ಕೋಲಾರ:‘ನಿಮ್ಮ ಕಂಪನಿಗೆ ಜಮೀನು ಕೊಡಿಸಿದ್ದು ನಾನೇ. ಆಹಾರ ಸರಬರಾಜು ಮಾಡುವ ಗುತ್ತಿಗೆದಾರ ನನ್ನನ್ನು ಗಮನಿಸುತ್ತಿಲ್ಲ, ಕಮಿಷನ್ ಕೊಡದೆ ವ್ಯವಹಾರ ಮಾಡುತ್ತಿದ್ದಾನೆ. ಹಣ ಕೊಡದಿದ್ದರೆ ಕಾರ್ವಿುಕರಿಗೆ ನೀಡುವ ಊಟಕ್ಕೆ ವಿಷ ಹಾಕುವೆ…’ ಈ ರೀತಿಯಾಗಿ ಜಿಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರೂ ಆಗಿರುವ ಮಾಲೂರು ತಾಲೂಕಿನ ಕುಡಿಯನೂರು ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯ ಚಿನ್ನಸ್ವಾಮಿ ಗೌಡ ಸ್ಥಳೀಯ ಆಲ್ ಕಾಗೋ ಕಾರ್ಖಾನೆಯ ಸೂಪರ್ ವೈಸರ್​ಗೆ ಧಮಕಿ ಹಾಕಿದರೆನ್ನಲಾದ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
6 ದಿನಗಳ ಹಿಂದೆ ವಿಸ್ಟ್ರಾನ್ ಕಂಪನಿಯಲ್ಲಿ ಕಾರ್ವಿುಕರ ಗುಂಪೊಂದು ವೇತನ ವಿಚಾರವಾಗಿ ದಾಂಧಲೆ ನಡೆಸಿ ಅಪಾರ ಮೊತ್ತದ ಆಸ್ತಿ-ಪಾಸ್ತಿಗೆ ಹಾನಿ ಮಾಡಿರುವ ಘಟನೆ ಮಾಸದಿರುವಾಗಲೇ ಗುತ್ತಿಗೆದಾರನಿಂದ ಕಮಿಷನ್ ಬರುತ್ತಿಲ್ಲ ಎಂಬ ಕೋಪಕ್ಕೆ ಊಟಕ್ಕೆ ವಿಷ ಹಾಕುವುದಾಗಿ ಜನಪ್ರತಿನಿಧಿಯೊಬ್ಬರು ಅವಾಚ್ಯ ಪದಗಳಿಂದ ಅವಾಜ್ ಹಾಕಿರುವುದು ಜಿಲ್ಲೆಯ ಜನತೆಯಲ್ಲಿ ಆತಂಕವನ್ನುಂಟು ಮಾಡಿದೆ.
