ಕೊಪ್ಪಳ:ಆಗಸ್ಟ್​ 30ರಂದು ಕಾಂಗ್ರೆಸ್​ ಸರ್ಕಾರ ಗೃಹಲಕ್ಷ್ಮಿ ಯೋಜನೆಗೆ ಅದ್ಧೂರಿಯಾಗಿ ಚಾಲನೆ ನೀಡಿದೆ. ಈಗಾಗಲೇ ರಾಜ್ಯದ ಬಹುತೇಕ ಮಹಿಳೆಯರ ಬ್ಯಾಂಕ್​ ಖಾತೆಗೆ ಹಣ ಜಮೆ ಆಗಿದ್ದು, ಬಹಳ ಖುಷಿಯಾಗಿದ್ದಾರೆ. ಇದರ ನಡುವೆಯೇ ವೃದ್ಧೆಯೊಬ್ಬರು ತನಗೆ ಗೃಹಲಕ್ಷ್ಮೀ ಯೋಜನೆ ಹಣ ಬೇಡ ಎಂದು ನಯವಾಗಿ ತಿರಸ್ಕರಿಸುವ ಮೂಲಕ ಸ್ವಾಭಿಮಾನ ಮೆರೆದಿದ್ದಾರೆ.
ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ನಿಡಶೇಷಿ ಗ್ರಾಮದ ವಯೋವೃದ್ದೆ ಶಿವಮ್ಮ‌ ಸಜ್ಜನ್ ಎಂಬುವರು ಸ್ವಾಭಿಮಾನದ ಮಾತುಗಳನ್ನಾಡಿದ್ದಾರೆ. ದೇವರು ನನಗೆ ಎಲ್ಲವನ್ನೂ ಕರುಣಿಸಿದ್ದಾನೆ. ಇರುವ ಸವಲತ್ತಿನಲ್ಲೇ ಸಂತೃಪ್ತ ಜೀವನ ನಡೆಸುತ್ತಿದ್ದೇನೆ. ಹೀಗಾಗಿ ನನಗೆ ಸರ್ಕಾರದ ಗೃಹಲಕ್ಷ್ಮಿ 2 ಸಾವಿರ ರೂಪಾಯಿ ಬೇಡವೆಂದು ತಿರಸ್ಕರಿಸಿದರು.
ಈ ಹಿಂದೆ ತಾನು ಕೂಡಿಟ್ಟಿದ್ದ ಹಣವನ್ನೇ ಗ್ರಾಮದ ಕೆರೆ ಅಭಿವೃಧ್ಧಿಗೆ ನೀಡಿ ವೃದ್ಧೆ ಎಲ್ಲರಿಗೂ ಮಾದರಿಯಾಗಿದ್ದರು. ಸದ್ಯ ಮತ್ತೊಮ್ಮೆ ಮಾದರಿ ನಿರ್ಧಾರವನ್ನು ತೆಗದುಕೊಂಡಿದ್ದಾರೆ. ಅಜ್ಜಿಯ ಈ ನಿರ್ಧಾರಕ್ಕೆ ಇಡೀ ಗ್ರಾಮಸ್ಥರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಅತಿಯಾದ ಉಪ್ಪು ಸೇವನೆಯಿಂದ ಅಧಿಕ ರಕ್ತದೊತ್ತಡ ಮಾತ್ರವಲ್ಲ ಈ ಕಾಯಿಲೆಗಳೂ ಬರಬಹುದು!
ರಾಜ್ಯ ಸರ್ಕಾರದ ಗೃಹಲಕ್ಷ್ಮೀ ಯೋಜನೆಯು ಮನೆ ಯಜಮಾನಿಗೆ ಉಚಿತ ಹಣ ನೀಡುವ ಯೋಜನೆಯಾಗಿದೆ. ಕಾಂಗ್ರೆಸ್​ ಸರ್ಕಾರ ಅಧಿಕಾರಕ್ಕೆ ಬರೋ ಮುನ್ನ ಘೋಷಿಸಿದ್ದ 5 ಗ್ಯಾರಂಟಿ ಯೋಜನೆಗಳಲ್ಲಿ ಗೃಹಲಕ್ಷ್ಮೀ ಯೋಜನೆ ಕೂಡ ಒಂದು. ಈ ಯೋಜನೆ ಅಡಿಯಲ್ಲಿ ಪ್ರತಿ ಮನೆಯ ಯಜಮಾನಿಗೆ 2000 ರೂ. ನೀಡಲಾಗುತ್ತದೆ. ಒಂದೇ ಮನೆಯಲ್ಲಿ ಅತ್ತೆ-ಸೊಸೆ ಇದ್ದಲ್ಲೆ, ಮನೆಯ ಯಜಮಾನಿ ಯಾರು ಎಂಬುದನ್ನು ಅವರೇ ತೀರ್ಮಾನ ಮಾಡಿಕೊಳ್ಳಬೇಕು. ಈಗಾಗಲೇ 1.28 ಕೋಟಿ ಮಹಿಳೆಯರು ನೋಂದಣಿ ಮಾಡಿಕೊಂಡಿದ್ದು, ಇಂದು ಎಲ್ಲರ ಖಾತೆಗೆ ನೇರವಾಗಿ ಹಣ ವರ್ಗಾವಣೆ ಆಗಲಿದೆ.
ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಈಗಾಗಲೇ ಯುವಶಕ್ತಿ, ಅನ್ನಭಾಗ್ಯ, ಗೃಹಜ್ಯೋತಿ ಯೋಜನೆಗಳಿಗೆ ಅದ್ಧೂರಿ ಚಾಲನೆ ದೊರೆತಿದೆ. ಇಂದು ಗೃಹಲಕ್ಷ್ಮಿ ಯೋಜನೆಗೆ ಚಾಲನೆ ಸಿಕ್ಕಿದೆ. ಉಳಿದ ಯುವನಿಧಿ ಯೋಜನೆ ಶೀಘ್ರದಲ್ಲೇ ಜಾರಿಯಾಗಲಿದೆ ಎಂದು ಸರ್ಕಾರ ತಿಳಿಸಿದೆ.
ಮಾಜಿ ಸಿಎಂ ಎಚ್​​.ಡಿ.ಕುಮಾರಸ್ವಾಮಿ ಆಸ್ಪತ್ರೆಯಿಂದ ಡಿಸ್ಚಾರ್ಜ್​​

ಮಕ್ಕಳಾಗಿಲ್ಲ ಎಂಬ ಚಿಂತೆ: ಆಪರೇಷನ್​ಗೆಂದು ಬಂದಿದ್ದ ಅತಿಥಿ ಉಪನ್ಯಾಸಕಿ ದುರಂತ ಸಾವು, ವೈದ್ಯರ ನಿರ್ಲಕ್ಷ್ಯ ಆರೋಪ

ಅಮೆರಿಕದಲ್ಲಿ ಮೃತಪಟ್ಟ ವೃದ್ಧನ ಶವ ತರಲು ಕುಟುಂಬಸ್ಥರ ಪರದಾಟ: ನೆರವಿಗೆ ಬಂದ ಸಂಸದ ಮುನಿಸ್ವಾಮಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + 4 =
Remember me
