ಕೊಪ್ಪಳ:ದರ್ಗಾ ಅಭಿವೃದ್ಧಿಗೆ 6 ಕೋಟಿ ರೂಪಾಯಿ ದೇಣಿಗೆ ನೀಡುವ ಮೂಲಕ ಮೊದಲ ದಿನವೇ ಗಂಗಾವತಿ ವಿಧಾನಸಭಾ ಕ್ಷೇತ್ರದ ಹಾಲಿ ಹಾಗೂ ಮಾಜಿ ಶಾಸಕರಿಗೆ ಮಾಜಿ ಸಚಿವ ಜನಾರ್ದನ ರೆಡ್ಡಿ ಬಿಗ್​ ಶಾಕ್​​ ನೀಡಿದ್ದಾರೆ.
ತಮ್ಮ ರಾಜಕೀಯ ನಡೆಯ ಬಗ್ಗೆ ಇನ್ನೂ ಸ್ಪಷ್ಟ ನಿಲುವು ಘೋಷಿಸದ ಜನಾರ್ದನ ರೆಡ್ಡಿ, ಜ.25ಕ್ಕೆ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ಕರೆದಿದ್ದು, ರಾಜಕೀಯ ನಡೆಯ ಬಗ್ಗೆ ಮಹತ್ವದ ಘೋಷಣೆ ಮಾಡಲಿದ್ದಾರೆ. ಅದಕ್ಕೂ ಮುನ್ನವೇ ರೆಡ್ಡಿ ಮಠ-ಮಾನ್ಯಗಳಿಗೆ ಹಾಗೂ ದರ್ಗಾಗಳಿಗೆ ಭೇಟಿ ನೀಡುವ ಮೂಲಕ ರಾಜಕೀಯ ನೆಲೆ ಭದ್ರ ಮಾಡಿಕೊಳ್ಳಲು ಯತ್ನಿಸುತ್ತಿದ್ದಾರೆ. ಗಂಗವತಿಯ ಸ್ಥಳೀಯ ಮುಖಂಡರನ್ನು ಸಹ ಭೇಟಿ ಮಾಡುತ್ತಿದ್ದಾರೆ.
ಮುಸ್ಲಿಮತ ಮತಬುಟ್ಟಿಯ ಮೇಲೆ ಕಣ್ಣಿಟ್ಟಿರುವ ಜನಾರ್ದನ ರೆಡ್ಡಿ, ದರ್ಗಾ ಅಭಿವೃದ್ಧಿಗೆ 6 ಕೋಟಿ ರೂ.‌ ದೇಣಿಗೆ ನೀಡಿದ್ದಾರೆ. ಗಂಗಾವತಿಯ ಖಲಿಲುಲ್ಲಾ ಖಾದ್ರಿ ದರ್ಗಾ ಅಭಿವೃದ್ಧಿಗೆ ದೇಣಿಗೆ ನೀಡಿದ್ದು, ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಮತ ಬ್ಯಾಂಕ್​ಗೆ ರೆಡ್ಡಿ ನೇರವಾಗಿ ಕೈ ಹಾಕಿದ್ದಾರೆ.
ದರ್ಗಾದ ಶಾದಿ ಮಹಲ್ ನಿರ್ಮಾಣಕ್ಕೆ ಧನ ಸಹಾಯ ಮಾಡಲು ರೆಡ್ಡಿ ವಾಗ್ದಾನ ಮಾಡಿದ್ದು, 6 ಕೋಟಿ ರೂ. ವೆಚ್ಚದ ಕಾಂಟ್ರಾಕ್ಟ್​ಗೆ ಸಹಿ ಮಾಡಿದ್ದಾರೆ. ಬೆಳಗಾವಿ ಮೂಲದ ಸ್ಟುಡಿಯೋ ಅಮೀರ್ ಕಂಪನಿಗೆ ನಿರ್ಮಾಣ ಜವಾಬ್ದಾರಿ ನೀಡಿರುವ ರೆಡ್ಡಿ, ನೇರವಾಗಿ ಕಂಪನಿಗೆ ಹಣ ನೀಡುವುದಾಗಿ ಸಹಿ ಮಾಡಿದ್ದಾರೆ.
ದರ್ಗಾದಲ್ಲೇ ಕಾಂಟ್ರಾಕ್ಟ್ ಪತ್ರಗಳಿಗೆ ರೆಡ್ಡಿ ಸಹಿ ಮಾಡಿದ್ದು, ಮೊದಲ ದಿನವೇ ಗಂಗಾವತಿ ಹಾಲಿ-ಮಾಜಿ ಶಾಸಕರಿಗೆ ಜನಾರ್ದನ ರೆಡ್ಡಿ ಶಾಕ್ ನೀಡಿದ್ದಾರೆ. ರೆಡ್ಡಿ ನಡೆಯಿಂದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಗಲಿಬಿಲಿಗೊಂಡಿದ್ದು, ಬಿಜೆಪಿ ಶಾಸಕ ಪರಣ್ಣ ಮುನವಳ್ಳಿ ಈಗಾಗಲೇ ಡಿಸ್ಟರ್ಬ್​ ಆಗಿದ್ದಾರೆ.(ದಿಗ್ವಿಜಯ ನ್ಯೂಸ್​)
ನನ್ನ ಗುರಿ ಏನಿದ್ರು ರೆಸ್ಟ್ ಆಫ್ ದಿ ವರ್ಲ್ಡ್ ಎಂದು ಗುಡುಗಿದ ರಾಕಿ ಭಾಯ್​: ಜಗತ್ತು ಗೆಲ್ಲಲು ಹೊರಟ ಯಶ್​

ಮಕ್ಕಳ ಊಟಕ್ಕೆ 500 ರೂ. ಬೇಡಿದ ಬಡ ಮಹಿಳೆ: ಹರಿದುಬಂದ ಹಣದ ನೆರವಿನ ಮೊತ್ತ ಕೇಳಿದ್ರೆ ಬೆರಗಾಗ್ತೀರಾ!

ಅಪೌಷ್ಟಿಕತೆ ನಿವಾರಣೆಗೆ ಸರ್ಕಾರ ಕಂಕಣ; ಮಹಿಳಾ-ಮಕ್ಕಳ ಕಲ್ಯಾಣ ಇಲಾಖೆಯಿಂದ ಮಹತ್ತರ ಯೋಜನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 4 =
Remember me