‘ನಾನು ಜಿಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ, ನಿಮ್ಮ ಕಾರ್ಖಾನೆಗೆ ಊಟ ಸರಬರಾಜು ಮಾಡುವ ಗುತ್ತಿಗೆದಾರ ಯಾರು, ಅಯ್ಯೋ ಪಾಪ ಅಂತ ಗುತ್ತಿಗೆ ಕೊಡಿಸಿದೆ. ಆದರೆ ಕಮಿಷನ್ ಕೊಡುತ್ತಿಲ್ಲ, ನನಗೂ ತಾಪತ್ರಯ ಇದೆ, ಗ್ರಾಪಂ ಚುನಾವಣೆ ಬಂದಿದೆ, ಮುಂದೆ ಜಿಪಂ, ತಾಪಂ ಚುನಾವಣೆ ಬರುತ್ತೆ, ಕಮಿಷನ್ ಕೊಡದಿದ್ದರೆ ಹೇಗೆ?’ ಎಂದು ದರ್ಪ ತೋರಿದ್ದಾರೆ. ಚಿನ್ನಸ್ವಾಮಿ ಅಶ್ಲೀಲವಾಗಿ ಮಾತನಾಡಿದರೂ ಸಮಾಧಾನದಿಂದ ಪ್ರತಿಕ್ರಿಯೆ ನೀಡಿರುವ ಸೂಪರ್​ವೈಸರ್ ಕುಮಾರ್, ‘ಗುತ್ತಿಗೆದಾರರ ಫೋನ್ ನಂಬರ್ ಕೊಟ್ಟು ಇವರ ಬಳಿ ಮಾತನಾಡಿ. ನಾಳೆ ನಮ್ಮ ಮ್ಯಾನೇಜ್​ವೆುಂಟ್ ಜತೆ ಮಾತನಾಡಿ, ನಿಮ್ಮ ಸಮಸ್ಯೆ ಬಗೆಹರಿಸಿಕೊಳ್ಳಿ’ ಎಂದು ಹೇಳಿದರೂ ಪ್ರತಾಪ ಮುಂದುವರಿಸಿ, ‘ಗುತ್ತಿಗೆದಾರ ಈಗಲೇ ನನ್ನ ಜತೆ ಮಾತನಾಡಬೇಕು, ಇಲ್ಲದಿದ್ದರೆ ಅನ್ನಕ್ಕೆ ವಿಷ ಹಾಕುವೆ, ಗಾಡಿಗೆ ಬೆಂಕಿ ಹಚ್ಚುವೆ’ ಎಂದು ಬೆದರಿಕೆ ಹಾಕಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಮಾರಸಂದ್ರ ಗೇಟ್ ಬಳಿ ವಾಹನಗಳು ಅಡ್ಡಾದಿಡ್ಡಿ ಓಡಾಡುತ್ತವೆ, ನನ್ನ ಗಾಡಿಗೆ ಆಲ್ ಕಾಗೋ ಕಂಪನಿ ಕಾರ್ವಿುಕರಿಗೆ ಆಹಾರ ಸರಬರಾಜು ಮಾಡುವ ಗುತ್ತಿಗೆದಾರನ ವಾಹನ ಡಿಕ್ಕಿ ಹೊಡೆದು ನಷ್ಟ ಉಂಟು ಮಾಡಿತ್ತು. ವಾಹನ ಚಾಲಕ ಗಾಡಿ ಬಿಟ್ಟು ಪರಾರಿಯಾಗಿದ್ದ, ಇದರಿಂದ ಕೋಪ ಬಂದು ಬೈದದ್ದು ನಿಜ, ಯಾರೋ ಆಡಿಯೋ ಮಾಡಿ ವೈರಲ್ ಮಾಡಿದ್ದಾರೆ, ಇನ್ನುಮುಂದೆ ಭಾಷೆ ಬಳಸುವ ವಿಚಾರದಲ್ಲಿ ಎಚ್ಚರ ವಹಿಸುವೆ.| ಚಿನ್ನಸ್ವಾಮಿಗೌಡಅಧ್ಯಕ್ಷ, ಶಿಕ್ಷಣ ಮತ್ತುಸ್ಥಾಯಿ ಸಮಿತಿ, ಕೋಲಾರ ಜಿಪಂ
ಸೆಕ್ಸ್​ ಮಾಡುವಾಗ ಪ್ರಜ್ಞೆ ತಪ್ಪಿದಳು, ನಾನು ಕೊಲೆ ಮಾಡಿಲ್ಲ… ಎಂದು ಕಣ್ಣೀರಿಟ್ಟ ಆರೋಪಿ

ವಾಟ್ಸ್​ಆ್ಯಪ್​ ವಿಡಿಯೋ ಕಾಲ್​ನಲ್ಲಿ ಬೆತ್ತಲಾದ ಯುವತಿಯರು… ಕಣ್ತುಂಬಿಕೊಂಡವನಿಗೆ ಕಾದಿತ್ತು ಭಾರಿ ಸಂಕಷ್ಟ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × five =
Remember me
