ಕೋಲಾರ:ತನ್ನ ಮಕ್ಕಳನ್ನು ನೋಡಿಕೊಂಡು ಬರಲು ಅಮೆರಿಕಗೆ ತರಳಿದ್ದ ಕೋಲಾರ ಮೂಲದ ವ್ಯಕ್ತಿಯೊಬ್ಬರು ವಯೋಸಹಜ ಕಾಯಿಲೆಯಿಂದ ಅಲ್ಲಿಯೇ ಮೃತಪಟ್ಟಿದ್ದು, ಅವರ ಮೃತದೇಹವನ್ನು ಭಾರತಕ್ಕೆ ತರಿಸಲು ಸಂಸದ ಮುನಿಸ್ವಾಮಿ ಸಹಾಯ ಮಾಡಿದ್ದಾರೆ.
ವೆಂಕಟೇಶಯ್ಯ (91) ಮೃತ ದುರ್ದೈವಿ. ಕಳೆದ ಹನ್ನೊಂದು ದಿನಗಳ ಹಿಂದೆ ಅಂದರೆ ಆಗಸ್ಟ್ 23 ರಂದು ಕೋಲಾರ ನಗರದ ಗಾಂಧಿನಗರದ ವೆಂಕಟೇಶಯ್ಯ ಮೃತಪಟ್ಟಿದ್ದರು. ವೃದ್ಧನ ಶವವನ್ನು ತರಲು ಕುಟುಂಬಸ್ಥರು ಪರದಾಟ ನಡೆಸಿದ್ದರು. ಸಂಸದ ಮುನಿಸ್ವಾಮಿ ಸಹಾಯ ಮಾಡಿದ್ದು, ವೆಂಕಟೇಶಯ್ಯ ಮೃತದೇಹ ನಾಳೆ ಬೆಂಗಳೂರಿಗೆ ಆಗಮಿಸಲಿದೆ.
ಇದನ್ನೂ ಓದಿ:ಮಾಲ್ಡೀವ್ಸ್​ನಲ್ಲಿ ಮೈಚಳಿ ಬಿಟ್ಟು ಕ್ಯಾಮೆರಾಗೆ ಪೋಸ್​ ನೀಡಿದ ಸೋನು ಶ್ರೀನಿವಾಸ ಗೌಡ: ನೆಟ್ಟಿಗರು ಹೇಳಿದ್ದಿಷ್ಟು…

ವೆಂಕಟೇಶಯ್ಯ ಅವರ ಮಗ ಸುರೇಶ್ ಕುಮಾರ್ ಹಾಗೂ ಇನ್ನೂ ಕೆಲವು ಸಂಬಂಧಿಕರು ಅಮೆರಿಕದ ಪೀಟರ್ಸ್​ಬರ್ಗ್​ನಲ್ಲಿ ನೆಲೆಸಿದ್ದಾರೆ. ಹೀಗಾಗಿ ಅವರನ್ನು ನೋಡಲು ಅಮೆರಿಕಕ್ಕೆ‌ ತೆರಳಿದ್ದರು. ಅಲ್ಲಿಗೆ ತಲುಪಿದ ಕೆಲವು ದಿನಗಳ ನಂತರ ವೆಂಕಟೇಶಯ್ಯ ವಯೋಸಹಜ ಕಾಯಿಲೆಯಿಂದ ಮೃತಪಟ್ಟಿದ್ದಾರೆ. ಆದರೆ ಅವರ ಅಂತ್ಯ ಸಂಸ್ಕಾರವನ್ನು ಕೋಲಾರದಲ್ಲೇ ಮಾಡಬೇಕು ಎಂದು ಕುಟುಂಬಸ್ಥರು ನಿರ್ಧಾರ ಮಾಡಿದ ಹಿನ್ನಲೆ ಮೃತ ವೆಂಕಟೇಶಯ್ಯ ಅವರ ಶವವನ್ನು ಕೋಲಾರಕ್ಕೆ ತರಲು ಪ್ರಯತ್ನಿಸಿದರು.
ಕೆಲವೊಂದು ಕಾನೂನು ತೊಡಕುಗಳು ಬಂದ ಹಿನ್ನಲೆಯಲ್ಲಿ ಶವವನ್ನು ತರುವುದು ಅಷ್ಟು ಸುಲಭವಾಗಿರಲಿಲ್ಲ. ಈ ಹಿನ್ನಲೆಯಲ್ಲಿ ಕೋಲಾರದ ವೆಂಕಟೇಶಯ್ಯ ಅವರ ಸಂಬಂಧಿಗಳು ಸಂಸದ ಎಸ್.ಮುನಿಸ್ವಾಮಿ ಅವರನ್ನು ಸಂಪರ್ಕ ಮಾಡಿ, ಈ ವಿಚಾರವನ್ನು ತಿಳಿಸಿ, ಶವವನ್ನು ಕೋಲಾರಕ್ಕೆ ತರಲು ನೆರವಾಗುವಂತೆ ಮನವಿ ಮಾಡಿದ್ದರು.
ಇದನ್ನೂ ಓದಿ:ರಾಜ್ಯಾದ್ಯಂತ ಅಡೆನೊ ವೈರಸ್​ ಭೀತಿ: ವ್ಯಾಪಕವಾಗುತ್ತಿದೆ ಸಾಂಕ್ರಾಮಿಕ ರೋಗ; ಹವಾಮಾನ ವೈಪರೀತ್ಯ ಕಾರಣ

