ಚಾಮರಾಜನಗರ:ಕೌಟುಂಬಿಕ ಕಲಹದಿಂದ ಮನನೊಂದಿರುವ ಇಬ್ಬರು ಮಹಿಳೆಯರು ದೇವರಿಗೆ ಪತ್ರ ಬರೆದು ಮನವಿ ಮಾಡಿಕೊಂಡಿರುವ ವಿನೂತನ ಪ್ರಸಂಗ ಕೊಳ್ಳೇಗಾಲದಲ್ಲಿ ನಡೆದಿದೆ.
ಬಿಟ್ಟು ಹೋಗಿರುವ ಗಂಡಂದಿರು ಮರಳಿ ಮನೆಗೆ ಬರುವಂತೆ ದೇವರಿಗೆ ಪ್ರತ್ಯೇಕವಾಗಿ ಇಬ್ಬರು ಮಹಿಳೆಯರು ಪತ್ರ ಬರೆದಿದ್ದಾರೆ. ಕೊಳ್ಳೇಗಾಲ ಪಟ್ಟಣದ ನಾರಾಯಣಸ್ವಾಮಿ ದೇವಸ್ಥಾನದ ಹುಂಡಿಯನ್ನು ಎಣಿಕೆ ಮಾಡುವಾಗ ಪತ್ರ ಸಿಕ್ಕಿದೆ.
ನನ್ನ ಗಂಡ ಜಗಳವಾಡಿಕೊಂಡು ಬಿಟ್ಟು ಹೋಗಿದ್ದಾನೆ. ಓ ದೇವರೇ ಅವನಿಗೆ ಒಳ್ಳೆ ಬುದ್ಧಿ ಕೊಟ್ಟು ನನ್ನ ಜತೆ ಸಂಸಾರ ಮಾಡಲು ಕಳುಹಿಸು. ನಾನು ಹೇಳಿದಂತೆ ನನ್ನ ಗಂಡ ಕೇಳಬೇಕೆಂದು ಭಕ್ತೆ ತನ್ನ ಪತ್ರದಲ್ಲಿ ಉಲ್ಲೇಖಿಸಿದ್ದಾಳೆ.
ಹುಂಡಿ ಎಣಿಕೆ ಮಾಡುವಾಗ ಸಿಕ್ಕಿದ ಮಹಿಳೆಯ ಇದೀಗ ಎಲ್ಲೆಡೆ ವೈರಲ್ ಆಗಿದೆ. ಪತ್ರ ಕಂಡು ಮುಜರಾಯಿ ಇಲಾಖೆ ಅಧಿಕಾರಿಗಳು ಆಶ್ಚರ್ಯಗೊಂಡಿದ್ದಾರೆ. ಆದರೆ, ಪತ್ರದಲ್ಲಿ ಮಹಿಳೆಯರ ವಿಳಾಸವಾಗಲಿ ಅಥವಾ ಫೋನ್ ನಂಬರ್ ಯಾವುದು ಇಲ್ಲ. ಏನೇ ಆಗಲಿ ಅವರ ಕೋರಿಕೆಯನ್ನು ದೇವರು ಈಡೇರಿಸುತ್ತಾನಾ ಎಂಬುದೇ ಇಲ್ಲಿ ಯಕ್ಷ ಪ್ರಶ್ನೆಯಾಗಿದೆ.(ದಿಗ್ವಿಜಯ ನ್ಯೂಸ್​)
ಹೆಲಿಕಾಪ್ಟರ್‌ ಖರೀದಿಸಿ ಓಡಿಸಬೇಕಿದೆ… ಪ್ಲೀಸ್‌ ಪರವಾನಗಿ ನೀಡಿ: ಮಹಿಳೆಯೊಬ್ಬರಿಂದ ರಾಷ್ಟ್ರಪತಿಗೆ ಮನವಿ

VIDEO: ಪ್ರೇಮಿಗಳ ದಿನದಂದು ದರ್ಶನವಾಯ್ತು ಜ್ಯೂ. ಚಿರು ಮುದ್ದುಮುಖ- ನೀವೂ ನೋಡಿ ಪುಟಾಣಿಯ ಫೋಟೋ‌

ಕಾಂಡೋಮ್‌ ತೆಗೆಯಲು ಮಹಿಳೆಯ ಸಮ್ಮತಿ ಅಗತ್ಯ- ಇಲ್ಲದಿದ್ದರೆ ಶಿಕ್ಷೆ: ಬರಲಿದೆ ಹೀಗೊಂದು ಕಾನೂನು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + 6 =
Remember me
