನಾಕ್ರೋಶಕ್ಕೆ ಬೆದರಿದ್ರು ಕೋಡಿಹಳ್ಳಿ – ಸಾರ್ವಜನಿಕ ಹಿತ ಮುಖ್ಯ ಎನ್ನುತ್ತ, ಮುಷ್ಕರ ಮಾಡುವ ನೌಕರರಿಗೆ ಆಸೆ, ನಿರಾಸೆ ಸಾಮಾನ್ಯ ಅಂದ್ರು
ಇದರೊಂದಿಗೆ ಅವರ ವಿರುದ್ಧದ ಆಕ್ರೋಶ ಹೆಚ್ಚಾಗಿದೆ. ಮುಷ್ಕರ ನಡೆಸುತ್ತಿದ್ದ ವಿವಿಧ ಸಂಘಟನೆಗಳವರು ಕೋಡಿಹಳ್ಳಿ ಮತ್ತು ಗ್ಯಾಂಗ್​ನಿಂದ ಅಂತರ ಕಾಯ್ದುಕೊಳ್ಳುವ ಕೆಲಸ ಮಾಡತೊಡಗಿವೆ. ಅವರ ಮುಷ್ಕರಕ್ಕೂ ತಮಗೂ ಸಂಬಂಧವಿಲ್ಲ ಎಂದು ಹೇಳಿರುವ ನೌಕರರು ತಮ್ಮ ತಮ್ಮ ಕೆಲಸಗಳಿಗೆ ಮರಳತೊಡಗಿದ್ದಾರೆ. (ದಿಗ್ವಿಜಯ ನ್ಯೂಸ್)
ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮಫೇಸ್​ಬುಕ್​ ಪುಟಲೈಕ್ ಮಾಡಿ ಮತ್ತು ಫಾಲೋ ಮಾಡಿ..
ಕೋಡಿಹಳ್ಳಿಯವರೇ ಲೀಡ್​ ಮಾಡಿ ‘ಡೀಲ್’ ಮಾಡಬೇಡಿ : ಅನಂತ ಸುಬ್ಬಾರಾವ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 2 =
Remember me
