ಬೇತಮಂಗಲ:ಮದುವೆ ಆಮಂತ್ರಣ ಕೊಡುವ ನೆಪದಲ್ಲಿ ಬಂದಿದ್ದ ಮಹಿಳೆಯರಿಬ್ಬರು ಮನೆಯವರನ್ನು ಪ್ರಜ್ಞೆ ತಪ್ಪಿಸಿ 200 ಗ್ರಾಂ ಆಭರಣ ದೋಚಿದ್ದ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದೆ. ಆಭರಣ ಕಳವಾಗಿದೆ ಎಂದು ದೂರು ನೀಡಿದ್ದ ಮಹಿಳೆಯನ್ನೇ ಇದೀಗ ಬೇತಮಂಗಲ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ!
ಆಮಂತ್ರಣ ಪತ್ರಿಕೆ ಕೊಡುವ ನೆಪದಲ್ಲಿ ಮನೆ ಬಳಿ ಬಂದ ಮಹಿಳೆಯರಿಬ್ಬರು ಆಭರಣ ದೋಚಿ ಪರಾರಿಯಾಗಿದ್ದಾ ಎಂದು ಕಳೆದ ವಾರ ಬೇತಮಂಗಲ ಪೊಲೀಸ್​ ಠಾಣೆಯಲ್ಲಿ ಪಟ್ಟಣದ 2ನೇ ಬ್ಲಾಕ್​ ನಿವಾಸಿ ನೂರ್​ ಅಮೀನ್ ದೂರು ದಾಖಲಿಸಿದ್ದರು. ಠಾಣೆ ಸಮೀಪವೇ ಇಂತಹ ಕೃತ್ಯ ನಡೆದಿರುವುದು ಮತ್ತಷ್ಟು ಆತಂಕ ಹೆಚ್ಚಿಸಿತ್ತು.
ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಡಾ.ಧರಣಿದೇವಿ ಮಾಲಗತ್ತಿ ಸೇರಿದಂತೆ ಹಿರಿಯ ಪೊಲೀಸ್​ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು. ಶ್ವಾನದಳ ಸೇರಿದಂತೆ ಇತರ ವಿಶೇಷ ಪೊಲೀಸ್​ ತಂಡಗಳು ಪರಿಶೀಲಿಸಿದ್ದವು. ತನಿಖೆ ಕೈಗೊಂಡಿದ್ದ ಬೇತಮಂಗಲ ಪಿಎಸ್​ಐ ಜಗದೀಶ್​ ರೆಡ್ಡಿ ಮತ್ತು ತಂಡವು ಸೂಕ್ಷ್ಮವಾಗಿ ತನಿಖೆ ನಡೆಸಿದಾಗ ದೂರುದಾರ ಮಹಿಳೆ ಮೇಲೆಯೇ ಅನುಮಾನ ಬಂದಿದೆ. ಆಗ ಮಹಿಳೆಯನ್ನು ವಿಚಾರಣೆ ನಡೆಸಿದಾಗ ತಾನೇ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ.
ಅಕ್ರಮ ಸಂಬಂಧ:ಬಂಧಿತೆ ನೂರ್​ ಅಮೀನ್​ ಅಕ್ಕ ಅಕ್ರಮ ಸಂಬಂಧ ಇಟ್ಟುಕೊಂಡಿದ್ದು ಈ ಗುಟ್ಟನ್ನು ರಟ್ಟಾಗದಂತೆ ನೋಡಿಕೊಳ್ಳಲು ಆಕೆಯಿಂದ ಆಭರಣ ಪಡೆದಿದ್ದಳು. ಆಭರಣಗಳು ಕಳೆದುಹೋಗಿವೆ ಎಂದು ಮನೆಯವರನ್ನು ನಂಬಿಸಲು ಠಾಣೆಯಲ್ಲಿ ದೂರು ನೀಡಿದ್ದಳು ಎಂದು ವಿಚಾರಣೆ ವೇಳೆ ತಿಳಿದುಬಂದಿದೆ. ಪೊಲೀಸರನ್ನೇ ಆಟ ಆಡಿಸಿದ ಖತರ್ನಾಕ್​ ಮಹಿಳೆಯ ವಿರುದ್ಧ ದೂರು ದಾಖಲಿಸಿ ಶುಕ್ರವಾರ ಜೈಲಿಗೆ ಕಳುಹಿಸಲಾಗಿದೆ.
ಬೇತಮಂಗಲ ಪಿಎಸ್​ಐ ಜಗದೀಶರೆಡ್ಡಿ, ಶ್ರೀನಿವಾಸ್​, ಸಿಬ್ಬಂದಿ ಶಿವಪ್ರಸಾದ್​, ನಟರಾಜ್​, ಸಂಪಂಗಿ, ರಾಜ್​ಕುಮಾರ್​, ರೇಣುಕಾ ಕಿರಣ್ಣನವರ್​, ಮುರಳಿ ತಂಡವು ಯಶಸ್ವಿ ಕಾರ್ಯಾಚರಣೆ ನಡೆಸಿದೆ.
ಕುಣಿಗಲ್​ ಸ್ಟಡ್​ ಫಾರಂನಲ್ಲಿ ದುರಂತ: ಹೆಜ್ಜೇನು ದಾಳಿಗೆ ಕೋಟ್ಯಂತರ ಬೆಲೆಬಾಳುವ ವಿದೇಶಿ ತಳಿಯ 2 ಕುದುರೆಗಳ ಸಾವು

ಕನ್ನಡ ಸಾಹಿತ್ಯ ಸಮ್ಮೇಳನಕ್ಕೆಂದು ಹಾವೇರಿಗೆ ಆಗಮಿಸಿದ್ದ ಮಂಡ್ಯ ಮೂಲದ ಶಿಕ್ಷಕ ಸಾವು

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:1 × two =
Remember me
