ಬೆಂಗಳೂರು:ಲೋಕಸಭೆ ಅಭ್ಯರ್ಥಿಗಳ ಮತ್ತೊಂದು ಪಟ್ಟಿಯನ್ನು ಕಾಂಗ್ರೆಸ್​ ಶುಕ್ರವಾರ ಬಿಡುಗಡೆ ಮಾಡಿದೆ. ಒಟ್ಟು 5 ಅಭ್ಯರ್ಥಿಗಳ ಈ ಪಟ್ಟಿಯಲ್ಲಿ ಮೂರು ಕರ್ನಾಟಕಕ್ಕೆ ಸೇರಿವೆ.
ಬಳ್ಳಾರಿ (ಎಸ್​ಟಿ ಮೀಸಲು) ಕ್ಷೇತ್ರದಿಂದ ಇ. ತುಕಾರಾಂ, ಚಾಮರಾಜನಗರದಿಂದ (ಎಸ್​ಸಿ ಮೀಸಲು) ಸುನೀಲ್​ ಬೋಸ್​, ಚಿಕ್ಕಬಳ್ಳಾಪುರ ಕ್ಷೇತ್ರದಿಂದ ರಕ್ಷಾ ರಾಮಯ್ಯ ಅವರಿಗೆ ಟಿಕೆಟ್​ ನೀಡಲಾಗಿದೆ.
ಕಾಂಗ್ರೆಸ್‌ 24 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಈ ಮೊದಲೇ ಘೋಷಿಸಿದ್ದು, ನಾಲ್ಕು ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಣೆ ಬಾಕಿ ಇತ್ತು. ಈ ಪೈಕಿ ಈಗ 3 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ. ಆದರೆ, ಕೋಲಾರದ ಕಗ್ಗಂಟು ಹಾಗೆಯೇ ಮುಂದುವರಿದಿದೆ. ಈಗ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿಯೂ ಕೋಲಾರ ಕ್ಷೇತ್ರದ ಅಭ್ಯರ್ಥಿಯನ್ನು ಅಂತಿಮಗೊಳಿಸಿಲ್ಲ.
ಕೋಲಾರ ಲೋಕಸಭೆ ಟಿಕೆಟ್ ​ಅನ್ನು ಸಚಿವ ಮುನಿಯಪ್ಪ ಅವರ ಅಳಿಯ ಚಿಕ್ಕಪೆದ್ದಣ್ಣಗೆ ಅವರಿಗೆ ನೀಡಿದ್ದಲ್ಲಿ ಜಿಲ್ಲೆಯ ಐವರು ಶಾಸಕರು ರಾಜೀನಾಮೆ ನೀಡುವುದಾಗಿ ಕೋಲಾರ ಕ್ಷೇತದ ಶಾಸಕ ಕೊತ್ತೂರು ಮಂಜುನಾಥ್​ ಬೆದರಿಕೆ ಹಾಕಿದ್ದಾರೆ.
ಒಂದು ವೇಳೆ ಮುನಿಯಪ್ಪ ಕುಟುಂಬಕ್ಕೆ ಟಿಕೆಟ್​ ನೀಡಿದ್ದಲ್ಲಿ 12 ಗಂಟೆಗೆ ಸುಮಾರಿಗೆ ಸಭಾಪತಿಗೆ ಕಚೇರಿಗೆ ಭೇಟಿ ನೀಡಿ, ರಾಜಿನಾಮೆ ಪತ್ರ ನೀಡುತ್ತೇವೆ. ಮಧ್ಯಾಹ್ನ 3 ಗಂಟೆಗೆ ಮಂಗಳೂರಿಗೆ ಪ್ರಯಾಣ ಮಾಡುತ್ತೇವೆ. ಸಂಜೆ ನಾಲ್ಕು ಗಂಟೆಗೆ ಸಭಾಪತಿಗಳನ್ನು ಭೇಟಿ ಮಾಡಲಿದ್ದೇವೆ ಎಂದು ಶಾಸಕ ಮಂಜುನಾಥ್​ ಎಚ್ಚರಿಕೆ ನೀಡಿದ್ದಾರೆ.
ಕರ್ನಾಟಕದಲ್ಲಿ ಏಪ್ರಿಲ್‌ 26 ಮತ್ತು ಮೇ 7 ರಂದು ಎರಡು ಹಂತಗಳಲ್ಲಿ ರಾಜ್ಯದಲ್ಲಿ ಚುನಾವಣೆ ನಡೆಯಲಿದೆ. ಈಗಾಗಲೇ ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳು ಬಹುತೇಕ ಕ್ಷೇತ್ರಗಳಿಗೆ ತಮ್ಮ ಅಭ್ಯರ್ಥಿಗಳನ್ನು ಘೋಷಿಸಿವೆ. ಕೆಲವು ಕ್ಷೇತ್ರಗಳಲ್ಲಿ ಬಂಡಾಯ ಕೂಡ ಕಂಡುಬಂದಿದೆ. ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸುತ್ತಿದ್ದು, ಕಾಂಗ್ರೆಸ್‌ ಏಕಾಂಗಿಯಾಗಿ ಚುನಾವಣಾ ಕಣಕ್ಕಿಳಿದಿದೆ. ಎಲ್ಲ 28 ಕ್ಷೇತ್ರಗಳಲ್ಲಿ ನೇರ ಸ್ಪರ್ಧೆ ಏರ್ಪಡುವುದು ಸ್ಪಷ್ಟವಾಗಿದೆ.

ಈ ಭಿಕ್ಷುಕಿ ಕುಡಿದು ಬಿಸಾಕಿದ ಕಾಫಿಯನ್ನು ತೀರ್ಥದಂತೆ ಸೇವಿಸುತ್ತಾರೆ… ಈ ಮಹಿಳೆಯನ್ನು ದೇವರ ಸಮಾನ ಕಾಣುವುದೇಕೆ?
​ಪಿಸ್ತೂಲ್ ಹಿಡಿದು ರೀಲ್ಸ್​ ಮಾಡಿದ ಯುವಕರು: ನನ್ನ ನೆಕ್ಸ್ಟ್ ಟಾರ್ಗೆಟ್‌ ನಿಂದು ಇದೆಲೇ… ಎಂದೆಲ್ಲ ಡೈಲಾಗ್​ ಹೊಡೆದವರು ಪೊಲೀಸರ ಅತಿಥಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × two =
Remember me
