ಕೊಳ್ಳೇಗಾಲ:ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಮೇಗಲದೊಡ್ಡಿ ಗ್ರಾಮದ ಹೊರ ವಲಯದಲ್ಲಿ ಮಂಗಳವಾರ ಬೆಳಗ್ಗೆ ಬಾಲಕಿಯೊಬ್ಬಳು ಹೊಟ್ಟೆಹಿಡಿದು ನರಳಾಡುತ್ತಿದ್ದಳು. ಅಯ್ಯೋ, ಮಗಳೇ ಎನ್ನುತ್ತಾ ಚೀರಾಡಿಕೊಂಡು ಬಂದ ಪಾಲಕರು ಆಕೆಯನ್ನ ಬದುಕಿಸಿಕೊಳ್ಳಲು ಆಸ್ಪತ್ರೆಗೆ ಕರೆದೊಯ್ಯಲು ಯತ್ನಿಸಿದರಾದರೂ ಮಾರ್ಗಮಧ್ಯೆ ಕೊನೆಯುಸಿರೆಳೆದಳು.
ಮೇಗಲದೊಡ್ಡಿ ಗ್ರಾಮದ ನಿವಾಸಿ ಲೂರ್ಧಸ್ವಾಮಿ ಅವರ ಪುತ್ರಿ ದಿವ್ಯಾ(17) ಮೃತ ದುರ್ದೈವಿ. ಕಳೆದ ವರ್ಷ ಕರೊನಾ ಹಿನ್ನೆಲೆ ಲಾಕ್​ಡೌನ್​ ಜಾರಿಯಾಗಿದ್ದರಿಂದ ಕಾಲೇಜಿಗೆ ಹೋಗದೆ ದಿವ್ಯಾ ಗ್ರಾಮದ ಜಮೀನುಗಳಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದಳು.ಇದನ್ನೂ ಓದಿರಿನೀನಂದ್ರೆ ನನಗಿಷ್ಟ, ಪಾಸ್​ ಆಗಬೇಕಂದ್ರೆ ಕೋಣೆಗೆ ಬಾ ಎಂದು ರೇಪ್​ ಮಾಡಿದ ಪ್ರಾಧ್ಯಾಪಕ!
ಇತ್ತೀಚೆಗೆ ಕಾಲೇಜು ಆರಂಭವಾದ ಹಿನ್ನೆಲೆ ದ್ವಿತೀಯ ಪಿಯುಸಿ ವಿದ್ಯಾಭ್ಯಾಸಕ್ಕೆ ತೆರಳುವಂತೆ ದಿವ್ಯಾಗೆ ಪಾಲಕರು ಬಲವಂತ ಮಾಡಿದ್ದರು. ಇದಕ್ಕೆ ಒಲ್ಲದ ದಿವ್ಯಾ, ಬುಧವಾರ ಬೆಳಗ್ಗೆ ಆತ್ಮಹತ್ಯೆಗೆ ನಿರ್ಧರಿಸಿ ಗ್ರಾಮ ಹೊರವಲಯದಲ್ಲಿ ಕ್ರಿಮಿನಾಶಕ ಸೇವಿಸಿದ್ದಾಳೆ. ಆಕೆ ನರಳಾಡುತ್ತಿದ್ದನ್ನ ಕಂಡ ಪಾಲಕರು ಕೂಡಲೇ ಪಟ್ಟಣದ ಉಪವಿಭಾಗ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲು ಕರೆದೊಯ್ಯುತ್ತಿದ್ದರು. ಮಾರ್ಗಮಧ್ಯೆ ಮೃತಪಟ್ಟಿದ್ದಾಳೆ.
ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆ ಎಎಸ್ಐ ಅಶ್ವಥ್ ಪ್ರಕರಣ‌ ದಾಖಲಿಸಿಕೊಂಡಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ವಾರಸುದಾರರಿಗೆ ಮೃತದೇಹ ಕೊಡಲಾಗಿದೆ. ಓದು ಎಂದು ಹೇಳಿದ್ದೇ ತಪ್ಪಾಯ್ತಾ? ಯಾಕವ್ವ ಇಂಥ ನಿರ್ಧಾರ ಮಾಡಿಬಿಟ್ಟೆ ಎಂದು ಪಾಲಕರು ಗೋಳಾಡುತ್ತಿದ್ದ ದೃಶ್ಯ ಮನಕಲಕುವಂತಿತ್ತು.
ಒಬ್ಬನೊಂದಿಗೇ ಅಮ್ಮ-ಮಗಳ ಅಕ್ರಮ ಸಂಬಂಧ! ಪ್ರಿಯಕರನೊಟ್ಟಿಗೆ ಆ ರಾತ್ರಿ ನಡೆಯಿತು ಘೋರ ಕೃತ್ಯ

ಪತಿಯನ್ನ ಕೊಂದು ಹೋಮಕುಂಡದಲ್ಲಿ ಸುಟ್ಟಿದ್ದ ಪತ್ನಿ! ಬೇಲ್​ ಮೇಲೆ ಹೊರ ಬಂದವಳಿಂದ ಮತ್ತೊಂದು ನೀಚ ಕೃತ್ಯ

ತವರು ಮನೆಯಲ್ಲಿ ಮಗಳು ಆತ್ಮಹತ್ಯೆ! ಸಾವಿಗೂ ಮುನ್ನ ಮನದ ದುಃಖ ಅಕ್ಷರಕ್ಕಿಳಿಸಿದ ಸುಂದರಿ

ಕದ್ದ ಕಾರಿನಲ್ಲಿದ್ದ ವಸ್ತು ನೋಡಿ ಬೆಚ್ಚಿದ ಖದೀಮರು, ಕಾರಿನಲ್ಲೇ ಚಿನ್ನಾಭರಣ ಬಿಟ್ಟು ಎಸ್ಕೇಪ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 1 =
Remember me
