ಕೊಪ್ಪಳ:ಪಾಪಿ ಪತಿಯೊಬ್ಬ ಕುಡಿದ ಅಮಲಿನಲ್ಲಿ ಪೆಟ್ರೋಲ್ ಸುರಿದು ತನ್ನ ಪತ್ನಿಗೆ ಬೆಂಕಿ ಹಚ್ಚಿರುವ ಅಮಾನವೀಯ ಘಟನೆ ಕೊಪ್ಪಳದ ದೇವರಾಜು ಅರಸು ಬಡಾವಣೆಯಲ್ಲಿ ನಡೆದಿದೆ.
ಶನಿವಾರ ತಡರಾತ್ರಿ ಮಕ್ಕಳ ಮುಂದೆಯೇ ಆರೋಪಿ ಬುಡ್ಡಪ್ಪ ತನ್ನ ಪತ್ನಿ ಚೆನ್ನಮ್ಮಳ ಮೇಲೆ ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿದ್ದಾನೆ. ಈ ದೃಶ್ಯವನ್ನು ಸ್ವತಃ ಮಗಳೇ ವಿಡಿಯೋ ಮಾಡಿದ್ದಾಳೆ.
ಇದನ್ನೂ ಓದಿರಿ:ಬಿಜೆಪಿಯವ್ರು ದುಡ್ಡು ಕೊಟ್ರೂ ತಗೊಳಿ, ಮಹಿಳೆಯರೇ ಕೈಒಡ್ಡಿ… ಆದ್ರೆ ವೋಟ್​ ಮಾತ್ರ ನಮ್ಗೆ ಹಾಕಿ… ಎಂದ ಅಧ್ಯಕ್ಷೆ!
ಚೆನ್ನಮ್ಮಳಿಗೆ ಇಬ್ಬರು ಹೆಣ್ಣುಮಕ್ಕಳು ಹಾಗೂ ಒಬ್ಬ ಗಂಡು ಮಗನಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಚೆನ್ನಮ್ಮಳನ್ನು ನಿನ್ನೆ ರಾತ್ರಿಯೇ ಮಗಳು ದೀಪ ತನ್ನ ಅಜ್ಜಿಯ ಸಹಾಯದಿಂದ ತಾಯಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾಳೆ.
ಸದ್ಯ ಚೆನ್ನಮ್ಮ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬುಡ್ಡಪ್ಪ ನಿತ್ಯ ಕುಡಿದು ಬಂದು ಜಗಳವಾಡುತ್ತಾನೆಂದು ಹಿರಿಯ ಮಗಳು ದೀಪಾ ಹೇಳಿಕೆ ನೀಡಿದ್ದು, ಈ ಸಂಬಂಧ ಕೊಪ್ಪಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.(ದಿಗ್ವಿಜಯ ನ್ಯೂಸ್​)
ಕಾಡುಗಳ್ಳ ವೀರಪ್ಪನ್​ ರಹಸ್ಯವೊಂದನ್ನು ಬಿಚ್ಚಿಟ್ಟ ಮಗಳು: ಸತ್ಯಮಂಗಲ ಅರಣ್ಯದಲ್ಲಿ ಅಡಗಿದೆ ಆ ರಹಸ್ಯ!

ರಜೆಯಲ್ಲಿದ್ದ ಸೈನಿಕನನ್ನು ಗುಂಡಿಟ್ಟು ಕೊಂದ ಭಯೋತ್ಪಾದಕರು

ಸಮೋಸಾ ಕೊಡ್ತೇನೆಂದು ಚಿಕ್ಕಪ್ಪ ಕರ್ಕೊಂಡೋದ… ಅಲ್ಲಿ ಅಜ್ಜನೂ ಇದ್ದ… ಭಯಾನಕ ಘಟನೆ ಬಿಚ್ಚಿಟ್ಟ 6 ವರ್ಷದ ಬಾಲಕಿ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:1 × three =
Remember me
