ಹಾಸನ:ಮಾರಕ ಕರೊನಾ ವೈರಸ್​ನಿಂದ ಭಾರತಕ್ಕೆ ಹೆಚ್ಚಿನ ಅಪಾಯವೇನೂ ಇಲ್ಲ…ಎಂದು ಈಗಾಗಲೇ ಹೇಳಿರುವ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಈಗ ಮತ್ತೊಮ್ಮೆ ಅದನ್ನೇ ಪುನರುಚ್ಚರಿಸಿದ್ದಾರೆ.
ಅರಸಿಕೆರೆ ತಾಲೂಕಿನ ಕೋಡಿಮಠದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಕರೊನಾ ವೈರಸ್​ನಿಂದ ಭಾರತಕ್ಕೆ ಯಾವುದೇ ಗಂಡಾಂತರ ಇಲ್ಲ. ಸರ್ಕಾರದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ರಾಷ್ಟ್ರ ಶೀಘ್ರದಲ್ಲೇ ಅಪಾಯದಿಂದ ಪಾರಾಗಲಿದೆ ಎಂದಿದ್ದಾರೆ.
ಮೇ ಅಂತ್ಯಕ್ಕೆಲ್ಲ ಕರೊನಾ ಭಾರತದಿಂದ ಮಾಯವಾಗಲಿದೆ. ಪ್ರಕೃತಿ ಜತೆಗೆ ಜನರು ಸಹಕರಿಸಬೇಕು ಎಂದು ಹೇಳಿದ ಅವರು, ‘ಸಿರಿವಂತ ಮಗನುಟ್ಟಿ (ಡೊನಾಲ್ಡ್ ಟ್ರಂಪ್) ಆಳುವನು ಮುನಿಪುರವ (ಅಮೆರಿಕ), ಯುದ್ಧವಿಲ್ಲದೆ ನುಡಿಯೆ ಪುರವೆಲ್ಲ ಕೂಳಾದೀತು..’ ಯುದ್ಧವಿಲ್ಲದೆ ಜನರು ಮಡಿಯುತ್ತಾರೆ ಎಂದು ಹೇಳಿದ್ದಾರೆ.
ಈ ಕಾಯಿಲೆ ಶೀತ ಪ್ರದೇಶಕ್ಕೆ ಹೆಚ್ಚು ಹಾನಿ ಮಾಡುತ್ತದೆ. ಆದರೆ ಭಾರತದಲ್ಲಿ ದೊಡ್ಡಮಟ್ಟದ ಸಾವು-ನೋವು ಆಗುವುದಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ.
ಕರ್ನಾಟಕದ ಬಗ್ಗೆಯೂ ಒಂದು ವಿಷಯವನ್ನು ಶ್ರೀಗಳು ಹೇಳಿದ್ದಾರೆ. ಕರ್ನಾಟಕದಲ್ಲಿ ಜನರ ಬೇಜವಾಬ್ದಾರಿಯಿಂದ ಸ್ವಲ್ಪ ಸಮಸ್ಯೆ ಆಗುತ್ತಿದೆ. ಕರೊನಾದಿಂದ ಅರಸನಿಗೆ (ಸಿಎಂ ಯಡಿಯೂರಪ್ಪ) ಏನೂ ಸಮಸ್ಯೆಯಿಲ್ಲ. ಆದರೆ ಕೆಲವು ಸಚಿವರಿಗೆ ಕಂಟಕ ಕಾದಿದೆ ಎಂದು ಹೇಳಿದ್ದಾರೆ.
ಕ್ವಾರಂಟೈನ್​ಗೆ ಒಳಗಾಗಬೇಕಾದ ವೈದ್ಯ ಕ್ಲಿನಿಕ್​ ಬಾಗಿಲು ಮುಚ್ಚಿ ಬಚ್ಚಿಟ್ಟುಕೊಂಡಿದ್ದೇಕೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + twelve =
Remember me
