ಚಾಮರಾಜನಗರ:ಅತ್ತ ಪತ್ನಿ ಪ್ರವಾಸಕ್ಕೆ ತೆರಳಿದ್ದಳು. ಇತ್ತ ಮನೆಯಲ್ಲಿದ್ದ ಪತಿ ಕೊಲೆಯಾಗಿದ್ದ. ಕಾಲೇಜು ಮುಗಿಸಿ ಮನೆಗೆ ಬಂದ ಮಗಳು ಅಪ್ಪನ ಶವ ಕಂಡು ಬೆಚ್ಚಿಬಿದ್ದಿದ್ದಾಳೆ.
ಇಂತಹ ಘಟನೆ ಕೊಳ್ಳೇಗಾಲದ ಮಧುವನಹಳ್ಳಿಯಲ್ಲಿ ಬುಧವಾರ ನಡೆದಿದೆ. ಗ್ರಾಮದಲ್ಲಿ ಚಿಲ್ಲರೆ ಅಂಗಡಿ ಇಟ್ಟುಕೊಂಡಿದ್ದ ಮಹದೇವಸ್ವಾಮಿ(45) ಮೃತ. ಈತನ ತಲೆಗೆ ಒನಕೆಯಿಂದ ಹೊಡೆದು ಸಾಯಿಸಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.
ಮಹದೇವಸ್ವಾಮಿ ಅವರ ಪತ್ನಿ ಮಂಜುಳಾ ಆರೇಳು ದಿನಗಳ ಹಿಂದೆ ಮಹಿಳಾ ಸಂಘದವರೊಂದಿಗೆ ಪ್ರವಾಸ ಹೋಗಿದ್ದಳು. 12 ವರ್ಷದ ಮಗ ಅಂಗವಿಕಲರ ವಸತಿ ಶಾಲೆಯಲ್ಲಿದ್ದಾನೆ. 17 ವರ್ಷದ ಮಗಳು ಮತ್ತು ತಂದೆ ಮಹದೇವಸ್ವಾಮಿ ಮನೆಯಲ್ಲಿದ್ದರು.
ಮಗಳು ಬುಧವಾರ ಕಾಲೇಜು ಮುಗಿಸಿ ಸಂಜೆ 5.30ರ ಸಮಯದಲ್ಲಿ ಮನೆಗೆ ಬಂದಿದ್ದಾಳೆ. ಅಂಗಡಿಯಲ್ಲಿ ತನ್ನ ಅಪ್ಪ ಇಲ್ಲದ್ದನ್ನು ಕಂಡು ಫೋನ್ ಮಾಡಿದಾಗ ಮನೆಯೊಳಗೆ ರಿಂಗ್ ಆಗಿದೆ. ಮಳೆಯೊಳಗೆ ಹೋದಾಗ ರಸ್ತದ ಮಡುವಲ್ಲಿ ತಂದೆ ಶವವಾಗಿ ಬಿದ್ದಿರುವುದನ್ನು ಕಂಡು ಬೆಚ್ಚಿಬಿದ್ದಿದ್ದಾಳೆ. ಪ್ರವಾಸಕ್ಕೆ ಹೋಗಿದ್ದ ತಾಯಿಗೆ ವಿಷಯ ಗೊತ್ತಾಗುತ್ತಿದ್ದಂತೆ ಕಣ್ಣೀರಿಡುತ್ತಾ ವಾಪಸ್​ ಆಗಮಿಸಿದ್ದಾರೆ.
ಘಟನೆ ನಡೆದು ಸಾಕಷ್ಟು ಸಮಯವಾಗಿದ್ದರೂ ಮಧ್ಯರಾತ್ರಿ 2 ಗಂಟೆಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಪೊಲೀಸರು ಸ್ಥಳಕ್ಕೆ‌ ಭೇಟಿ ನೀಡಿದಾಗ ಮಹದೇವಸ್ವಾಮಿಯ ಹಣೆ‌ ಮೇಲೆ‌ ವಿಭೂತಿ, ಕುಂಕುಮ ಹಚ್ಚಿ‌ ಹೂವಿನ ಹಾರ ಹಾಕಲಾಗಿತ್ತು. ಕೊಳ್ಳೇಗಾಲ ಗ್ರಾಮಾಂತರ ಠಾಣೆ ಪೊಲೀಸರು ಮೃತನ ಮಗಳಿಂದ ದೂರು ಸ್ವೀಕರಿಸಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಚಾಮರಾಜನಗರ ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಗದಗದಲ್ಲಿ ಶಿಕ್ಷಕನಿಂದಲೇ ಮಗನ ಕೊಲೆ: ಚಿಕಿತ್ಸೆ ಫಲಿಸದೆ ಅತಿಥಿ ಶಿಕ್ಷಕಿ ಗೀತಾ ಬಾರಕೇರ್ ಸಾವು

ಇಮ್ರಾನ್ ಖಾನ್ ಆಡಿಯೋ ಲೀಕ್​: ನಿಮ್ಮಿಂದಾಗಿ ನನ್ನ ಖಾಸಗಿ ಅಂಗಗಳು ನೋಯುತ್ತಿವೆ.. ಇಂದು ಬರೋಕೆ ಆಗಲ್ಲ…

ಕೆರೆ ಬಳಿ ಕಾದು ಸಾವಿನ ಮನೆಯ ಕದ ತಟ್ಟಿದ 3 ತಿಂಗಳ ಗರ್ಭಿಣಿ… ನವವಿವಾಹಿತೆಯ ಬಾಳಿಗೆ ಕೊಳ್ಳಿ ಇಟ್ಟಿದ್ದೇನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × five =
Remember me
