ಕೋಲಾರ :ಕರೊನಾ ಸಂಕಷ್ಟಕ್ಕೆ ಜಗತ್ತೇ ತಲ್ಲಣಗೊಂಡಿದೆ. ಅನೇಕರು ಉದ್ಯೋಗ ಕಳೆದುಕೊಂಡಿದ್ದಾರೆ. ಹಲವು ಉದ್ಯೋಗದಾತರೂ ಸಂಕಷ್ಟಕ್ಕೀಡಾಗಿದ್ದಾರೆ. ಇವುಗಳ ನಡುವೆ, ಕೆಲಸ ಮಾಡಿಸಿಕೊಂಡು ನಾಲ್ಕು ತಿಂಗಳಿಂದ ವೇತನ ನೀಡದೇ ಇದ್ದ ಕಾರಣ ಹತಾಶರಾಗಿದ್ದ ನೌಕರರು ಇಂದು ಕಂಪನಿಯ ಕಚೇರಿ ಮೇಲೆ ದಾಂಧಲೆ ನಡೆಸಿ, ಕಲ್ಲು ತೂರಾಟ, ಆಸ್ತಿಪಾಸ್ತಿಗೆ ಹಾನಿ ಉಂಟುಮಾಡಿದ್ದಾರೆ.
ಕೋಲಾರ ತಾಲೂಕಿನ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿರುವ ವಿಸ್ಟಾನ್ ಕಂಪನಿಯ ಮೇಲೆ ಕಲ್ಲು ತೂರಾಟ ನಡೆದಿರುವಂಥದ್ದು. ನಾಲ್ಕು ತಿಂಗಳ ನಿಂದ ವೇತನವನ್ನು ನೀಡಿಲ್ಲ ಎಂಬ ಆರೋಪ ನೌಕರರದ್ದು. ಆಕ್ರೋಶಗೊಂಡ ಕಾರ್ಮಿಕರು ಇಂದು ಕಂಪನಿಯ ಗಾಜು ಮತ್ತು ಕಾರುಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ವಾಹನಗಳನ್ನು ಮಗುಚಿ ಹಾಕಿದ್ದು, ಕೆಲವಕ್ಕೆ ಬೆಂಕಿ ಕೂಡ ಹಚ್ಚಿದ್ದಾರೆ.
ಇದನ್ನೂ ಓದಿ:ಅಶ್ಲೀಲ ವಿಡಿಯೋ ಕರೆ ಮಾಡಿ ಇನ್​ಸ್ಪೆಕ್ಟರನ್ನೇ ಬ್ಲ್ಯಾಕ್​ಮೇಲ್ ಮಾಡೋಕೆ ಶುರುಮಾಡಿದಳಾಕೆ!
ಸುಮಾರು 11,000 ಕಾರ್ಮಿಕರು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ರಾತ್ರಿಯ ಪಾಳಿಗೆ ಬಂದಂತಹ ಸಾವಿರಾರು ಕಾರ್ಮಿಕರು ಈ ಕೃತ್ಯವೆಸಗಿದ್ದು, ಕಂಪನಿಯ ಗಾಜಿನ ಆವರಣಗಳನ್ನು ಒಡೆದು ಹಾಕಿದ್ದಲ್ಲದೆ ಕಂಪನಿಯಲ್ಲಿದ್ದ ಬೆಲೆಬಾಳುವ ಲ್ಯಾಪ್ ಟಾಪ್, ಐಪೋನ್ ಪೋನ್ ಗಳನ್ನು ತೆಗೆದುಕೊಂಡು‌ ಹೋಗಿದ್ದಾರೆ ಎಂದು ಕಂಪನಿ ಮೂಲಗಳು ತಿಳಿಸಿವೆ.
ಇದನ್ನೂ ಓದಿ:ನರ್ಸ್​ಗಳ ಬೆತ್ತಲೆ ವಿಡಿಯೋ ಚಿತ್ರೀಕರಿಸಿ ಪ್ರಿಯಕರನಿಗೆ ಕಳುಹಿಸುತ್ತಿದ್ದಳಾಕೆ: ಮೊಬೈಲಲ್ಲಿದ್ದವು ನೂರಾರು ವಿಡಿಯೋ!
ಪರಿಸ್ಥಿತಿ ಕೈ ಮೀರಿದ ಕಾರಣ ಸ್ಥಳಕ್ಕಾಗಮಿಸಿದ ವೇಮಗಲ್ ಪೊಲೀಸ್ ಠಾಣೆಯ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಉದ್ರಿಕ್ತ ನೌಕರರನ್ನು ಅಲ್ಲಿಂದ ಚದುರಿಸಿದ್ದಾರೆ. ಆದಾಗ್ಯೂ, ಪೊಲೀಸರ ಕಣ್ತಪ್ಪಿಸಿ ಕಂಪನಿಯ ಆಸ್ತಿಪಾಸ್ತಿಗೆ ಹಾನಿ ಎಸಗಲು ನೌಕರರು ಪ್ರಯತ್ನಿಸಿದ್ದಾಗಿ ಸ್ಥಳೀಯರು ತಿಳಿಸಿದ್ದಾರೆ. (ದಿಗ್ವಿಜಯ ನ್ಯೂಸ್)
ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮಫೇಸ್​ಬುಕ್​ ಪುಟಲೈಕ್ ಮಾಡಿ ಮತ್ತು ಫಾಲೋ ಮಾಡಿ..
ಸಾರಿಗೆ ನೌಕರರ ಮುಷ್ಕರ ಎರಡನೆ ದಿನ: ಸಾರಿಗೆ ಸಮರಕ್ಕೆ ನಲುಗಿದ ಸಾರ್ವಜನಿಕರು, ಮಲಗಿದೆ ಆಡಳಿತ ಯಂತ್ರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + 18 =
Remember me