ಕುಟುಂಬಸ್ಥರ ಮನವಿಗೆ ಸ್ಪಂದಿಸಿದ ಸಂಸದ ಮುನಿಸ್ವಾಮಿ ಕೇಂದ್ರದ ವಿದೇಶಾಂಗ ಸಚಿವಾಲಯವನ್ನು ಸಂಪರ್ಕಿಸಿ, ಮೃತದೇಹವನ್ನು ಭಾರತಕ್ಕೆ ತರಲು ಇದ್ದ ಕಾನೂನು ತೊಡಕುಗಳನ್ನು ನಿವಾರಣೆ ಮಾಡಿದ್ದಾರೆ. ಸತತ ಹನ್ನೊಂದು ದಿನಗಳ ನಂತರ ಅಂದರೆ ನಾಳೆ ವೆಂಕಟೇಶಯ್ಯ ಅವರ ಮೃತದೇಹವು ಭಾರತಕ್ಕೆ ಬರಲಿದೆ. ನಾಳೆ ರಾತ್ರಿ ವೇಳೆಗೆ ವೆಂಕಟೇಶಯ್ಯ ಅವರ ಪಾರ್ಥವ ಶರೀರ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಲಿದೆ.
ಕಠಿಣ ಪರಿಸ್ಥಿತಿಯಲ್ಲಿ ಶೀಘ್ರವಾಗಿ ಸ್ಪಂದಿಸಿ, ನೆರವು ನೀಡಿದ ಸಂಸದ ಮುನಿಸ್ವಾಮಿ ಅವರಿಗೆ ಮೃತರ ಕುಟುಂಬಸ್ಥರು ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ಮಾಲ್ಡೀವ್ಸ್​ನಲ್ಲಿ ಮೈಚಳಿ ಬಿಟ್ಟು ಕ್ಯಾಮೆರಾಗೆ ಪೋಸ್​ ನೀಡಿದ ಸೋನು ಶ್ರೀನಿವಾಸ ಗೌಡ: ನೆಟ್ಟಿಗರು ಹೇಳಿದ್ದಿಷ್ಟು…

ಸನಾತನ ಧರ್ಮ ಎಂಬುದು ಮಲೇರಿಯಾ, ಡೆಂಘೆ ಇದ್ದಂತೆ: ಹೊಸ ವಿವಾದ ಹುಟ್ಟುಹಾಕಿದ ಉದಯನಿಧಿ ಸ್ಟಾಲಿನ್​

ತಿರುಗುಬಾಣವಾದ ಹನಿ ಟ್ರಾಪ್​: ಆ ಕ್ಷಣ ಅಂಕಣ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − twenty =
Remember me
