ಕೋಲಾರ:ಸರ್ ದಯವಿಟ್ಟು ಯಾರಾದರೂ ನನಗೆ ಆಧಾರ್ ಕಾರ್ಡ್ ಮಾಡಿಸಿಕೊಡಿ… ಆಧಾರ್ ಇಲ್ಲದೆ ಅಂಗವಿಕಲ ವೇತನವಿಲ್ಲ… ಪಡಿತರ ಸಾಮಗ್ರಿಗಳು ಸಿಗುತ್ತಿಲ್ಲ ಎಂದು ತನ್ನ ಅಸಹಾಯಕತೆಯನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದ ಅಂಗವಿಕಲೆಗೆ ಕೊನೆಗೂ ಆಧಾರ್ ಕಾರ್ಡ್ ಸಿಕ್ಕಿದೆ.

ಅಂಗವಿಕಲ ಯುವತಿಯ ಮನವಿಗೆ ಸ್ಪಂದಿಸಿರುವ ತಾಲ್ಲೂಕು ಆಡಳಿತ ಯುವತಿಯ ಮನೆಗೆ ತೆರಳಿ ಆಧಾರ್ ಕಾರ್ಡ್ ಮಾಡಿಕೊಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಹುನುಕುಂದ ಗ್ರಾಮದ 22 ವರ್ಷದ ಶಾರದ ಎಂಬ ಅಂಗವಿಕಲೆ ಆಧಾರ್‌ ಕಾರ್ಡ್‌ಗಾಗಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದ ಮೊರೆ ಹೋಗಿದ್ದರು.

ಇದನ್ನು ಗಮನಿಸಿದ ಸಮಾಜ ಸೇವಕ, ಕರುನಾಡು ಸೇವಕರ ಸಂಘದ ಸದಸ್ಯ ರಾಮ್ ಪ್ರಸಾದ್, ತಾಲ್ಲೂಕು ಅಧಿಕಾರಿಗಳೊಂದಿಗೆ ಚರ್ಚಿಸಿ ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಅದರಂತೆ ಅಧಿಕಾರಿಗಳು ಇಂದು ಶಾರದ ಮನೆಗೆ ತೆರಳಿ ಆಧಾರ್ ಕಾರ್ಡ್ ಮಾಡಿಕೊಟ್ಟಿದ್ದಾರೆ.

ಇಂದು ಯುವತಿಯ ಸ್ವಗ್ರಾಮ ಹುನುಕುಂದ ಗ್ರಾಮಕ್ಕೆ ತಂತ್ರಜ್ಞಾನದೊಂದಿಗೆ ತೆರಳಿದ ಅಧಿಕಾರಿಗಳು ಯುವತಿಯ ಮನೆಯಲ್ಲಿಯೇ ಆಧಾರ್ ಕಾರ್ಡ್ ಮಾಡಿಸಿಕೊಡಲಾಗಿದೆ. ಆಧಾರದ ಕಾರ್ಡ್ ಅನ್ನು ಮನೆಯಲ್ಲೇ ಸಿದ್ಧಪಡಿಸಲು ಬಂಗಾರಪೇಟೆ ತಹಶೀಲ್ದಾರ್ ದಯಾನಂದ್ ನಿರ್ದೇಶನದಲ್ಲಿ ಆಧಾರ್ ಕಾರ್ಡ್ ವಿಭಾಗದ ರಾಮೇಗೌಡ ಅಂಗವಿಕಲೆಗೆ ಆಧಾರ್ ಕಾರ್ಡ್ ಮಾಡಿಕೊಟ್ಟಿದ್ದಾರೆ.

ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ-ವಿಡಿಯೋಗಳು ವೈರಲ್ ಆಗಿದ್ದು, ಅಧಿಕಾರಿಗಳು ಹಾಗೂ ಸಮಾಜ ಸೇವಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.(ದಿಗ್ವಿಜಯ ನ್ಯೂಸ್​)
ವ್ಯಾಲೆಂಟೈನ್ಸ್ ಡೇಗೂ ಮುನ್ನ ಸರ್ಪ್ರೈಸ್ ಕೊಟ್ರಾ ಕೀರ್ತಿ ಸುರೇಶ್​? ಇದೆನಾ ವೈರಲ್ ಫೋಟೋ ಸೀಕ್ರೆಟ್?

ವ್ಯಾಲೆಂಟೈನ್ಸ್ ಡೇಗೂ ಮುನ್ನವೇ ಲವ್ ಎಂದು ಬರೆದ ಟೀ ಶರ್ಟ್ ಧರಿಸಿ ಯುವತಿ ಆತ್ಮಹತ್ಯೆ..!

ಉಡುಪಿಯ ಯುವತಿ ಈಗ ಆಕ್ಸ್‌ಫರ್ಡ್ ವಿವಿ ವಿದ್ಯಾರ್ಥಿ ಸಂಘದ ಅಧ್ಯಕ್ಷೆ! ದಾಖಲೆ ಬರೆದ ಕನ್ನಡತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × four =
Remember me
