ಬೆಂಗಳೂರು:ಒಂದೂವರೆ ವರ್ಷ ಕೋಮಾದಲ್ಲಿದ್ದು ಚೇತರಿಸಿ ಕೊಂಡ ವಿದ್ಯಾರ್ಥಿಯೊಬ್ಬ ತನ್ನ ಕೊಲೆಗೆ ಯತ್ನಿಸಿ ಕೋಮಾಕ್ಕೆ ಕಳುಹಿಸಿದ ಸ್ನೇಹಿತರಿಬ್ಬರಿಗೆ ಜೈಲುಶಿಕ್ಷೆ ಕೊಡಿಸಿದ್ದಾನೆ.
ಬೆಂ. ಗ್ರಾಮಾಂತರ ಪ್ರಧಾನ ಜಿಲ್ಲಾ ನ್ಯಾಯಾಲಯ ಇಬ್ಬರು ಅಪರಾಧಿಗಳಿಗೆ 7 ವರ್ಷ ಕಠಿಣ ಸಜೆ ಮತ್ತು ತಲಾ 1 ಲಕ್ಷ ರೂ. ದಂಡ ವಿಧಿಸಿದೆ. ಪಶ್ಚಿಮ ಬಂಗಾಳ ಮೂಲದ ಶಶಾಂಕ್​ದಾಸ್ ಮತ್ತು ಜೀತೇಂದ್ರ ನಾಥ್ ಶಿಕ್ಷೆಗೆ ಒಳಗಾದವರು. ಅಪರಾಧಿಗಳ ಕೃತ್ಯದಿಂದ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಸೋವಿಕ್ ಚಟರ್ಜಿಗೆ ಒಟ್ಟು ದಂಡದ ಮೊತ್ತದಲ್ಲಿ 1.90 ಲಕ್ಷ ರೂ.ಗಳನ್ನು ಪರಿಹಾರವಾಗಿ ನೀಡಬೇಕು ಎಂದು ನ್ಯಾಯಾಲಯ ಆದೇಶಿಸಿದೆ.
ಏನಿದು ಪ್ರಕರಣ?:ಹೊಸಕೋಟೆ ತಾಲೂಕಿನಲ್ಲಿರುವ ಖಾಸಗಿ ಕಾಲೇಜಿ ನಲ್ಲಿ ವಿದ್ಯಾಭ್ಯಾಸಕ್ಕಾಗಿ ಪಶ್ಚಿಮ ಬಂಗಾಳದಿಂದ ಸ್ನೇಹಿತರಾದ ಶಶಾಂಕ್​ದಾಸ್, ಜೀತೇಂದ್ರ ನಾಥ್, ಸೋವಿಕ್ ಚಟರ್ಜಿ ಬಂದಿದ್ದರು. ಮೂವರೂ ಆವಲಹಳ್ಳಿ ಬಳಿ ನೆಲೆಸಿದ್ದರು. ಈ ನಡುವೆ ಹುಡುಗಿಯೊಬ್ಬಳನ್ನು ಪ್ರೀತಿಸುವ ವಿಚಾರವಾಗಿ ಸೋವಿಕ್ ಮತ್ತು ಶಶಾಂಕ್ ನಡುವೆ ಜಗಳ ನಡೆದಿತ್ತು. ಇದರಿಂದ ಆಕ್ರೋಶಗೊಂಡ ಶಶಾಂಕ್, ಜಿತೇಂದ್ರನಾಥ್​ನ ಜತೆ ಸೇರಿ ಸೋವಿಕ್​ನನ್ನು ಕೊಲೆ ಮಾಡಲು ನಿರ್ಧರಿಸಿದ್ದ. ಅದರಂತೆ 2010ರ ಡಿ.6ರಂದು ಸೋವಿಕ್​ನನ್ನು ಮನೆಗೆ ಕರೆದಿದ್ದ. ಆತ ಮನೆಗೆ ಬಂದಾಗ 2ನೇ ಮಹಡಿಗೆ ಕರೆದೊಯ್ದು ಇಬ್ಬರೂ ಹಿಗ್ಗಾಮುಗ್ಗಾ ಥಳಿಸಿ, ನಂತರ ಕೆಳಕ್ಕೆ ತಳ್ಳಿ ಕೊಲೆ ಮಾಡಲು ಯತ್ನಿಸಿದ್ದರು. ಸ್ಥಳೀಯರ ಸಹಾಯದಿಂದ ಸೋವಿಕ್ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದ.
ಒಂದೂವರೆ ವರ್ಷ ಕೋಮಾದಲ್ಲಿದ್ದಒಂದೂವರೆ ವರ್ಷ ಕೋಮಾ ಸ್ಥಿತಿಯಲ್ಲಿದ್ದ ಸೋವಿಕ್ ಇತ್ತೀಚೆಗೆ ಗುಣಮುಖನಾಗಿದ್ದು, ಪ್ರಕರಣವನ್ನು ವಿವರಿಸಲೆತ್ನಿಸುತ್ತಿದ್ದ. ರೇಖಾ ಚಿತ್ರಗಳನ್ನು ಬಿಡಿಸುವ ಮೂಲಕ ಘಟನೆಯನ್ನು ವಿವರಿಸಿದ್ದ. ಈ ರೇಖಾಚಿತ್ರದ ಸುಳಿವು ಪಡೆದ ಪೊಲೀಸರು ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಚಾರ್ಜ್​ಶೀಟ್​ನಲ್ಲಿ ಉಲ್ಲೇಖಿಸಿದ ಸಾಕ್ಷಾ್ಯಧಾರ ಪರಿಶೀಲಿಸಿದ ನ್ಯಾಯಾಧೀಶರು ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + 4 =
Remember me
